• Home
  • »
  • News
  • »
  • sports
  • »
  • Cricket Updates: ಧೋನಿ ಇದ್ದ ಸಮಯದಲ್ಲಿ ಭಾರತ ತನ್ನ ಆಟದ ವಿಧಾನವನ್ನೇ ಬದಲಿಸಿತ್ತು - ಶಾಹಿದ್ ಅಫ್ರಿದಿ

Cricket Updates: ಧೋನಿ ಇದ್ದ ಸಮಯದಲ್ಲಿ ಭಾರತ ತನ್ನ ಆಟದ ವಿಧಾನವನ್ನೇ ಬದಲಿಸಿತ್ತು - ಶಾಹಿದ್ ಅಫ್ರಿದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Dhoni: ಕಟಿ ಬದ್ಧ ವೈರಿ ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಪಂದ್ಯವಂತೂ ಎಷ್ಟೊಂದು ರೋಚಕಮಯವಾಗಿರುತ್ತದೆ ಎಂದರೆ ವಿಶ್ವದ ಎಲ್ಲ ಕ್ರಿಕೆಟ್ ದೇಶಗಳೂ ಸಹ ಕಾತುರದಿಂದ ನೋಡುತ್ತವೆ. ಹಿಂದೊಮ್ಮೆ ವಿಶ್ವಕಪ್ ಸಮಯದಲ್ಲಿ ಭಾರತ ತನ್ನ ವೈರಿ ಪಾಕಿಸ್ತಾನವನ್ನು ಕ್ರಿಕೆಟ್ ಕ್ರೀಡೆಯ ಹಲವಾರು ಪಂದ್ಯಗಳಲ್ಲಿ ಮಣ್ಣು ಮುಕ್ಕಿಸಿದೆ.

ಮುಂದೆ ಓದಿ ...
  • Share this:

ಕ್ರಿಕೆಟ್ (Cricket) ಎಂದರೆ ಭಾರತದಲ್ಲಿ ಕೇಳಬೇಕೆ? ಅದು ಸಹ ಒಂದು ಧರ್ಮವಿದ್ದಂತೆಯೇ ಸ್ಥಿತಿ ಇಲ್ಲಿದೆ. ಅದರಲ್ಲೂ ವಿಶೇಷವಾಗಿ ಕಟಿ ಬದ್ಧ ವೈರಿ ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಪಂದ್ಯವಂತೂ ಎಷ್ಟೊಂದು ರೋಚಕಮಯವಾಗಿರುತ್ತದೆ ಎಂದರೆ ವಿಶ್ವದ ಎಲ್ಲ ಕ್ರಿಕೆಟ್ ದೇಶಗಳೂ ಸಹ ಕಾತುರದಿಂದ ನೋಡುತ್ತವೆ. ಹಿಂದೊಮ್ಮೆ ವಿಶ್ವಕಪ್ ಸಮಯದಲ್ಲಿ ಭಾರತ ತನ್ನ ವೈರಿ ಪಾಕಿಸ್ತಾನವನ್ನು ಕ್ರಿಕೆಟ್ ಕ್ರೀಡೆಯ ಹಲವಾರು ಪಂದ್ಯಗಳಲ್ಲಿ ಮಣ್ಣು ಮುಕ್ಕಿಸಿದೆ. ಒಂದೊಮ್ಮೆ ಭಾರತದ ಶಕ್ತಿ ಹೇಗಿತ್ತೆಂದರೆ ಪಾಕಿಸ್ತಾನವನ್ನು ಅದು ಆಡುತ್ತಿದ್ದ ಬಹುತೇಕ ಎಲ್ಲ ಪಂದ್ಯಗಳಲ್ಲೂ ಸೋಲಿಸಿತ್ತು. ಈ ಇಬ್ಬರು ಬದ್ಧ ವೈರಿಗಳ ನಡುವಿನ ಪಂದ್ಯದಲ್ಲಿ ಭಾರತದ್ದೇ (India) ತೂಕ ಹೆಚ್ಚಾಗಿತ್ತು. ಆದರೆ, ಈಗ ಸ್ಥಿತಿ ಕೊಂಚ ಬದಲಾಗಿದೆ, ಅದರಲ್ಲೂ ಕಳೆದ ಒಂದು ವರ್ಷದಲ್ಲಿ.


ಪಾಕಿಸ್ತಾನವೂ ಸಹ ಒಂದೆರಡು ಪಂದ್ಯಗಳಲ್ಲಿ ಭಾರತದ ಮೇಲೆ ಜಯ ಸಾಧಿಸಿದ್ದು ಪಾಕಿಸ್ತಾನವನ್ನು ಮುನ್ನಡೆಸುತ್ತಿರುವ ಬಾಬರ್ ಆಜಮ್ ಅವರ ವಿಧಾನವೇ ಈ ರೀತಿ ಪಾಕಿಸ್ತಾನ ಬದಲಾಗಲು ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಪಾಕಿಸ್ತಾನದ ಮಾಜಿ ಸ್ಟಾರ್ ಕ್ರಿಕೆಟಿಗ ಶಾಹಿದ್ ಅಫ್ರಿದಿ.


ಕಳೆದ ಅಕ್ಟೋಬರ್​ವರೆಗೂ   ಪಾಕಿಸ್ತಾನ ಎಂದಿಗೂ ಭಾರತವನ್ನು ಸೋಲಿಸಲು ಸಫಲವೇ ಆಗಿರಲಿಲ್ಲ. ಅಂದರೆ ಆ ಸಮಯದಲ್ಲಿ ಅದು ಭಾರತದೊಂದಿಗೆ ಆಡಿದ್ದ 7 ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಾಗಲಿ, 5 ಟಿ20 ಪಂದ್ಯಗಳಲ್ಲಾಗಲಿ ಭಾರತವನ್ನು ಸೋಲಿಸಿಯೇ ಇರಲಿಲ್ಲ.


ಆದರೆ, 2021ರ ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅತಿ ದೀರ್ಘ ಸಮಯದ ನಂತರ ಪಾಕಿಸ್ತಾನ ಮೊದಲ ಬಾರಿಗೆ ಭಾರತದ ಮೇಲೆ ಜಯ ದಾಖಲಿಸಿತು. ಅದಾದ ನಂತರ ಕಳೆದ ಒಂದು ವರ್ಷದಲ್ಲಿ ಇನ್ನೊಮ್ಮೆ ಪಾಕಿಸ್ತಾನ ಭಾರತದ ಮೇಲೆ ಜಯ ದಾಖಲಿಸಿದೆ, ಅಂದರೆ 2022ರ ಏಷಿಯಾ ಕಪ್ಪಿನ ಸಂದರ್ಭದಲ್ಲೂ ಒಮ್ಮೆ ಪಾಕಿಸ್ತಾನ ಭಾರತದ ಮೇಲೆ ಜಯ ದಾಖಲಿಸಿದೆ.


ಇದನ್ನೂ ಓದಿ: ಇಂದು ಭಾರತ-ಆಫ್ರಿಕಾ ಫೈನಲ್​ ಫೈಟ್​, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11


ಭಾರತ-ಪಾಕಿಸ್ತಾನ ಕ್ರಿಕೆಟ್ ಗೆ ಸಂಬಂಧಿಸಿದಂತೆ ಇತ್ತೀಚಿಗಷ್ಟೆ ಅಫ್ರಿದಿ ಸಮಾ ಟಿವಿ ಮಾಧ್ಯಮದೊಂದಿಗೆ ಮಾತನಾಡಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಹೇಳುವಂತೆ, ಧೋನಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದ ಸಂದರ್ಭದಲ್ಲಿ ಭಾರತವು ಪಾಕಿಸ್ತಾನದೊಂದಿಗೆ ತನ್ನ ವಿಧಾನವನ್ನೇ ಬದಲಿಸಿತ್ತು. ಒಂದರ ಮೇಲೊಂದರಂತೆ ಪಡೆದಿದ್ದ ಜಯದಿಂದ ಭಾರತವು ಪಾಕಿಸ್ತಾನವನ್ನು ನಿರ್ಲಕ್ಷಿಸಿ ಬದಿಗಿರಿಸಿತ್ತು. ತನ್ನ ಸಮಾನ ಎದುರಾಳಿಗಳೆಂದರೆ ಅದು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂತಾದವುಗಳಷ್ಟೆ ಎಂದು ಭಾರತ ವರ್ತಿಸುತ್ತಿತ್ತು.


ಆದರೆ, ಇದೀಗ ಮತ್ತೆ ಪರಿಸ್ಥಿತಿ ಬದಲಾಗುತ್ತಿದ್ದು ಪಾಕಿಸ್ತಾನವು ಪಂದ್ಯಕ್ಕೆ ಸಂಬಂಧಿಸಿದಂತೆ ತನ್ನ ವರ್ತನೆ ಹಾಗೂ ವಿಧಾನವನ್ನು ಬದಲಾಯಿಸಿಕೊಳ್ಳುತ್ತಿದೆ ಎನ್ನುತ್ತಾರೆ ಅಫ್ರಿದಿ. ಈ ಸಂದರ್ಭದಲ್ಲಿ ಅವರು, "ನೀವು ಹಿಂದಿನ ಭಾರತ-ಪಾಕಿಸ್ತಾನ ಪಂದ್ಯ ನೋಡಿ, ಅದೊಂದು ಹೈ ಆಕ್ಟೇನ್ ಪಂದ್ಯವಾಗಿರುತ್ತಿತ್ತು, ಆದರೆ ಧೋನಿ ಭಾರತದ ನಾಯಕ ಆದ ನಂತರ ಭಾರತದ ವಿಧಾನವನ್ನೇ ಬದಲಿಸಿದರು, ಪಾಕಿಸ್ತಾನವನ್ನು ಬದಿಯಲ್ಲಿರಿಸಿದರು, ಒಂದೊಮ್ಮೆ ಆವೇಶದಿಂದ ಕೂಡಿ ರೋಚಕವಾಗಿರುತ್ತಿದ್ದ ಭಾರತ-ಪಾಕಿಸ್ತಾನ ಪಂದ್ಯವನ್ನು ಸಾಧಾರಣ ಮಟ್ಟಕ್ಕೆ ಪರಿವರ್ತಿಸಿದರು. ಆದರೆ, ಈಗ ಪರಿಸ್ಥಿತಿ ಮತ್ತೆ ಸುಧಾರಿಸುತ್ತಿದೆ, ಮತ್ತೆ ಪಾಕಿಸ್ತಾನ ಏರುತ್ತಿದೆ" ಎಂದು ಹೇಳಿದರು.


ನಿಜಕ್ಕೂ ಬಲು ಹಿಂದಿನಿಂದಲೂ ಕ್ರಿಕೆಟ್ ಅಂದರೆ ಭಾರತ-ಪಾಕಿಸ್ತಾನ ಪಂದ್ಯಗಳನ್ನೇ ಎಲ್ಲರೂ ನಿಟ್ಟುಸಿರಿನಿಂದ ನೋಡುತ್ತಿದ್ದರು. ಈ ಎರಡು ರಾಷ್ಟ್ರಗಳು ಮೈದಾನದಲ್ಲಿ ಸೆಣೆಸುತ್ತಿವೆ ಅಂದರೆ ಸಾಕು, ಅದೆಷ್ಟೋ ಜನರು ಕಚೇರಿಗೆ ಚಕ್ಕರ್ ಹಾಕಿ, ಯುವಕರು ಕಾಲೇಜುಗಳನ್ನು ಬಂಕ್ ಮಾಡಿ ಅಷ್ಟೇ ಅಲ್ಲದೆ ಮನೆ ಗೃಹಿಣಿಯರೂ ಸಹ ಕೆಲಸ ಕಾರ್ಯಗಳನ್ನು ಪೋಸ್ಟ್ ಪೋನ್ ಮಾಡಿ ಪಂದ್ಯ ವೀಕ್ಷಿಸುತ್ತಿದ್ದರು.


ಇದನ್ನೂ ಓದಿ: ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ ಆಟಗಾರರು, ಈ ರೆಕಾರ್ಡ್​ ದಶಕದಿಂದ ಮುರಿಯಲಾಗಲಿಲ್ಲ


ಅಂದ ಹಾಗೆ ಭಾರತ ಮತ್ತೆ ಪಾಕಿಸ್ತಾನವನ್ನು  ಎದುರಿಸಲಿದೆ. ಹೌದು, ಮೇಲ್ಬರ್ನ್ ನಲ್ಲಿ ನಡೆಯುವ ವಿಶ್ವ ಟಿ20 ಸರಣಿಯಲ್ಲಿ ಭಾರತವು ಅಕ್ಟೋಬರ್ 23 ರಂದು ಮತ್ತೆ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಸೆಣೆಸುತ್ತಿದೆ. ಪಂದ್ಯದ ಬಗೆಗಿನ ಕಾತುರತೆ ಈಗ ಭಾರತ ಸೇರಿದಂತೆ ಪಾಕಿಸ್ತಾನದ ಜನರಲ್ಲೂ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.

First published: