Mohammed Shami: ಶಮಿ ವಿರುದ್ಧ ಗುಡುಗಿದ ಪತ್ನಿ! ಅಪರಾಧಿಗಳಿಂದ ಈ ಜಯ ತಂದುಕೊಡಲು ಸಾಧ್ಯವಿಲ್ಲ ಎಂದಿದ್ಯಾಕೆ?

Mohammed Shami: ಹಸೀನ್ ಜಹಾನ್ ಒಂದು ಕಡೆ ಹಾರ್ದಿಕ್ ಪಾಂಡ್ಯವನ್ನು ಹೊಗಳಿದ್ದಾರೆ ಮತ್ತು ಇನ್ನೊಂದು ಕಡೆ ಮೊಹಮ್ಮದ್ ಶಮಿಯನ್ನು ಗೇಲಿ ಮಾಡಿದ್ದಾರೆ. ಆದರೆ, ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ (Mohammed Shami) ಸದ್ಯ ಟೀಂ ಇಂಡಿಯಾದ (Team India) ಪ್ರಮುಖ ಬೌಲರ್​ ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ಭಾರತ ತಂಡದಿಂದ ಕೊಂಚ ದೂರವಿರುವ ಇವರನ್ನು ಮತ್ತೆ ಭಾರತ ತಂಡಕ್ಕೆ ಟಿ20 ಕ್ರಿಕೆಟ್​ಗೆ ಕರೆತರಲು BCCI ಚಿಂತಿಸುತ್ತಿದೆ. ಇದರ ನಡುವೆ ಶಮಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಅವರ ಪತ್ನಿ ಹಸಿನ್ ಜಹಾನ್ (Hasin Jahan) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.  ಅವರು ಆಗಾಗ್ಗೆ ತನ್ನ ಡ್ಯಾನ್ಸ್ ವಿಡಿಯೋಗಳು ಮತ್ತು ರೀಲ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಹಸಿನ್ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ ಶುಭಕೋರಿದ್ದಾರೆ. ಆದರೆ ಪರೋಕ್ಷವಾಗಿ ಶಮಿ ಅವರನ್ನು ಗೇಲಿ ಮಾಡಿದ್ದಾರೆ.

ಟೀಂ ಇಂಡಿಯಾವನ್ನು ಹೊಗಳಿ ಪತಿಯನ್ನು ತೆಗಳಿದ ಹಸಿನ್​:

ಇತ್ತೀಚೆಗೆ ಏಷ್ಯಾಕಪ್ 2022ರಲ್ಲಿ ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿದಾಗ, ಹಸಿನ್ ಜಹಾನ್ ಭಾರತ ತಂಡವನ್ನು ಅಭಿನಂದಿಸಿ ಪೋಸ್ಟ್ ಮಾಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಈ ಪೋಸ್ಟ್‌ನಲ್ಲಿ, ಹಸೀನ್ ಜಹಾನ್ ಒಂದು ಕಡೆ ಹಾರ್ದಿಕ್ ಪಾಂಡ್ಯರನ್ನು ಹೊಗಳಿದ್ದಾರೆ ಮತ್ತು ಇನ್ನೊಂದು ಕಡೆ ಮೊಹಮ್ಮದ್ ಶಮಿ ಅವರನ್ನು ಗೇಲಿ ಮಾಡಿದ್ದಾರೆ. ಆದರೆ, ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.


ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿರುವ ಹಸಿನ್​ ಜಹಾನ್, ‘ಅಭಿನಂದನೆಗಳು. ಅದ್ಭುತ ಗೆಲುವು. ದೇಶವನ್ನು ಗೆಲ್ಲುವಂತೆ ಮಾಡಿದ ನಮ್ಮ ಹುಲಿಗಳಿಗೆ ತುಂಬಾ ಧನ್ಯವಾದಗಳು. ಇದು ಆಗಬೇಕಿತ್ತು, ದೇಶದ ಸ್ಥಾನಮಾನ, ದೇಶದ ಘನತೆ ಪ್ರಾಮಾಣಿಕ, ದೇಶಭಕ್ತರಿಂದ ಮಾತ್ರ ಉಳಿಯುತ್ತದೆಯೇ ಹೊರತು ಅಪರಾಧಿಗಳಿಂದಲ್ಲ‘ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IND vs HK Asia Cup 2022: ಪಂದ್ಯ ಸೋತರೂ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದ ಹಾಂಗ್​ಕಾಂಗ್​ ಉಪನಾಯಕ, ಮೈದಾನದಲ್ಲಿಯೇ ಗೆಳತಿಗೆ ಪ್ರಪೋಸ್​ ಮಾಡಿದ ಕ್ರಿಕೆಟಿಗ

ಈ ಫೋಸ್ಟ್ ಮೂಲಕ ಹಸಿನ್​ ಪೋರಕ್ಷವಾಗಿ ಮೊಹಮ್ಮದ್​ ಶಮಿ ಅವರನ್ನು ಗೇಲಿ ಮಾಡಿದ್ದಾರೆ. ಶಮಿ ಅವರನ್ನು ಅಪರಾಧಿಗಳು ಎಂಬ ರೀತಿಯಲ್ಲಿ ಹೇಳಿದ್ದು, ಪೋಸ್ಟ್ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಶಮಿ ಭಾರತಕ್ಕೆ ಮ್ಯಾಚ್ ವಿನ್ನರ್ ಎಂದು ಹಲವು ಬಾರಿ ಸಾಬೀತು ಮಾಡಿದ್ದಾರೆ. ಅವರು ದೇಶಕ್ಕಾಗಿ ಆಡುತ್ತಾರೆ, ಅವರನ್ನು ಅವಮಾನಿಸುವುದು ಸರಿಯಲ್ಲ ಎಂದು ಹೇಳಿದ್ದು, ನೇರವಾಗಿ ಹೆಸರನ್ನು ಹೇಳಿ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್​ ಮಾಡಿದ್ದಾರೆ.

ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಪತ್ನಿ:

ಬಂಗಾಳಿ ಚಿತ್ರಗಳಲ್ಲಿ ನಟಿಸುವ ಶಮಿ ಅವರ ಪತ್ನಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುವಾಗ, ‘ನನ್ನ ಮಗಳಿಗೆ ತಂದೆಯ ಪ್ರೀತಿ (ಮೊಹಮ್ಮದ್ ಶಮಿ) ಅವಶ್ಯಕತೆಯಿದೆ. ಮಗಳು ಶಮಿ ಕುರಿತು ಪದೇ ಪದೇ ಕೇಳುತ್ತಿರುತ್ತಾಳೆ. ಆದರೆ ಅವರು ಮಾತ್ರ ಇದರ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಅವರು ಮಗಳಿಗೆ ಇಷ್ಟು ಕಳಪೆ ಬಟ್ಟೆಯನ್ನು ನೀಡಿದ್ದಾರೆ. ಕೇವಲ ಅವರ ಶಾಪಿಂಗ್​ಗೆ ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಖರ್ಚು ಮಾಡುವ ಅವರು, ತಮ್ಮ ಸ್ವಂತ ಮಗಳಿಗೆ 100 ರೂಪಾಯಿ ಬಟ್ಟೆ ನೀಡಿದ್ದಾರೆ. ತನ್ನ ಕೆಲಸಗಾರರ ಮಕ್ಕಳಿಗೂ ಇಂತಹ ಕಳಪೆ ಗುಣಮಟ್ಟದ ಬಟ್ಟೆಗಳನ್ನು ನೀಡುವುದಿಲ್ಲ‘ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ ಸೂಪರ್ 4​ ವೇಳಾಪಟ್ಟಿ, ಮತ್ತೊಮ್ಮೆ ಭಾರತ-ಪಾಕ್ ಹಣಾಹಣಿಗೆ ಡೇಟ್​ ಫಿಕ್ಸ್?

ಸೂಪರ್​ 4 ಹಂತಕ್ಕೆ ಭಾರತ:

ಏಷ್ಯಾ ಕಪ್ 2022 ರಲ್ಲಿ, ಭಾರತ ತನ್ನ ಮೊದಲ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್ 4 ಹಂತಕ್ಕೆ ತಲುಪಿದೆ. ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಇದಾದ ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಹಾಂಗ್​ ಕಾಂಗ್​ ತಂಡದ ವಿರುದ್ಧ 40 ರನ್​ಗಳಿಂದ ಗೆದ್ದಿದೆ.
Published by:shrikrishna bhat
First published: