Mohammed Shami: ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ ಪತ್ನಿ, ಫ್ಯಾಮಿಲಿ ಫೈಟ್‌ಗೆ ಮತ್ತೆ ಸುದ್ದಿಯಾದ ಟೀಂ ಇಂಡಿಯಾ ಬೌಲರ್

ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್​ ಮೊಹಮ್ಮದ್ ಶಮಿ ವಿರುದ್ಧ ಇದೀಗ ಮತ್ತೊಮ್ಮೆ ಪತ್ನಿ ಹಸಿನ್ ಜಹಾನ್ ಗಂಭೀರ ಆರೋಪ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ (Mohammed Shami) ಸದ್ಯ ಟೀಂ ಇಂಡಿಯಾದ (Team India) ಪ್ರಮುಖ ಬೌಲರ್​ ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ಭಾರತ ತಂಡದಿಂದ ಕೊಂಚ ದೂರವಿರುವ ಇವರನ್ನು ಮತ್ತೆ ಟೀ ಇಂಡಿಯಾದ ಟಿ20 ಕ್ರಿಕೆಟ್​ಗೆ ಕರೆತರಲು BCCI ಚಿಂತಿಸುತ್ತಿದೆ. ಮುಂಬರುವ ಟಿ20 ವಿಶ್ವಕಪ್​ಗಾಗಿ (T20 World Cup) ಇವರು ತಂಡವನ್ನು ಸೇರಿಕೊಂಡರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇವುಗಳ ನಡುವೆ ಇದೀಗ ಶಮಿ ಬೇರೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ. ಹೌದು, ಮೊಹಮ್ಮದ್ ಶಮಿ ವೈಯಕ್ತಿಕ ಜೀವನ ಅಷ್ಟಾಗಿ ಸರಿಯಿಲ್ಲ. ಈಗಾಗಲೇ ಶಮಿ ಅವರ ವಿರುದ್ಧ ಅವರ ಪತ್ನಿ ಹಸಿನ್ ಜಹಾನ್ (Hasin Jahan ) ದೌರ್ಜನ್ಯದ ಆರೋಪ ಹೊರಿಸಿದ್ದು, ಕೋರ್ಟ್​ ಮೆಚ್ಚಿಲೇರಿದ್ದಾರೆ.

ಹೀಗಾಗಿ ಈ ದೌರ್ಜನ್ಯದ ಪ್ರಕರಣ ಸದ್ಯ ನ್ಯಾಯಾಲಯದ ಅಂಗಳದಲ್ಲಿದೆ. ಆದರೆ ಇದರ ನಡುವೆ ಹಸಿನ್ ಜಹಾನ್ ಮತ್ತೊಮ್ಮೆ ಶಮಿ ವಿರುದ್ಧ ಗಂಭಿರ ಆರೋಪ ಮಾಡಿದ್ದು, ಮತ್ತೆ ಇವರಿಬ್ಬರ ವೈಯಕ್ತಿಕ ಜೀವನದ ಸುದ್ದಿ ಮುನ್ನೆಲೆಗೆ ಬಂದಿದೆ.

ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ ಪತ್ನಿ:

ಹೌದು, ಮೊಹಮ್ಮದ್​ ಶಮಿ ಟೀಂ ಇಂಡಿಯಾದ ವೇಗದ ಬೌಲರ್​ಗಳಲ್ಲಿ ಪ್ರಮುಖರು. ಆದರೆ ಅವರ ವೈಯಕ್ತಿಕ ಜೀವನ ಮೊದಲಿನಿಂದಲೇ ಅಷ್ಟಾಗಿ ಸರಿಯಾಗಿರಲಿಲ್ಲ ಎಂದರೂ ತಪ್ಪಾಗಲಾರದು. ಅನೇಕ ಏರಿಳಿಗಳು ಅವರ ಜೀವನದಲ್ಲಿ ಕಂಡಿದ್ದವು. ಈಗಾಗಲೇ ದೌರ್ಜನ್ಯದ ಪ್ರಕರಣವೊಂದು ಶಮಿ ವಿರುದ್ಧ ಅವರ ಪತ್ನಿ ಮಾಡಿದ್ದು, ಅದು ನ್ಯಾಯಾಲಯದಲ್ಲಿದೆ. ಆದರೆ ಇದರ ನಡುವೆ ಮತ್ತೊಂದು ಹೊಸ ಆರೋಪ ಕೇಳಿಬರುತ್ತಿದೆ. ಮೊಹಮ್ಮದ್ ಶಮಿ ಮಗಳ ಜೊತೆ ಸರಿಯಾಗಿ ಮಾತನಾಡುತ್ತಿಲ್ಲ. ಅಲ್ಲದೇ ಕೋಟಿಗಟ್ಟಲೇ ದುಡಿಯುವ ಶಮಿ ಮಗಳಿಗೆ ಕಳಪಡೆ ಗುಣಮಟ್ಟದ ಬಟ್ಟೆಗಳನ್ನು ನಿಡುತ್ತಾರೆ ಎಂದು ಅವರ ಪತ್ನಿ ಹಸಿನ್ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Asia Cup 2022: ಹೊಸ ಸ್ವರೂಪದಲ್ಲಿ ಏಷ್ಯಾ ಕಪ್ ಟೂರ್ನಿ, ಏನೆಲ್ಲಾ ಬದಲಾವಣೆ ಆಗಿದೆ ನೋಡಿ

ಕಳಪೆ ಗುಣಮಟ್ಟದ ಬಟ್ಟೆಯನ್ನು ನೀಡುತ್ತಾರೆ:

ಇನ್ನು, ಬಂಗಾಳಿ ಚಿತ್ರಗಳಲ್ಲಿ ನಟಿಸುವ ಶಮಿ ಅವರ ಪತ್ನಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುವಾಗ, ‘ನನ್ನ ಮಗಳಿಗೆ ತಂದೆಯ ಪ್ರೀತಿ (ಮೊಹಮ್ಮದ್ ಶಮಿ) ಅವಶ್ಯಕತೆಯಿದೆ. ಮಗಳು ಶಮಿ ಕುರಿತು ಪದೇ ಪದೇ ಕೇಳುತ್ತಿರುತ್ತಾಳೆ. ಆದರೆ ಅವರು ಮಾತ್ರ ಇದರ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಇವುಗಳನ್ನು ಹೊರತುಪಡಿಸಿ ಶಮಿ ತಮ್ಮ ಮಗಳ ಜೊತೆ ಚೆನ್ನಾಗಿ ಮಾತೂ ಸಹ ಆಡುತ್ತಿಲ್ಲ. ಈವರೆಗೂ ಅವರು ಮಗಳಿಗೆ ಯಾವುದೇ ಉಡುಗರೆ ನೀಡಿಲ್ಲ. ಅಲ್ಲದೇ ಅವಳೇ ಸ್ವತಃ ಉಡುಗರೆ ಕೇಳಿದಾಗ ಶಮಿ ರಸ್ತೆ ಪಕ್ಕದಲ್ಲಿ ಸಿಗುವ 100 ರೂಪಾಯಿಯ ಬಟ್ಟೆಯನ್ನು ಉಡುಗರೆಯಾಗಿ ಕಳುಹಿಸಿದ್ದರು‘ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: IND vs ZIM: ಮೊದಲು ಕ್ಯಾಪ್ಟನ್, ಈಗ ಕೋಚ್! ಈ ಕೊನೆಯ ಕ್ಷಣದ ಬದಲಾವಣೆಗಳು ಏಕೆ?

ಇದಲ್ಲದೇ ಮುಂದೆ ಮಾತಾನಾಡಿ, ‘ಕೋಟ್ಯಾಂತರ ರುಪಾಯಿಗಳನ್ನು ದುಡಿಯುವ ಅವರು ಮಗಳಿಗೆ ಇಷ್ಟು ಕಳಪಡೆ ಬಟ್ಟೆಯನ್ನು ನೀಡಿದ್ದಾರೆ. ಕೇವಲ ಅವರ ಶಾಪಿಂಗ್​ಗೆ ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಖರ್ಚು ಮಾಡುವ ಅವರು, ತಮ್ಮ ಸ್ವಂತ ಮಗಳಿಗೆ 100 ರೂಪಾಯಿ ಬಟ್ಟೆ ನೀಡಿದ್ದಾರೆ. ತನ್ನ ಕೆಲಸಗಾರರ ಮಕ್ಕಳಿಗೂ ಇಂತಹ ಕಳಪೆ ಗುಣಮಟ್ಟದ ಬಟ್ಟೆಗಳನ್ನು ನೀಡುವುದಿಲ್ಲ‘ ಎಂದು ಹೇಳಿದ್ದಾರೆ. ಮೊಹಮ್ಮದ್ ಶಮಿ ಮತ್ತು ಪತ್ನಿ ಹಸಿನ್ ಜಹಾನ್ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
Published by:shrikrishna bhat
First published: