• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Kabaddi Player: ರಾಜ್ಯಮಟ್ಟದ ಕಬಡ್ಡಿ ಆಟಗಾರನ ಬಂಧನ, ಬ್ಯಾಗ್​ನಲ್ಲಿ ಸಿಕ್ತು 700 ಡ್ರಗ್ಸ್ ತುಂಬಿದ​​ ಚುಚ್ಚುಮದ್ದುಗಳು

Kabaddi Player: ರಾಜ್ಯಮಟ್ಟದ ಕಬಡ್ಡಿ ಆಟಗಾರನ ಬಂಧನ, ಬ್ಯಾಗ್​ನಲ್ಲಿ ಸಿಕ್ತು 700 ಡ್ರಗ್ಸ್ ತುಂಬಿದ​​ ಚುಚ್ಚುಮದ್ದುಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Kabaddi Player: ಹರಿಯಾಣದ ಹಿಸಾರ್ ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸೀಲಿಂಗ್ ಕಾರ್ಯಾಚರಣೆಯ ಭಾಗವಾಗಿ 500 ಮದ್ದು ಚುಚ್ಚುಮದ್ದುಗಳೊಂದಿಗೆ ರಾಜ್ಯ ಮಟ್ಟದ ಕಬಡ್ಡಿ ಆಟಗಾರನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

  • Local18
  • 5-MIN READ
  • Last Updated :
  • Share this:

ಕೆಲವು ವಿದ್ಯಾರ್ಥಿಗಳು ಅಧ್ಯಯನದಲ್ಲಿ ಮಿಂಚಿದರೆ, ಇನ್ನು ಕೆಲವರು ಕ್ರೀಡೆಯಲ್ಲಿ ವಿಶೇಷ ಪ್ರತಿಭೆ ಹೊಂದಿತ್ತಾರೆ. ನಾವು ಸಾಮಾನ್ಯವಾಗಿ ಕ್ರಿಕೆಟ್ (Cricket), ಕಬಡ್ಡಿ (Kabaddi ), ಹಾಕಿ ಮುಂತಾದ ಆಟಗಳನ್ನು ನೋಡುತ್ತೇವೆ. ಆದರೆ ಇವುಗಳಲ್ಲಿ ಕ್ರೀಡಾಪಟುಗಳು ತುಂಬಾ ಕಷ್ಟಪಟ್ಟು ತಮ್ಮ ಪ್ರತಿಭೆಯನ್ನು ಪ್ರದರ್ಶೀಸಬೇಕಾಗುತ್ತದೆ. ಆದರೆ ಇದಕ್ಕಿಂತ ಭಿನ್ನವಾಗಿ, ಇತರರು ಮಾದಕ ದ್ರವ್ಯಗಳನ್ನು ಮತ್ತು ತ್ವರಿತ ಶಕ್ತಿಯ ಮಾತ್ರೆಗಳನ್ನು ಬಳಸಿಕೊಂಡು ತನ್ನ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಬಹುಬೇಗ ಮುನ್ನಲೆಗೆ ಬರುತ್ತಾರೆ. ಇಂತಹ ಪ್ರಕರಣಗಳಲ್ಲಿ ಕೆಲವೊಮ್ಮೆ ಅಥ್ಲೀಟ್​ಗಳು (Athlete) ಅಧಿಕಾರಿಗಳ ಡ್ರಗ್ ತಪಾಸಣೆ ವೇಳೆ ಸಿಕ್ಕಿ ಬೀಳುತ್ತಾರೆ. ಈ ಕಾರಣದಿಂದಾಗಿ, ಪೊಲೀಸರು ಅವರ ವಿರುದ್ಧ ಆಟದ ನಿಷೇಧ ಅಥವಾ ಇತರ ಪ್ರಕರಣಗಳನ್ನು ದಾಖಲಿಸುತ್ತಾರೆ.


ಆಟಗಾರನ ಬಂಧನ:


ಈ ರೀತಿಯ ಡೋಪಿಂಗ್ ಸಂಬಂಧಿತ ಘಟನೆಗಳನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಇದರಲ್ಲಿ ಈಗಾಗಲೇ ಟಾಪ್​ ಅಥ್ಲೀಟ್ ಗಳೂ ಕೆಲವೊಮ್ಮೆ ಡೋಪಿಂಗ್​ನಲ್ಲಿ ತೊಡಗಿಕೊಂಡು ಸಿಕ್ಕಿ ಬಿದ್ದ ಉದಾಹರಣೆಗಳಿವೆ. ಇತ್ತೀಚೆಗೆ ಮತ್ತೊಂದು ಡೋಪಿಂಗ್ ಪ್ರಕರಣಗಳು ಬೆಳಕಿಗೆ ಬಂದಿವೆ. ಹೌದು, ಹರಿಯಾಣದ ಹಿಸಾರ್​ ಎಂಬಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸೀಲಿಂಗ್ ಕಾರ್ಯಾಚರಣೆಯ ಭಾಗವಾಗಿ  700 ಚುಚ್ಚುಮದ್ದುಗಳೊಂದಿಗೆ ರಾಜ್ಯ ಮಟ್ಟದ ಕಬಡ್ಡಿ ಆಟಗಾರನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.


ಆಟಗಾರನನ್ನು ರೋಹ್ಟಕ್‌ನ ಮದೀನಾ ಗ್ರಾಮದ ಅಜಯ್ ಎಂದು ಗುರುತಿಸಲಾಗಿದೆ. ಆ್ಯಂಟಿ ನಾರ್ಕೋಟಿಕ್ ಸೆಲ್ ತಂಡ ಆರೋಪಿಯನ್ನು ಬಂಧಿಸಿದೆ. ಆಟಗಾರ ತನ್ನ ಕಾರಿನಲ್ಲಿ ಮಾದಕ ಚುಚ್ಚುಮದ್ದು ತುಂಬಿದ ಬಾಕ್ಸ್‌ನೊಂದಿಗೆ ಪಂಜಾಬ್‌ನ ಅಮೃತಸರಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: MS Dhoni: ಧೋನಿ ಬೈಸಿಪ್ಸ್​ ನೋಡಿ ಬೆಚ್ಚಿಬಿದ್ದ ಬಾಡಿ ಬಿಲ್ಡರ್ಸ್​​! ಮಹಿಗೆ ವಯಸ್ಸೆ ಆಗಲ್ವಾ ಅಂದ್ರು ಫ್ಯಾನ್ಸ್!


ಅಮೃತಸರದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾವಳಿ ವೇಳೆ ಈ ಚುಚ್ಚುಮದ್ದು ಪೂರೈಕೆಯಾಗಬೇಕಿತ್ತು ಎಂಬ ಆಘಾತಕಾರಿ ಸಂಗತಿಗಳನ್ನು ಪೊಲೀಸರ ವಿಚಾರಣೆ ವೇಳೆ ಅಜಯ್ ಬಹಿರಂಗಪಡಿಸಿದ್ದಾರೆ. ಏತನ್ಮಧ್ಯೆ, ಆಟಗಾರನಿಗೆ ಎಲ್ಲಿಂದ ಡ್ರಗ್ ಚುಚ್ಚುಮದ್ದು ಸಿಕ್ಕಿತು ಮತ್ತು ಅದನ್ನು ಯಾರಿಗೆ ಸರಬರಾಜು ಮಾಡಲು ಹೊರಟಿದ್ದರು ಎಂಬುದರ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.


ಹರಿಯಾಣ ಎಡಿಜಿಪಿ ಶ್ರೀಕಾಂತ್ ಜಾಧವ್ ಅವರ ಆದೇಶದ ಮೇರೆಗೆ ಹಂಸಿ ಪೊಲೀಸರು ಗುರುವಾರ ಸೀಲಿಂಗ್ ಕಾರ್ಯಾಚರಣೆ ನಡೆಸಿದರು. ಇದರ ಭಾಗವಾಗಿ ಜಿಲ್ಲೆಯಾದ್ಯಂತ ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತಿತ್ತು. ಆ್ಯಂಟಿ ನಾರ್ಕೋಟಿಕ್ಸ್ ಸೆಲ್ ತಂಡಕ್ಕೆ ರೋಹ್ಟಕ್ ಕಡೆಯಿಂದ ಬರುತ್ತಿದ್ದ ವಾಹನದಲ್ಲಿ ಮಾದಕ ವಸ್ತು ಇರುವ ಬಗ್ಗೆ ಮಾಹಿತಿ ಇದ್ದ ಕಾರಣ ಆ್ಯಂಟಿ ನಾರ್ಕೋಟಿಕ್ ಸೆಲ್ ತಂಡ ಜಗ್ಗ ಬಡಾ ಮೈನರ್ ಬ್ರಿಡ್ಜ್ ಹಂಸಿ ಡಾಟಾ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವಾಹನ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆಟಗಾರನ ವಾಹನದಲ್ಲಿ ಚುಚ್ಚುಮದ್ದುಗಳು ದೊರಕಿವೆ.




ಡ್ರಗ್ಸ್ ಚುಚ್ಚುಮದ್ದು:


ಇನ್ನು, ತಪಾಸಣೆ ವೇಳೆ ಸ್ಥಳದಲ್ಲಿ ಡ್ರಗ್ ಕಂಟ್ರೋಲರ್ ಅಧಿಕಾರಿ ದಿನೇಶ್ ರಾಣಾ ಮತ್ತು ಗೆಜೆಟೆಡ್ ಅಧಿಕಾರಿ ಡಾ.ಸುಧೀರ್ ಮಲಿಕ್ ಅವರು ಪಶು ವೈದ್ಯಾಧಿಕಾರಿ ಹಂಸಿ ಅವರನ್ನು ಕರೆಸಿ ಆರೋಪಿಗಳನ್ನು ತಪಾಸಣೆ ನಡೆಸಿದ್ದಾರೆ. ಶೋಧದ ವೇಳೆ ಆರೋಪಿಯಿಂದ 700 ಮಾದಕ ಚುಚ್ಚುಮದ್ದು ವಶಪಡಿಸಿಕೊಳ್ಳಲಾಗಿದೆ. ರಾಜ್ಯ ಮಟ್ಟದ ಕ್ರೀಡಾಪಟು ಡ್ರಗ್ಸ್ ಸೇವನೆಯ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಎಸ್ಪಿ ಹನ್ಸಿ ನಿತಿಕಾ ಗೆಹ್ಲೋಟ್ ತಿಳಿಸಿದ್ದಾರೆ. ಈ ರೀತಿಯ ಚುಚ್ಚುಮದ್ದನ್ನು ಹೆಚ್ಚಾಗಿ ಕ್ರೀಡಾಪಟುಗಳು ಬಳಸುತ್ತಾರೆ. ಬಂಧಿತ ಆರೋಪಿ ಈ ಸಂಬಂಧ ತಡೆಯಾಜ್ಞೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Published by:shrikrishna bhat
First published: