• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • 'ನೀರಜ್‌ ಚೋಪ್ರಾ ಜೊತೆ ರೂಮ್ ಶೇರಿಂಗ್ ಎಂದರೆ ನನಗೆ ಭಯ‘..! ಗೆಳೆಯ ತೇಜಸ್ವಿನ್ ಹೀಗೇಕೆ ಹೇಳಿದರು?

'ನೀರಜ್‌ ಚೋಪ್ರಾ ಜೊತೆ ರೂಮ್ ಶೇರಿಂಗ್ ಎಂದರೆ ನನಗೆ ಭಯ‘..! ಗೆಳೆಯ ತೇಜಸ್ವಿನ್ ಹೀಗೇಕೆ ಹೇಳಿದರು?

ನೀರಜ್ ಚೋಪ್ರಾ ಗೆಳೆಯ ತೇಜಸ್ವಿನ್

ನೀರಜ್ ಚೋಪ್ರಾ ಗೆಳೆಯ ತೇಜಸ್ವಿನ್

ನೀವು ಅವನ ಸ್ನೇಹಿತರಾಗಿದ್ದರೆ, ಆತನು ನಿಮ್ಮನ್ನು ಎಂದಿಗೂ ತಿರಸ್ಕರಿಸುವುದಿಲ್ಲ. ಆತ  ನಿಮ್ಮ ಜೊತೆ ಇರುತ್ತಾನೆ. ಅನೇಕ ಜನರು ಅವನಿಂದ ಹಣವನ್ನು ಪಡೆದಿದ್ದಾರೆ. ಆದರೆ ತಿರುಗಿ ಕೊಟ್ಟಿಲ್ಲ. ಆದರೂ ಆ ಬಗ್ಗೆ ನೀರಜ್​ ಎಂದೂ ಕೇಳಿಲ್ಲ ಎಂಬುದು ನನಗೆ ನೆನಪಿದೆ ಎಂದು ಗೆಳೆಯ ತೇಜಸ್ವಿನ್ ಹೇಳಿದರು.

ಮುಂದೆ ಓದಿ ...
 • Share this:

  ನಾನು ಇಂದು ಬೆಳಿಗ್ಗೆ ನಿದ್ರೆಗೆ ಜಾರಿದಾಗ, ಆಪ್ತ ಸ್ನೇಹಿತ ಮತ್ತು ಭಾರತೀಯ ಮಹಿಳಾ ಹಾಕಿ ತಂಡದ ವೈಜ್ಞಾನಿಕ ಸಲಹೆಗಾರ ವೇಯ್ನ್ ಲೊಂಬಾರ್ಡ್ ಅವರಿಂದ ನನಗೆ(ತೇಜಸ್ವಿನ್) ವೀಡಿಯೊ ಕರೆ ಬಂತು. ನಾನು ವೇಯ್ನ್ ಭಾಯ್ ಅವರ ಫೋನಿಗೆ ಉತ್ತರಿಸಿದೆ ಮತ್ತು ನಗುತ್ತಿರುವ ನೀರಜ್ ನ ಕುತ್ತಿಗೆಯಲ್ಲಿ ಚಿನ್ನದ ಪದಕವನ್ನು ನೋಡಿದೆ. ನಾನು ಇನ್ನೂ ಅರೆನಿದ್ರೆಯಲ್ಲಿದ್ದೆ ಮತ್ತು ಅರ್ಧ ಎಚ್ಚರವಾಗಿದ್ದೆ, ಮತ್ತು ಒಂದು ಕ್ಷಣ ಅದು ಕನಸು ಎಂದು ಭಾವಿಸಿದೆ. ನಂತರ ಆತುರದಲ್ಲಿ ನಾನು ಮುಖ ತೊಳೆಯಲು ಹೋದಾಗ "ಭಾಯ್ ತು ಸೋ ರಹಾ ಥಾ ನಾ?" (ನೀವು ಮಲಗಿದ್ದೀರಿ ಅಲ್ಲವೇ) ನೀರಜ್ ನನ್ನನ್ನು ಕೇಳಿದರು. "ಖಂಡಿತವಾಗಿಯೂ, ಬೆಳಗಿನ ಜಾವದ ನಿದ್ದೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ" ಎಂದು ನಾನು ಉತ್ತರಿಸಿದೆ. ನಂತರ ಅವರ ಕುತ್ತಿಗೆಯಲ್ಲಿ ಇದ್ದ ಪದಕವನ್ನು ನೋಡಿ ನಾನು ತುಂಬಾ ಆನಂದತುಂದಿಲನಾದೆ. ನಾನು ಭಾವನಾತ್ಮಕ ವ್ಯಕ್ತಿಯಲ್ಲದಿದ್ದರೂ, ನನ್ನ ಕಣ್ಣುಗಳಲ್ಲಿ ಕಣ್ಣೀರು ಇತ್ತು, ಮತ್ತು ನಾನು ಕಣ್ಣೀರನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದೆ. ಇದು ನೀರಜ್ ಗೆಳೆಯ ತೇಜಸ್ವಿನ್ ಅವರ ಭಾವನಾತ್ಮಕ ಮಾತು. ನೀರಜ್ ಅವರ ರೂಮ್‌ಮೇಟ್ಸ್ ಕೂಡ ಆಗಿರುವ ತೇಜಸ್ವಿನ್ ನೀರಜ್‌ರ ಪರಿಶ್ರಮ ಹಾಗೂ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಿದ್ದಾರೆ. ಅವರ ಮಾತುಗಳಲ್ಲಿಯೇ ನೀರಜ್ ಕುರಿತು ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ.


  ಅವರು ತುಂಬಾ ಭಿನ್ನ. ಅವರು ಭಾರತದ ಮೊದಲ ಅಥ್ಲೆಟಿಕ್ಸ್ ಪದಕವನ್ನು ಗೆದ್ದಿದ್ದಾರೆ, ಆದರೆ ಅವರು (ಜೋಹಾನ್ಸ್) ವೆರ್ಥರ್ ಬಗ್ಗೆ ನನಗೆ ವಿಷಾದವಿದೆ ಎಂದು ಹೇಳಿದರು. ನೀವು ಅವನ ಸ್ನೇಹಿತರಾಗಿದ್ದರೆ, ಆತನು ನಿಮ್ಮನ್ನು ಎಂದಿಗೂ ತಿರಸ್ಕರಿಸುವುದಿಲ್ಲ. ಆತ  ನಿಮ್ಮ ಜೊತೆ ಇರುತ್ತಾನೆ. ಅನೇಕ ಜನರು ಅವನಿಂದ ಹಣವನ್ನು ಪಡೆದಿದ್ದಾರೆ. ಆದರೆ ತಿರುಗಿ ಕೊಟ್ಟಿಲ್ಲ. ಆದರೂ ಆ ಬಗ್ಗೆ ನೀರಜ್​ ಎಂದೂ ಕೇಳಿಲ್ಲ ಎಂಬುದು ನನಗೆ ನೆನಪಿದೆ. ನಿಜ ಹೇಳಬೇಕೆಂದರೆ, ನೀರಜ್ ತುಂಬಾ ಒಳ್ಳೆಯ ವ್ಯಕ್ತಿತ್ವದವನು ಎಂದು ತೇಜಸ್ವಿನ್, ನೀರಜ್ ಅವರ ವ್ಯಕ್ತಿತ್ವದ ಕುರಿತು ಕೆಲವೊಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ.


  ಇದನ್ನೂ ಓದಿ:ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್​​ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಂಗಳೂರು ಚಲೋ

  ಸ್ಫೂರ್ತಿದಾಯಕ


  ನೀರಜ್ ಚಿನ್ನವನ್ನು ತೋರಿಸಿದ ಕ್ಷಣ, ನನ್ನ ಉತ್ಸಾಹ ಉಲ್ಬಣವಾಯಿತು ಮತ್ತು ನಾನು ನೆಲದ ಮೇಲೆ ಇಳಿದು 20 ಪುಶ್-ಅಪ್‌ಗಳನ್ನು ಮಾಡಿದೆ. ಪ್ಯಾರಿಸ್ 2024 ನಲ್ಲಿ ನೀರಜ್‌ ಮತ್ತೆ ಪದಕ ಗೆಲ್ಲುವ ಕನಸು ಕಣ್ಣು ಮುಂದೆ ಬಂತು. 2016 ರಲ್ಲಿ ಅವರ ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್ ಚಿನ್ನದ ಪದಕದ ನಂತರ, ನಾನು ನೀರಜ್‌ನೊಂದಿಗೆ ಬಳ್ಳಾರಿಯಲ್ಲಿರುವ ಜೆಎಸ್‌ಡಬ್ಲ್ಯೂ ನಲ್ಲಿ ವಾಕ್‌ಗೆ ಹೋಗಿದ್ದಾಗ ಅವರು ಎಲ್ಲಾ ಬಹುಮಾನದ ಹಣವನ್ನು ಏನು ಮಾಡಿದ್ದಾರೆ ಅಥವಾ ಅವರು ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆಯೇ ಎಂದು ನಾನು ಕೇಳಿದೆ. ಅವರು ಸಂಭಾಷಣೆಯಲ್ಲಿ ಆಸಕ್ತಿಯನ್ನು ತೋರುತ್ತಿರಲಿಲ್ಲ ಆಗ ನಾನು ಅವರನ್ನು “ನೀವೇನು ಮಾಡುತ್ತಿರುವಿರಿ? ಯಾಕೆ ಪ್ರತಿಕ್ರಿಯಿಸುತ್ತಿಲ್ಲ? " ಎಂದು ಕೇಳಿದಾಗ ನೀರಜ್ ಕೊಟ್ಟ ಉತ್ತರ ನನ್ನನ್ನು ನಿಬ್ಬೆರಗಾಗಿಸಿತ್ತು, “ನಿಮಗೆ ಗೊತ್ತಾ, ನಾನು ಜಾವಲಿನ್ ಎಸೆಯುವಾಗ ಎಡಗಾಲಿನ ಬದಲು ಬಲಕ್ಕೆ ಇಟ್ಟರೆ ನಾನು ಇನ್ನೊಂದು ಎರಡು ಮೀಟರ್‌ಗಳಷ್ಟು ದೂರ ಎಸೆಯಬಹುದು ಎಂದು ಹೇಳಿದ್ದರು . ಹಣ ಮತ್ತು ಮನ್ನಣೆ ಅವರಿಗೆ ಮುಖ್ಯವಲ್ಲ ಎಂದು ನಾನು ಆ ದಿನ ಅರಿತುಕೊಂಡೆ. ಅವರು ತನ್ನನ್ನು ತಾನು ಸುಧಾರಿಸಿಕೊಳ್ಳುವುದರ ಮೇಲೆ ಗುರಿ ಹೊಂದಿದ್ದಾರೆ ಎಂಬುದು ನನಗೆ ತಿಳಿಯಿತು ಹಾಗೂ ಅವರ ಆ ನಡೆ ನನಗೆ ಸ್ಫೂರ್ತಿದಾಯಕ ಎಂದು ತೇಜಸ್ವಿನ್ ತಿಳಿಸಿದ್ದಾರೆ. ವಿಶ್ವ ಜೂನಿಯರ್ ಪದಕವನ್ನು ಗೆದ್ದ ನಂತರ, ಅವರಿಗೆ ಇನ್‌ಸ್ಟಾಗ್ರಾಮ್ ನಲ್ಲಿ ಅದು ವಿಶೇಷವಾಗಿ ಮಹಿಳೆಯರು ಅವರ ಅಭಿಮಾನಿಗಳಾದರು ಎಂದು ತೇಜಸ್ವಿನ್ ಮಧ್ಯಮಗಳ ಜೊತೆಗೆ ಹಂಚಿಕೊಂಡರು ಹಾಗೂ ನೀರಜ್‌ ಯಾವುದೇ ಸಮಾಜಿಕ ಮಧ್ಯಮಗಳ ಕುರಿತು ತಲೆಕೆಡಿಸಿಕೊಳ್ಳುತ್ತಿರಲ್ಲಿ ಎಂದು ಹೇಳಿದರು.


  ಜೀವನಕ್ಕಾಗಿ ಸ್ನೇಹಿತರು


  ನಾವು 15 ದಿನಗಳ ಕಾಲ ಬೆಂಗಳೂರಿನಲ್ಲಿ ಒಂದು ಕೊಠಡಿಯಲ್ಲಿ ಇದ್ದೆವು. ಪ್ರಾಮಾಣಿಕವಾಗಿ ಹೇಳುವುದಾದರೆ, ಅವನು ಈಗ ಒಲಿಂಪಿಕ್ ಚಾಂಪಿಯನ್ ಆಗಿರಬಹುದು, ಆದರೆ ನಾನು ಅವನೊಂದಿಗೆ ಒಂದೇ ಕೋಣೆಯಲ್ಲಿ ವಾಸಿಸಲು ಇನ್ನೂ ಹೆದರುತ್ತೇನೆ. ಅವನು ಸ್ವಲ್ಪ ಗೊಂದಲಮಯ. ನೀವು ಅವನ ಕೋಣೆಗೆ ಪ್ರವೇಶಿಸಿದರೆ, ಅವನ ಬಟ್ಟೆಗಳು ಹಾಸಿಗೆಯ ಮೇಲೆ ಬಿದಿರುವುದನ್ನು ಮತ್ತು ಕೋಣೆಯ ಮಧ್ಯದಲ್ಲಿ ಅವನ ಸಾಕ್ಸ್ ಅನ್ನು ನೀವು ಕಾಣಬಹುದು. ನಾನು ಅವನಿಗೆ ಈ ಕುರಿತು ಏನನ್ನೂ ಹೇಳಲು ಬಸುತ್ತಿರಲ್ಲಿಲ, ಏಕೆಂದರೆ ನೀರಜ್‌ನೊಂದಿಗೆ ರೂಮ್‌ ಹಂಚಿಕೊಳ್ಳುವುದು ನನಗೆ ದೊಡ್ಡ ವಿಷಯವಾಗಿದೆ. ನಾವು ಫ್ರೈಡ್ ರೈಸ್ ಮತ್ತು ಮಟ್ಕಾ ಕುಲ್ಫಿಯನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಿದ್ದೇವು. ನಮ್ಮ ಏಕೈಕ ಮಾತು ವಿಡಿಯೋ ಗೇಮ್‌ಗಳ ಬಗ್ಗೆ ಮಾತ್ರ. ಆ ಸಮಯದಲ್ಲಿ ಅವರು ಪಬ್ಜಿ ಆಟವನ್ನು ಆಡುತ್ತಿದ್ದಾರು. ತೇಜಸ್ವಿನ್ ತಮ್ಮ ಅವರ ಗೆಳೆತನವನ್ನು ಕುರಿತು ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ:Explained: ಒಬಿಸಿ ಪಟ್ಟಿಯಲ್ಲಿ ಬದಲಾವಣೆ ನಡೆಸಲು ಕಾರಣವೇನು? ಮಸೂದೆ ಅಂಗೀಕಾರವಾದರೆ ನಡೆಯುವ ಬದಲಾವಣೆಗಳೇನು?

  ನಾವು ಅರ್ಹತಾ ಸುತ್ತಿನ ಮೊದಲು ಸಂಭಾಷಣೆ ನಡೆಸಿದ್ದೆವು ಮತ್ತು ಅವರ ದೇಹವು ಹೇಗೆ ಸ್ಪಂದಿಸುತ್ತಿದೆ ಎಂದು ಅವರು ನನಗೆ ಹೇಳಿದರು. ಅವರು ಪದಕ ಗೆಲ್ಲುತ್ತಾರೆ ಎಂಬುದು ನನಗೆ ಖಚಿತವಾಗಿ ತಿಳಿದಿತ್ತು. ನಾಲ್ಕನೇ ಸುತ್ತಿನ ನಂತರ, ನಾನು ನನ್ನ ಕಾಲುಗಳು ನಡುಗುತ್ತಿದ್ದವು. ನಾನು ಪಿಟಿ ಉಷಾ ಮಾಮ್ ಅಥವಾ (ಜಿಎಸ್) ರಾಂಧವ ಸರ್ ಅವರನ್ನು ನೋಡಿಲ್ಲ ಆದರೆ ನಾನು ನೀರಜ್‌ನನ್ನು ನೋಡಿದ್ದೇನೆ ಅವರು ಕೂಡ ಪಿಟಿ ಉಷಾ ಮಾಮ್ ಅಥವಾ (ಜಿಎಸ್) ರಾಂಧವ ಸರ್‌ನಂತೆ ಸಾಧನೆಯ ಗುರಿಯನ್ನು ಹೊಂದಿದ್ದಾರೆ ಎಂದು ತೇಜಸ್ವಿನ್ ಹೇಳಿದರು.
  2015 ರಲ್ಲಿ ನಾನು ನೀರಜ್ ನನ್ನು ಮೊದಲ ಬಾರಿಗೆ ಔಷಧ ಪರೀಕ್ಷಾ ಕೊಠಡಿಯಲ್ಲಿ ಭೇಟಿಯಾದೆ. ಆ ಸಮಯದಲ್ಲಿ ಆತ ಯಾರೆಂದು ನನಗೆ ತಿಳಿದಿರಲಿಲ್ಲ. ನಾನು ಯೋಚಿಸುತ್ತಿದ್ದೆ, ಈ ಉದ್ದ ಕೂದಲಿನ ವ್ಯಕ್ತಿ ಯಾರು? ನಾವು ನಂತರ ಮಾತನಾಡಿ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದೆವು. 2016 ರ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಸಂಬಂಧ ಗಟ್ಟಿಯಾಯಿತು ಎಂದು ತಮ್ಮ ಮೊದಲ ಭೇಟಿಯನ್ನು ಕುರಿತು ತೇಜಸ್ವಿನ್ ತಮ್ಮ ಅನುಭವನ್ನು ಹಂಚಿಕೊಂಡರು .

  Published by:Latha CG
  First published: