Hardik Pandya: ಹಾರ್ದಿಕ್ ಪಾಂಡ್ಯ ನಿವೃತ್ತಿ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಟೀಂ ಇಂಡಿಯಾದ ಮಾಜಿ ಕೋಚ್

ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಪ್ರಕಾರ, ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಭವಿಷ್ಯದಲ್ಲಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಿದ್ದಾರೆ.

ಹಾರ್ದಿಕ್ - ರವಿ ಶಾಸ್ತ್ರಿ

ಹಾರ್ದಿಕ್ - ರವಿ ಶಾಸ್ತ್ರಿ

  • Share this:
ಇಂಗ್ಲೆಂಡ್‌ನ ದಿಗ್ಗಜ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕಳೆದ ವಾರ ಏಕದಿನ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ್ದಾರೆ. ಸ್ಟೋಕ್ಸ್ ಅವರ ನಿರ್ಧಾರವು ಅನೇಕರನ್ನು ಬೆಚ್ಚಿಬೀಳಿಸಿದೆ. ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳನ್ನು ಆಡಲು ದೈಹಿಕವಾಗಿ ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ. ಇದರ ಬೆನ್ನಲ್ಲೇ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರಕಾರ, ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಭವಿಷ್ಯದಲ್ಲಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಿದ್ದಾರೆ. 2023ರ ಏಕದಿನ ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್ ತ್ಯಜಿಸಲಿದ್ದಾರೆ ಎಂದು ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ. ಸ್ಟೋಕ್ಸ್ ನಿವೃತ್ತಿಯ ನಂತರ, ODI ಸ್ವರೂಪದ ಭವಿಷ್ಯವನ್ನು ಪ್ರಶ್ನಿಸಲಾಗಿದೆ. ಸದ್ಯದಲ್ಲಿಯೇ ಏಕದಿನ ಕ್ರಿಕೆಟ್ ಅಂತ್ಯಗೊಳ್ಳಲಿದೆ ಎಂದು ಹಲವು ಅನುಭವಿ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಂಡ್ಯ ನಿವೃತ್ತಿ ಕುರಿತು ರವಿ ಶಾಸ್ತ್ರಿ ಶಾಕಿಂಗ್ ಹೇಳಿಕೆ:

ಹೌದು, ಇಗಷ್ಟೇ ತಂಡಕ್ಕೆ ಕಂಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ, ಸಖತ್ ಆಗಿ ಮಿಂಚುತ್ತಿದ್ದಾರೆ. ಅಲ್ಲದೇ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಯಕತ್ವವನ್ನೂ ನಿರ್ವಹಿಸಿದ್ದಾರೆ. ಆದರೆ ಇದರ ನಡುವೆ ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಪಾಂಡ್ಯ ನಿವೃತ್ತಿ ಕುರಿತು ಮಾತನಾಡಿದ್ದು, ಕ್ರಿಕೆಟ್ ಒಲಯದಲ್ಲಿ ಸಂಚಲನ ಮೂಡಿಸಿದೆ.

ಸ್ಕೈ ಸ್ಪೋರ್ಟ್ಸ್ ಕಾಮೆಂಟರಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ODI ಕ್ರಿಕೆಟ್ ಭವಿಷ್ಯದ ಬಗ್ಗೆ ಶಾಸ್ತ್ರಿ ಮಾತನಾಡಿದ್ದು, ‘ಹಾರ್ದಿಕ್ ಅವರ ಆಲೋಚನೆಗಳು ಸ್ಪಷ್ಟವಾಗಿವೆ, ಅವರು ಟಿ20 ಕ್ರಿಕೆಟ್ ಆಡಲು ಬಯಸುತ್ತಾರೆ. ಅವರು ಇತರ ಮಾದರಿಯ ಕ್ರಿಕೆಟ್‌ಗೆ ಹೆಚ್ಚು ಗಮನ ಕೊಡುವುದಿಲ್ಲ. ಆಟಗಾರರು ಈಗ ಯಾವ ಸ್ವರೂಪದಲ್ಲಿ ಆಡಬೇಕೆಂದು ಈಗಾಗಲೇ ನಿರ್ಧರಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ನೋಡಿ, ಅವರು ಟಿ20 ಆಡಲು ಬಯಸುತ್ತಾರೆ. ಅವರ ಬೇರೆ ಏನನ್ನೂ ಆಡಲು ಬಯಸುವುದಿಲ್ಲ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಹಾರ್ದಿಕ್ ಆಡಲಿದ್ದಾರೆ, ಆದರೆ ನಂತರ ಅವರು ಏಕದಿನ ಸ್ವರೂಪದಿಂದ ನಿವೃತ್ತಿ ಹೊಂದಲಿದ್ದಾರೆ‘ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ: ASIA CUP 2022: ಏಷ್ಯಾ ಕಪ್ ಪ್ರೋಮೋ ರಿಲೀಸ್, ಭಾರತ-ಪಾಕ್ ಮುಖಾಮುಖಿಗೆ ಡೇಟ್​ ಫಿಕ್ಸ್

ಮುಂದುವರೆದು ಮಾತನಾಡಿರುವ ಅವರು, ‘ಹಾರ್ದಿಕ್ ಪಾಂಡ್ಯ 50 ಓವರ್‌ಗಳ ವಿಶ್ವಕಪ್‌ನಲ್ಲಿ ಆಡುತ್ತಾರೆ, ಏಕೆಂದರೆ ಅದು ಭಾರತದಲ್ಲಿ ನಡೆಯಲಿದೆ. ಅದರ ನಂತರ ಅವನು ಏಕದಿನ ಪಂದ್ಯಗಳಲ್ಲಿ ಕಾಣಿಸದೇ ಇರಬಹುದು. ಈ ಬೆಳವಣಿಗೆ ಆದ ಬಳಿಕ ಉಳಿದ ಆಟಗಾರರೂ ಸಹ ಈ ಸ್ವರೂಪವನ್ನು ಆಯ್ಕೆ ಮಾಡಲು ಪ್ರಾರಂಭಿಸುತ್ತಾರೆ, ಹಾಗೆ ಮಾಡಲು ಅವರಿಗೆ ಸಂಪೂರ್ಣ ಹಕ್ಕಿದೆ' ಎಂದು ಶಾಸ್ತ್ರಿ ಹೇಳಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷಗಳಲ್ಲಿ ಪ್ರತಿಯೊಂದು ತಂಡವೂ T20 ಸ್ವರೂಪಕ್ಕೆ ಪ್ರಾಮುಖ್ಯತೆಯನ್ನು ನೀಡಿದೆ. ಕ್ರಿಕೆಟ್ ಅಭಿಮಾನಿಗಳು ಏಕದಿನ ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ತೋರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Rishabh Pant: ಸ್ವಲ್ಪ ಸಣ್ಣ ಆದರೆ ಆತ ಮಾಡೆಲ್ ಆಗಬಹುದು, ರಿಷಭ್ ಪಂತ್​ಗೆ ಸಲಹೆ ನೀಡಿದ ಪಾಕ್​ ಮಾಜಿ ಆಟಗಾರ

ನಾಯಕತ್ವದಲ್ಲಿಯೂ ಮಿಂಚಿದ ಪಾಂಡ್ಯ:

ಇನ್ನು, ಹಾರ್ದಿಕ್ ಪಾಂಡ್ಯ 2022 ರಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹಾರ್ದಿಕ್ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಹಾರ್ದಿಕ್ ನಾಯಕತ್ವದಲ್ಲಿ ಮೊದಲ ಬಾರಿಗೆ ಆಡಿದ ಗುಜರಾತ್ ಟೈಟಾನ್ಸ್ ಈ ವರ್ಷ ಐಪಿಎಲ್ ಗೆದ್ದುಕೊಂಡಿತು. ಇದು ಹಾರ್ದಿಕ್ ನಾಯಕತ್ವದ ಚೊಚ್ಚಲ ಟೂರ್ನಿಯೂ ಆಗಿತ್ತು. ಐಪಿಎಲ್ ನಂತರ ಹಾರ್ದಿಕ್ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
Published by:shrikrishna bhat
First published: