• Home
  • »
  • News
  • »
  • sports
  • »
  • Joginder Sharma: 120 ಮಹಿಳೆಯರ ಮೇಲೆ ಜಿಲೇಬಿ ಬಾಬಾ ದೌರ್ಜನ್ಯ! ಕಾಮುಕನನ್ನು ಬಂಧಿಸಿದ್ದು ಟೀಂ ಇಂಡಿಯಾ ಕ್ರಿಕೆಟಿಗ!

Joginder Sharma: 120 ಮಹಿಳೆಯರ ಮೇಲೆ ಜಿಲೇಬಿ ಬಾಬಾ ದೌರ್ಜನ್ಯ! ಕಾಮುಕನನ್ನು ಬಂಧಿಸಿದ್ದು ಟೀಂ ಇಂಡಿಯಾ ಕ್ರಿಕೆಟಿಗ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Joginder Sharma: ಹರಿಯಾಣದ ಫತೇಹಾಬಾದ್ ಜಿಲ್ಲೆಯ ತೋಹಾನಾ ಬಾಬಾ ಬಾಲಕನಾಥ ದೇವಸ್ಥಾನದ ಅರ್ಚಕ ಅಮರಪುರಿ ಅಲಿಯಾಸ್ ಜಲೇಬಿ ಬಾಬಾ (Joginder Sharma) ಅಲಿಯಾಸ್ ಬಿಲ್ಲು ಅವರನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ (Court) ಇಂದು ಪ್ರಕಟಿಸಲಿದೆ.

ಮುಂದೆ ಓದಿ ...
  • Share this:

ಹರಿಯಾಣದ ಫತೇಹಾಬಾದ್ ಜಿಲ್ಲೆಯ ತೋಹಾನಾ ಬಾಬಾ ಬಾಲಕನಾಥ ದೇವಸ್ಥಾನದ ಅರ್ಚಕ ಅಮರಪುರಿ ಅಲಿಯಾಸ್ ಜಲೇಬಿ ಬಾಬಾ (Joginder Sharma) ಅಲಿಯಾಸ್ ಬಿಲ್ಲು ಅವರನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ (Court) ಇಂದು ಪ್ರಕಟಿಸಲಿದೆ. ಜಲೇಬಿ ಬಾಬಾ 120ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದು ಮಾತ್ರವಲ್ಲದೆ ಅವರ ಅಶ್ಲೀಲ ವೀಡಿಯೊಗಳನ್ನು ಸಹ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ದಾಳಿಯಲ್ಲಿ ಈ 120 ವಿಡಿಯೋಗಳು ಪತ್ತೆಯಾಗಿವೆ. ಸಂತ್ರಸ್ತ ಮಹಿಳೆಯರ ದೂರಿನ ಆಧಾರದ ಮೇಲೆ ಅಮರಪುರಿಯನ್ನು ಬಂಧಿಸಲಾಗಿದೆ. ಈ ಬಾಬಾನನ್ನು ಜುಲೈ 2018ರಲ್ಲಿ ಫತೇಹಾಬಾದ್ ಡಿಎಸ್ಪಿ ಜೋಗಿಂದರ್ ಶರ್ಮಾ (Joginder Sharma) ಅವರು ಬಂಧಿಸಿದ್ದರು.


ಟೀಂ ಇಂಡಿಯಾ ಆಟಾಗಾರ ಜೋಗಿಂದರ್ ಶರ್ಮಾ:


2007ರಲ್ಲಿ ಭಾರತಕ್ಕೆ ಮೊದಲ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೋಗಿಂದರ್ ಶರ್ಮಾ ಈಗ ಡಿಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2007ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಜೋಗಿಂದರ್ ಶರ್ಮಾ ಕೊನೆಯ ಓವರ್ ಬೌಲ್ ಮಾಡಿ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ್ದರು. 2007ರ ಟಿ20 ವಿಶ್ವಕಪ್​ ಅನ್ನು ಧೋನಿ ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಬಾರಿಗೆ ಗೆದ್ದು ಬೀಗಿತ್ತು.


ಜಲೇಬಿ ಬಾಬಾನನ್ನು ಸೆರೆಹಿಡಿಯುವಲ್ಲಿ ಈ ಆಟಗಾರ ಪ್ರಮುಖ ಪಾತ್ರ ವಹಿಸಿದ್ದರು. ಜಲೇಬಿ ಬಾಬಾನ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಆತ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿರುವುದು ಕಂದುಬಂದಿತ್ತು. ಫತೇಹಾಬಾದ್ ಪೊಲೀಸರು ಮಾಹಿತಿದಾರರ ಮೂಲಕ ಆತನ ಸ್ಥಳದ ಬಗ್ಗೆ ಮಾಹಿತಿ ಪಡೆದರು ಮತ್ತು ನಂತರ ಡಿಎಸ್ಪಿ ಜೋಗಿಂದರ್ ಶರ್ಮಾ ಅವರ ತಂಡವು ಅಮರಪುರಿ ಆಶ್ರಮದಿಂದ ಅವರನ್ನು ಬಂಧಿಸಿತ್ತು.


ಯಾರು ಈ ಜಿಲೇಬಿ ಬಾಬಾ:


ಈ ತೋಹಾನಾ ಬಾಬಾ ಮೊದಲು ಜಿಲೇಬಿಗಳನ್ನು ಮಾರಾಟ ಮಾತ್ತಿದ್ದರು. ತಂತ್ರಿಗಳಾಗುವ ಮೊದಲು, ಅಮರಪುರಿ ತೋಹಾನಾದಲ್ಲಿ ರೈಲ್ವೆ ರಸ್ತೆಯಲ್ಲಿ ಜಿಲೇಬಿಗಳನ್ನು ಮಾರಾಟ ಮಾಡುತ್ತಿದ್ದರು. ಈ ವ್ಯವಹಾರವನ್ನು ತೊರೆದು ತಂತ್ರ-ಮಂತ್ರ ಕಲಿತು ಬಾಬಾರಾದರು. ಹೀಗಾಗಿಯೇ ಅವರಿಗೆ ಜಲೇಬಿ ಬಾಬಾ ಎಂಬ ಹೆಸರು ಬಂದಿದೆ. ಅಮರಪುರಿಯಲ್ಲಿ ಅವರು ಅಪ್ರಾಪ್ತ ಮತ್ತು ವಯಸ್ಕ ಮಹಿಳೆಯರು ಮತ್ತು ಹುಡುಗಿಯರನ್ನು ಲೈಂಗಿಕವಾಗಿ ಶೋಷಣೆ ಮತ್ತು ಅತ್ಯಾಚಾರ ಮಾಡಿ ವೀಡಿಯೊಗಳನ್ನು ಮಾಡುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪೊಲೀಸ್ ದಾಳಿಯಲ್ಲಿ ಅಂತಹ ಎಲ್ಲಾ ವೀಡಿಯೊಗಳ ಸಿಡಿಗಳು ಪತ್ತೆಯಾಗಿವೆ ಮತ್ತು ಸಂತ್ರಸ್ತ ಮಹಿಳೆಯರ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿತ್ತು.


ಇದನ್ನೂ ಓದಿ: RCB 2023: ಹೊಸ ಜೋಶ್, ಹೊಸ ಲೋಗೋ ಜೊತೆ ಐಪಿಎಲ್‌ಗೆ ಬರಲಿದೆ RCB! ಈ ಸಲನಾದ್ರೂ ಕಪ್ ನಮ್ಮದಾಗಲಿ ಅಂತಿದ್ದಾರೆ ಫ್ಯಾನ್ಸ್!


ಜನರ ಸಮಸ್ಯೆಗಳನ್ನು ಹೋಗಲಾಡಿಸುವುದಾಗಿ ಹೇಳಿಕೊಂಡು ಅಮರಪುರಿಯಲ್ಲಿ ಆಶ್ರಮವನ್ನು ಕಟ್ಟಿದರು. ಅದೇ ಸಮಯದಲ್ಲಿ, ಅವರು ನೆಲಮಾಳಿಗೆಯಲ್ಲಿ ಕೆಲವು ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಿದ್ದರು. ಕೌಟುಂಬಿಕ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುವ ನೆಪದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಬರುತ್ತಿದ್ದರು. ನಂತರ ಅವರನ್ನು ಅದೇ ನೆಲಮಾಳಿಗೆಗೆ ಕರೆಸಿ ಕುಡಿಸಿ ದೈಹಿಕ ಹಿಂಸೆ ನೀಡಿ ವಿಡಿಯೋ ಮಾಡುತ್ತಿದ್ದರು. ಅಷ್ಟೇ ಅಲ್ಲ ಈ ವಿಡಿಯೊ ಆಧರಿಸಿ ಮಹಿಳೆಯರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರಂತೆ. ಹಣ ಕೊಡಲು ಸಾಧ್ಯವಾಗದ ಮಹಿಳೆಯರನ್ನು ಮತ್ತೆ ದೈಹಿಕ ಹಿಂಸೆ ನೀಡುತ್ತಿದ್ದರಂತೆ.

Published by:shrikrishna bhat
First published: