ಅಶ್ಲೀಲ ಹೇಳಿಕೆ: ಆಸ್ಟ್ರೇಲಿಯಾ ಸರಣಿಯಿಂದ ಹಾರ್ದಿಕ್ ಪಾಂಡ್ಯ​, ಕನ್ನಡಿಗ ರಾಹುಲ್ ಔಟ್

zahir | news18
Updated:January 12, 2019, 2:29 PM IST
ಅಶ್ಲೀಲ ಹೇಳಿಕೆ: ಆಸ್ಟ್ರೇಲಿಯಾ ಸರಣಿಯಿಂದ ಹಾರ್ದಿಕ್ ಪಾಂಡ್ಯ​, ಕನ್ನಡಿಗ ರಾಹುಲ್ ಔಟ್
ರಾಹುಲ್​-ಹಾರ್ದಿಕ್
zahir | news18
Updated: January 12, 2019, 2:29 PM IST
ಟೀಂ ಇಂಡಿಯಾದ ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್​ ರಾಹುಲ್​ ಆಸ್ಟ್ರೇಲಿಯಾದಿಂದ ತವರಿಗೆ ಮರಳಲಿದ್ದಾರೆ. ಕಾಂಗರೂ ನೆಲದಲ್ಲಿ ನಡೆಯುತ್ತಿರುವ ಏಕದಿನ ಸರಣಿಯನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಾಸಾಗುವಂತೆ ಇಬ್ಬರು ಆಟಗಾರಿರಿಗೆ ಬಿಸಿಸಿಐ ಸೂಚಿಸಿದೆ. ಇತ್ತೀಚೆಗೆ ಖ್ಯಾತ ಟಿವಿ ಟಾಕ್ ಶೋ ಕಾಫಿ ವಿತ್ ಕರಣ್​ನಲ್ಲಿ ಮಹಿಳೆಯರ ಬಗ್ಗೆ ಹಾರ್ದಿಕ್, ರಾಹುಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಹಿನ್ನೆಲೆಯಲ್ಲಿ ಬಿಸಿಸಿಐ ಇಬ್ಬರು ಆಟಗಾರರಿಂದ ಸ್ಪಷ್ಟನೆ ಕೋರಿತ್ತು. ಆದರೆ ಆಟಗಾರರ ಸ್ಪಷ್ಟನೆಯನ್ನು ಪರಿಗಣಿಸದ ಬಿಸಿಸಿಐ ವಿಚಾರಣೆ ನಡೆಸಲು ತೀರ್ಮಾನಿಸಿದೆ. ಈ ವಿಚಾರಣೆ ಮುಕ್ತಾಯಗೊಳ್ಳುವವರೆಗೆ ಇಬ್ಬರನ್ನು ಅಮಾನತಿನಲ್ಲಿಡಲು ನಿರ್ಧರಿಸಲಾಗಿದೆ. ಇದರಿಂದ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದಿಂದ ಇಬ್ಬರನ್ನು ವಾಪಾಸು ಕರೆಸಿಕೊಳ್ಳುತ್ತಿದ್ದೇವೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಭಾರತ ತಂಡ ಆಲ್​ರೌಂಡರ್​ ಹಾರ್ದಿಕ ಪಾಂಡ್ಯ ಮತ್ತು ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಕನ್ನಡಿಗೆ ರಾಹುಲ್​ ಶನಿವಾರ ಅಥವಾ ಭಾನುವಾರ ಭಾರತಕ್ಕೆ ಮರಳಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಟೀ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಆಟಗಾರರ ವಿವಾದಕ್ಕೂ ತಂಡಕ್ಕೂ ಸಂಬಂಧವಿಲ್ಲ. ಹಾರ್ದಿಕ್‌ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಆಲ್​ರೌಂಡರ್​ ಸ್ಥಾನವನ್ನು ತುಂಬಲಿದ್ದಾರೆ ಎಂದು ತಿಳಿಸಿದ್ದಾರೆ.

ತನಿಖೆ ಪೂರ್ಣಗೊಳ್ಳುವವರೆಗೂ ಇಬ್ಬರು ಆಟಗಾರ ವಿರುದ್ಧ ಅಮಾನತು ಶಿಕ್ಷೆ ವಿಧಿಸಲಾಗುತ್ತಿದ್ದು, ಇದರಿಂದ ಮುಂಬರುವ ನ್ಯೂಜಿಲ್ಯಾಂಡ್​ ಸರಣಿ ವೇಳೆಯು ಹಾರ್ದಿಕ್ ಮತ್ತು ರಾಹುಲ್ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಆಟಗಾರರು ಖಾಸಗಿ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಬಗ್ಗೆ ಬಿಸಿಸಿಐ ನಿರ್ಬಂಧ ಹೇರುವ ಸಾಧ್ಯತೆಯನ್ನು ಅಲ್ಲೆಗೆಳೆಯುವಂತಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಕೇವಲ 1400 ರೂ. ಉಳಿತಾಯ ಮಾಡಿ, ಕೆಲಸಕ್ಕೆ ಸೇರುವ ಮುನ್ನ 1 ಕೋಟಿ ರೂ. ನಿಮ್ಮದಾಗಿಸಿ..!

ಬಾಲಿವುಡ್​ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ ಚಾಟ್​ ಶೋ ಕಾಫಿ ವಿತ್ ಕರಣ್'ನಲ್ಲಿ ಹಾರ್ದಿಕ್ ಮತ್ತು ರಾಹುಲ್​ ಸ್ತ್ರೀ ದ್ವೇಷಿ ಹಾಗೂ ಕಾಮ ಪ್ರಚೋದಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.  ಆಟಗಾರರ ಇಂತಹ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ ಆಡಳಿತ ಮಂಡಳಿ ಆಟಗಾರರನ್ನು ಸರಣಿಯಿಂದ ಕೈ ಬಿಡುವಂತಹ ತೀರ್ಮಾನ ತೆಗೆದುಕೊಂಡಿದೆ.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ