ಬಿಸಿಸಿಐಯಿಂದ ಹಾರ್ದಿಕ್ ಪಾಂಡ್ಯ- ಕೆ ಎಲ್ ರಾಹುಲ್​ಗೆ ಏಕದಿನ ಪಂದ್ಯ ನಿಷೇಧ

ಬಿಸಿಸಿಐ ಪಾಂಡ್ಯ ಹಾಗೂ ರಾಹುಲ್​ಗೆ ನಿನ್ನೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಅಂತೆಯೆ 24 ಘಂಟೆಯೊಳಗಡೆ ಈ ಬಗ್ಗೆ ಉತ್ತರಿಸುವಂತೆ ತಾಕೀತು ಮಾಡಿತ್ತು. ಇದಕ್ಕೆ ಪಾಂಡ್ಯ ಉತ್ತರಿಸಿದರು ಬಿಸಿಸಿಐ ಇದರಿಂದ ಸಮಾಧಾನಗೊಂಡಿಲ್ಲ.

Vinay Bhat | news18
Updated:January 10, 2019, 2:52 PM IST
ಬಿಸಿಸಿಐಯಿಂದ ಹಾರ್ದಿಕ್ ಪಾಂಡ್ಯ- ಕೆ ಎಲ್ ರಾಹುಲ್​ಗೆ ಏಕದಿನ ಪಂದ್ಯ ನಿಷೇಧ
Pic: Twiiter
Vinay Bhat | news18
Updated: January 10, 2019, 2:52 PM IST
ನವ ದೆಹಲಿ: ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಗುವ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೆ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್ ನೀಡಿರುವ ಹೇಳಿಕೆ ತಾರಕಕ್ಕೇರಿದೆ. ಪರಿಣಾಮ ಇಬ್ಬರೂ ಆಟಗಾರರಿಗೆ ಬಿಸಿಸಿಐ ಎರಡು ಅಂತರಾಷ್ಟ್ರೀಯ ಏಕದಿನ ಪಂದ್ಯಗಳಿಂದ ನಿಷೇಧ ಹೇರಿದೆ.

ಇತ್ತೀಚೆಗಷ್ಟೆ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್ ಭಾಗವಹಿಸಿದ್ದರು.

ಇದರಲ್ಲಿ ಕರುಣ್ ಕೇಳಿದ ಪ್ರಶ್ನೆಗೆ ಮನಬಂದಂತೆ ಉತ್ತರಿಸಿದ ಇವರಿಬ್ಬರು, ಸೆಕ್ಸ್​​, ಮಹಿಳೆಯರ ಬಗ್ಗೆ ವರ್ಣಬೇಧದ ಮಾತುಗಳನ್ನು ಆಡಿದ್ದರು.

ಸಾಮಾಜಿಕ ತಾಣಗಳಲ್ಲಿ ಇವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದವು. ಹೀಗಾಗಿ ಪಾಂಡ್ಯ ಅವರು ಟ್ವಿಟ್ಟರ್​​ನಲ್ಲಿ ಕ್ಷಮೆ ಕೋರಿದ್ದರು. ಆದರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಪಾಂಡ್ಯ ಹಾಗೂ ರಾಹುಲ್​ಗೆ ನಿನ್ನೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ: 1 ಎಸೆತದಲ್ಲಿ ಗೆಲ್ಲಲು ಬೇಕು 6 ರನ್: ಬ್ಯಾಟ್ಸ್​ಮನ್​ ಬಾಲ್ ಮುಟ್ಟದೆ ಪಂದ್ಯ ಗೆಲ್ಲಿಸಿಕೊಟ್ಟ: ಹೀಗೊಂದು ರೋಚಕ ಪಂದ್ಯ

ಅಂತೆಯೆ 24 ಘಂಟೆಯೊಳಗಡೆ ಈ ಬಗ್ಗೆ ಉತ್ತರಿಸುವಂತೆ ತಾಕೀತು ಮಾಡಿತ್ತು. ಇದಕ್ಕೆ ಪಾಂಡ್ಯ ಉತ್ತರಿಸಿದರು ಬಿಸಿಸಿಐ ಇದರಿಂದ ಸಮಾಧಾನಗೊಂಡಿಲ್ಲ.

ಬಿಸಿಸಿಐ ನಿರ್ವಾಹಕ ಸಮಿತಿ ಅಧ್ಯಕ್ಷ ವಿನೋದ್ ಅವರು, 'ದೇಶವನ್ನು ಪ್ರತಿನಿಧಿಸುವ ಆಟಗಾರರು ಈ ರೀತಿಯ ಮಾತುಗಳನ್ನು ಆಡಬಾರದು. ಯಾವುದೇ ವಿಷಯದ ಬಗ್ಗೆ ಬಹಿರಂಗವಾಗಿ, ಕೀಳಾಗಿ ಮಾತನಾಡುವುದು ಸರಿಯಲ್ಲ. ಇವರನ್ನು ಎರಡು ಪಂದ್ಯಗಳಿಂದ ನಿಷೇಧಿಸಬೇಕು' ಎಂದು ಹೇಳಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿರುವ ಬಿಸಿಸಿಐನ ಸಿಒಎ ಡಯಾನ ಎದುಲ್ಜಿ ಅವರು ವಿನೋದ್ ರಾಯ್ ಹೇಳಿದಂತೆ ಇವರಿಬ್ಬರಿಗೂ ಎರಡು ಅಂತರಾಷ್ಟ್ರೀಯ ಏಕದಿನ ಪಂದ್ಯಗಳಿಂದ ನಿಷೇಧ ಹೇರಲಾಗಿದೆ ಎಂದಿದ್ದಾರೆ.
Loading...

ಈ ಶೋನಲ್ಲಿ ಕರಣ್ ಅವರು ಪಾಂಡ್ಯ ಬಳಿ 'ನೀವು ಕ್ಲಬ್​ನಲ್ಲಿ ಹುಡುಗಿಯರ ಹೆಸರು ಯಾಕೆ ಕೇಳುವುದಿಲ್ಲ? ಅವರೊಂದಿಗೆ ಏನು ಮಾತನಾಡುತ್ತೀರಿ' ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಪಾಂಡ್ಯ, ಸಾಮಾನ್ಯವಾಗಿ ನಾನು ಮೊದಲಿಗೆ ಹಡುಗಿಯರು ಯಾವ ರೀತಿ ವರ್ತಿಸುತ್ತಾರೆಂದು ನೋಡಲು ಇಷ್ಟಪಡುತ್ತೇನೆ ಎಂದಿದ್ದರು. ಇದರ ಜೊತೆಗೆ ವರ್ಣಬೇಧದ ಮಾತುಗಳನ್ನು ಆಡಿದ್ದರು.

ಇದನ್ನೂ ಓದಿ: ಬಿಸಿಸಿಐಯಿಂದ ಬಂಪರ್ ಬಹುಮಾನ: ಭಾರತೀಯ ಆಟಗಾರರಿಗೆ ಸಿಗುವ ಬೋನಸ್ ಎಷ್ಟು ಗೊತ್ತಾ?

ಪಾಂಡ್ಯ ಅವರ ಈ ಮಾತುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಸ್ತ್ರಿ ದ್ವೇಶಿ, ವರ್ಣಬೇಧ ಹಾಗೂ ಲಿಂಗ ತಾರತಮ್ಯ ಎಂಬ ಕಮೆಂಟ್​ಗಳು ಬಂದಿದ್ದವು.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ