• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS: ಕೊಹ್ಲಿ ಕಣ್ಣು ಕೆಂಪಾಗುವಂತೆ ನಡೆದುಕೊಂಡ ಹಾರ್ದಿಕ್​! ವಿರಾಟ್​ ಮಾತು ಕಡೆಗಣಿಸಿ ತಪ್ಪು ಮಾಡಿದ್ರಾ ಪಾಂಡ್ಯ?

IND vs AUS: ಕೊಹ್ಲಿ ಕಣ್ಣು ಕೆಂಪಾಗುವಂತೆ ನಡೆದುಕೊಂಡ ಹಾರ್ದಿಕ್​! ವಿರಾಟ್​ ಮಾತು ಕಡೆಗಣಿಸಿ ತಪ್ಪು ಮಾಡಿದ್ರಾ ಪಾಂಡ್ಯ?

ವಿರಾಟ್-ಹಾರ್ದಿಕ್

ವಿರಾಟ್-ಹಾರ್ದಿಕ್

Hardik-Virat: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ನಿಯಮಿತ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಪಾಂಡ್ಯ ಮುನ್ನಡೆಸಿದ್ದರು. ಆದರೆ 2ನೇ ಪಂದ್ಯಕ್ಕೆ ರೋಹಿತ್ ವಾಪಸ್ಸಾಗಲಿದ್ದಾರೆ.

  • Share this:

ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ (IND vs AUS) 5 ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಿಯಮಿತ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲ ಏಕದಿನ ಪಂದ್ಯದಲ್ಲಿ ಆಡದ ಕಾರಣ ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವ ವಹಿಸಿಕೊಂಡಿದ್ದಾರು. ಪಂದ್ಯದ ವೇಳೆ ಸಂಭವಿಸಿದ ಅದೊಂದು ಘಟನೆಯನ್ನು ನೋಡಿದ ವಿರಾಟ್ ಕೊಹ್ಲಿ (Virat Kohli)  ಅಭಿಮಾನಿಗಳು ಹಾರ್ದಿಕ್​ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಸಂಬಂಧದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.


ವಿರಾಟ್ ಜೊತೆ ಹಾರ್ದಿಕ್ ಅನುಚಿತ ವರ್ತನೆ:


20ನೇ ಓವರ್ ಮುಗಿದ ಬಳಿಕ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್ ಜೊತೆ ನಿಂತು ಏನೋ ಮಾತನಾಡುತ್ತಿದ್ದರು. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಹಾರ್ದಿಕ್ ಗೆ ಏನನ್ನೋ ವಿವರಿಸಲು ಬಯಸಿದ್ದರು, ಆದರೆ ಹಾರ್ದಿಕ್ ಪಾಂಡ್ಯ ಅವರು ಕೊಹ್ಲಿಯ ಮಾತನ್ನು ಕೇಳದೆ ಅಲ್ಲಿಂದ ತೆರಳಿದರು. ಇದರಿಂದ ಬೇಸರಗೊಂಡಿರುವ ವಿರಾಟ್ ಕೊಹ್ಲಿ ಮನಸಿನಿಂದ ಏನು ಬೇಕಾದರೂ ಮಾಡು ಹೋಗು ಎಂದು ಹೇಳಿದ ರೀತಿ ವಾಪಸ್ಸಾಗಿದ್ದಾರೆ. ಹಾರ್ದಿಕ್ ಸಹ ಮುಂದೆ ಹೋದರು ಮತ್ತು ವಿರಾಟ್ ಕಡೆಗೆ ಹಿಂತಿರುಗಿ ಸಹ ನೋಡಲಿಲ್ಲ.



ನಾಯಕತ್ವದಲ್ಲಿ ಯಶಸ್ವಿಯಾದ ಹಾರ್ದಿಕ್:


ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಮತ್ತು ಉಮ್ರಾನ್ ಮಲಿಕ್ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆದಿರಲಿಲ್ಲ. ಆ ಸರಣಿಯಲ್ಲೂ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲಾಗಿತ್ತು. ನಾಯಕತ್ವದ ವಿಸ್ಮಯವನ್ನು ತೋರಿಸುತ್ತಿರುವುದಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಹೊರಗಿನಿಂದ ಯಾರು ಏನು ಹೇಳುತ್ತಾರೆ ಎಂಬುದು ನಮ್ಮ ಮಟ್ಟದಲ್ಲಿ ಮುಖ್ಯವಲ್ಲ. ಇದು ನನ್ನ ತಂಡ, ಆದ್ದರಿಂದ ನಾನು ಮತ್ತು ಕೋಚ್ ಮಾತುಗಳಿಗಷ್ಟೇ ಇಲ್ಲಿ ಅವಕಾಶ ಎಂದು ಹೇಳಿದ್ದರು.


ಇದನ್ನೂ ಓದಿ: KL Rahul: ಕೆಎಲ್​ ರಾಹುಲ್​ ಭರ್ಜರಿ ಕಂಬ್ಯಾಕ್​​; ಟೀಕಿಸಿದವ್ರಿಗೆ ಬ್ಯಾಟ್​ ಮೂಲಕವೇ ಉತ್ತರಿಸಿದ ಕನ್ನಡಿಗ


ಭಾರತಕ್ಕೆ ಸರಣಿ ಮುನ್ನಡೆ:


ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಶುಕ್ರವಾರ, ಮಾರ್ಚ್ 17 ರಂದು ಮುಂಬೈನಲ್ಲಿ ನಡೆಯಿತು. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ 3-3 ವಿಕೆಟ್ ಪಡೆದರು ಮತ್ತು ಇಡೀ ಆಸ್ಟ್ರೇಲಿಯಾ ತಂಡವು ಕೇವಲ 188 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತದ ಆರಂಭ ಅತ್ಯಂತ ಕಳಪೆಯಾಗಿತ್ತು. ಅರ್ಧದಷ್ಟು ತಂಡವು 83 ರನ್‌ಗಳಿಗೆ ಫೆವೆಲಿಯನ್​ ಸೇರಿತ್ತು. ಇಲ್ಲಿಂದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಇನ್ನಿಂಗ್ಸ್ ನಿಭಾಯಿಸಿ ಪಂದ್ಯ ಮುಗಿಸಿದರು.




ಕಂಬ್ಯಾಕ್​ ಮಾಡಿದ ರಾಹುಲ್​:


ಮುಂಬೈನಲ್ಲಿ ಕೆಎಲ್ ರಾಹುಲ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಒಂದು ಸಮಯದಲ್ಲಿ ಟೀಂ ಇಂಡಿಯಾ ಅತ್ಯಂತ ಸುಲಭದ ಗುರಿಯ ಮುಂದೆಯೂ ಪಂದ್ಯವನ್ನು ಕಳೆದುಕೊಳ್ಳುತ್ತದೆ ಎಂದು ಅನಿಸಿತ್ತು. ಆದರೆ ಕೆಎಲ್ ರಾಹುಲ್ ಅದ್ಭುತ ಆಟ ಭಾರತದ ಗೆಲುವನ್ನು ಖಾತ್ರಿಪಡಿಸಿತು. ಈ ಅದ್ಭುತ ಇನ್ನಿಂಗ್ಸ್ ಆಧಾರದ ಮೇಲೆ ಕೆಎಲ್ ರಾಹುಲ್ ತಮ್ಮ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ. ಕಳಪೆ ಫಾರ್ಮ್‌ನೊಂದಿಗೆ ಹೋರಾಡಿದ ಕೆಎಲ್‌ಗೆ ಈ ವರ್ಷದ ಆರಂಭದಲ್ಲಿ ಟಿ 20 ಸ್ವರೂಪದಿಂದ ಹೊರಬಂದಿದ್ದರು. ಇದರ ಹೊರತಾಗಿಯೂ, ಅವರು ಟೆಸ್ಟ್‌ನಲ್ಲಿ ಉಪನಾಯಕರಾಗಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದ ನಂತರ ಅವರನ್ನು ಉಪನಾಯಕತ್ವದಿಂದ ತೆಗೆದುಹಾಕಲಾಯಿತು. ಆದರೆ ಇದೀಗ ಅವರು ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು