ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ನಾಯಕತ್ವದಲ್ಲಿ ಅದ್ಭುತ ಯಶಸ್ವಿನಲ್ಲಿದ್ದಾರೆ. ಪಾಂಡ್ಯ ನಾಯಕತ್ವದಲ್ಲಿ, ಭಾರತವು ಮೂರನೇ T20 ಪಂದ್ಯದಲ್ಲಿ ನ್ಯೂಜಿಲೆಂಡ್ (IND vs NZ) ಅನ್ನು 168 ರನ್‌ಗಳಿಂದ ಸೋಲಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಗೆಲುವನ್ನು ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ನಾಯಕನಾಗಿ ಪಾಂಡ್ಯ ಸಹ ಆಟಗಾರರಿಗೆ ಮಾದರಿಯಾಗಿದ್ದಾರೆ. ಪೃಥ್ವಿ ಶಾಗೆ (Prithvi Shaw) ಟಿ20 ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗದಿರಬಹುದು, ಆದರೆ ಸರಣಿ ಗೆದ್ದ ನಂತರ ಹಾರ್ದಿಕ್ ಪಾಂಡ್ಯ (Hardik Pandya) ಮಾಡಿದ ಕೆಲಸ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಮೆಚ್ಚುಗೆಗೆ ಪಾತ್ರವಾದ ಪಾಂಡ್ಯ ಕೆಲಸ:
ಹಾರ್ದಿಕ್ ಪಾಂಡ್ಯ ಟಿ20 ಸರಣಿಯ ಟ್ರೋಫಿಯನ್ನು ಹಸ್ತಾಂತರಿಸಿದ ನಂತರ, ಅವರು ಆ ಕಪ್ ಅನ್ನು ಪೃಥ್ವಿ ಶಾಗೆ ನೀಡಿದರು. ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ. ಹಾರ್ದಿಕ್ ಪಾಂಡ್ಯ ಅವರ ನಡೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಹಳ ಸಮಯದ ನಂತರ ಪೃಥ್ವಿ ಟಿ20 ತಂಡದಲ್ಲಿ ಸ್ಥಾನ ಪಡೆದರೂ ಸಹ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ.
Captain @hardikpandya93 collects the @mastercardindia trophy from BCCI president Mr. Roger Binny & BCCI Honorary Secretary Mr. Jay Shah 👏👏
Congratulations to #TeamIndia who clinch the #INDvNZ T20I series 2️⃣-1️⃣ @JayShah pic.twitter.com/WLbCE417QU
— BCCI (@BCCI) February 1, 2023
ಇದನ್ನೂ ಓದಿ: Rohit Sharma: ಮ್ಯಾಚ್ ವಿನ್ ಬಳಿಕ ಇವ್ರಿಗೆ ಟ್ರೋಫಿ ಕೊಟ್ಟ ರೋಹಿತ್ ಶರ್ಮಾ! ಕೋಟಿ ಭಾರತೀಯರ ಹೃದಯ ಗೆದ್ದ ಹಿಟ್ ಮ್ಯಾನ್
ಪೃಥ್ವಿ ಶಾ 2021ರಲ್ಲಿ ಕೊನೆಯ T20:
ಬಲಗೈ ಬ್ಯಾಟ್ಸ್‌ಮನ್ ಪೃಥ್ವಿ ಶಾ ಜುಲೈ 2021 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಪ್ರಸ್ತುತ ಕಿವೀಸ್ ವಿರುದ್ಧದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗಿಲ್ ಮತ್ತು ಇಶಾನ್ ಕಿಶನ್ ಅವರ ಪ್ರದರ್ಶನ ವಿಶೇಷವಾಗಿರಲಿಲ್ಲ. ಹೀಗಿರುವಾಗ ಮೂರನೇ ಟಿ20ಯಲ್ಲಿ ಪೃಥ್ವಿ ಶಾಗೆ ಅವಕಾಶ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ನಿರ್ಣಾಯಕ ಟಿ20ಯಲ್ಲಿ ಆರಂಭಿಕ ಜೋಡಿ ಗಿಲ್ ಮತ್ತು ಇಶಾನ್ ಮೇಲೆ ಟೀಂ ಮ್ಯಾನೇಜ್‌ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ. ಗಿಲ್ ಶತಕ ಗಳಿಸಿದರೆ, ಇಶಾನ್ ಕಿಶನ್ ಮತ್ತೊಮ್ಮೆ ವಿಫಲರಾದರು.
ಪೃಥ್ವಿ ಟ್ರಿಪಲ್ ಸೆಂಚುರಿ:
ಪೃಥ್ವಿ ಶಾ ರಣಜಿ ಟ್ರೋಫಿ ಪಂದ್ಯದಲ್ಲಿ ಅಸ್ಸಾಂ ವಿರುದ್ಧ 379 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾದಲ್ಲಿ ಪುನರಾಗಮನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಪಂದ್ಯದ ಕುರಿತು ನೋಡುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಶುಭಮನ್ ಗಿಲ್ ಅವರ ಅಜೇಯ 126 ರನ್‌ಗಳ ಆಧಾರದ ಮೇಲೆ 234 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕಿವೀಸ್ ತಂಡ 66 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಹಾರ್ದಿಕ್ ಪಾಂಡ್ಯ ತಂಡ ಕಿವೀಸ್ವಿರುದ್ಧ 2-1 ಅಂತರದಿಂದ ಸರಣಿ ಜಯಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ