News18 India World Cup 2019

ಭಾರತ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ವಜಾ

'ಭಾರತ ಹಾಕಿ ತಂಡ 2018ರ ವರ್ಷ ಕಳಪೆ ಪ್ರದರ್ಶನ ತೋರಿತ್ತು. ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. ಆದ್ದರಿಂದ ಈಗ ಜೂನಿಯರ್ ತಂಡದತ್ತ ಗಮನ ಹರಿಸಲಾಗುತ್ತಿದೆ' ಎಂದು ಹಾಕಿ ಇಂಡಿಯ ತಿಳಿಸಿದೆ

Vinay Bhat | news18
Updated:January 10, 2019, 11:34 AM IST
ಭಾರತ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ವಜಾ
Image: Twitter
Vinay Bhat | news18
Updated: January 10, 2019, 11:34 AM IST
ನವ ದೆಹಲಿ: ಭಾರತ ಪುರುಷರ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ.

ಕಳೆದ ವರ್ಷ ಭಾರತ ತಂಡ ನಿರಾಶಾದಾಯಕ ಪ್ರದರ್ಶನ ತೋರಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಹಾಕಿ ಒಕ್ಕೂಟ ಈ ನಿರ್ಧಾರ ತೆಗೆದುಕೊಂಡಿದೆ. ಹರೇಂದ್ರ ಅವರು ಪರ್ಯಾಯವಾಗಿ ಜೂನಿಯರ್ ಹಾಕಿ ತಂಡದ ಕೋಚ್ ಹುದ್ದೆ ವಹಿಸಿಕೊಳ್ಳಬೇಕಾಗಿದೆ.

'ಭಾರತ ಹಾಕಿ ತಂಡ 2018ರ ವರ್ಷ ಕಳಪೆ ಪ್ರದರ್ಶನ ತೋರಿತ್ತು. ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. ಆದ್ದರಿಂದ ಈಗ ಜೂನಿಯರ್ ತಂಡದತ್ತ ಗಮನ ಹರಿಸಲಾಗುತ್ತಿದೆ' ಎಂದು ಹಾಕಿ ಇಂಡಿಯ ತಿಳಿಸಿದೆ. ಭಾರತ ಹಾಕಿ ತಂಡದಲ್ಲಿ ಈ ರೀತಿಯ ಪ್ರಕ್ರಿಯೆ ನಡೆಯುತ್ತಿರುವುದು ಇದೇ ಮೊದಲೇನಲ್ಲ.

ಇದನ್ನೂ ಓದಿ: ಇಂದು ಭಾರತ-ಯುಎಇ ಸೆಣೆಸಾಟ: ಛೇಟ್ರಿ ಬಳಗಕ್ಕೆ ಮತ್ತೊಂದು ಕಠಿಣ ಸವಾಲು

ಈ ಹಿಂದೆ ಅನೇಕ ಬಾರಿ ಕೋಚ್​ನ್ನು ಬದಲಾವಣೆ ಮಾಡುತ್ತಾ ಬಂದಿದೆ. 2018ರ ಮೇ ನಲ್ಲಿ ಹರೇಂದ್ರ ಅವರು ಭಾರತ ಹಾಕಿ ತಂಡಕ್ಕೆ ಹೊಸ ಕೋಚ್ ಆಗಿ ನೇಮಕ ಆಗಿದ್ದರು. ಆದರೆ ಹಿರಿಯರ ತಂಡ ಅವರ ಅವಧಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿಲ್ಲ. ಹೀಗಾಗಿ ಹರೇಂದ್ರ ಅವರನ್ನು ವಜಾ ಮಾಡಲಾಗಿದೆ.

ಹಾಕಿ ಇಂಡಿಯಾ ಸದ್ಯದಲ್ಲೆ ತಂಡದ ಮುಖ್ಯ ಕೋಚ್​ಗಾಗಿ ಆಹ್ವಾನ ನೀಡಲಿದ್ದು, ಅಲ್ಲಯವರೆಗೆ ಉನ್ನತ ಪ್ರದರ್ಶನದ ನಿರ್ದೇಶಕ ಡೇವಿಡ್ ಜಾನ್ ಕಾರ್ಯನಿರ್ವಹಿಸಲಿದ್ದಾರೆ.
Loading...

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...