ಈ ಆಟಗಾರನ್ನೇಕೆ ಆಸ್ಟ್ರೇಲಿಯಾ ಟೂರ್​​ಗೆ ಆಯ್ಕೆ ಮಾಡಿಲ್ಲ?; ಬಿಸಿಸಿಐ ವಿರುದ್ಧ ಹರ್ಭಜನ್ ಸಿಂಗ್​​ ಗರಂ

ಮಯಾಂಕ್ ಅಗರ್ವಾಲ್ ಸಹ ಮೂರು ರೀತಿಯ ಪಂದ್ಯಗಳಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು, ಮನೀಷ್ ಪಾಂಡೆ ಟಿ20 ಹಾಗೂ ಏಕದಿನ ಟೀಮ್ ಇಂಡಿಯಾ ಪರ ಆಡಲಿದ್ದಾರೆ.

Harbhajan Singh

Harbhajan Singh

 • Share this:
  ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಬಿಸಿಸಿಐ ತಂಡ ಪ್ರಕಟಿಸಿದೆ. ಭಾರತ 4 ಟೆಸ್ಟ್, 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ಐಪಿಎಲ್​ನಲ್ಲಿ ಗಾಯಗೊಂಡಿರುವ ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಹಾಗೂ ವೇಗದ ಬೌಲರ್​ ಇಶಾಂತ್ ಶರ್ಮಾ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಟೀಂ ಇಂಡಿಯಾ ಪ್ರಕಟಗೊಂಡ ಬೆನ್ನಲ್ಲೇ ಭಾರತದ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಆಕ್ರೋಶ ಹೊರ ಹಾಕಿದ್ದಾರೆ. ಒಬ್ಬರಿಗೆ ಒಂದೊದು ನಿಯಮವೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

  ಇನ್ನು, ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಕನ್ನಡಿಗ ಕೆಎಲ್ ರಾಹುಲ್ ಉಪನಾಯಕರಾಗಿ ಆಯ್ಕೆಯಾಗಿದ್ದು, ಅದರೊಂದಿಗೆ ಟೆಸ್ಟ್​ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮಯಾಂಕ್ ಅಗರ್ವಾಲ್ ಸಹ ಮೂರು ರೀತಿಯ ಪಂದ್ಯಗಳಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು, ಮನೀಷ್ ಪಾಂಡೆ ಟಿ20 ಹಾಗೂ ಏಕದಿನ ಟೀಮ್ ಇಂಡಿಯಾ ಪರ ಆಡಲಿದ್ದಾರೆ.

  ಆದರೆ, ಮುಂಬೈ ಇಂಡಿಯನ್ಸ್​ ತಂಡದ ಆಟಗಾರ ಸೂರ್ಯ ಕುಮಾರ್​ ಯಾದವ್​ ಅವರನ್ನು ಟೀಂ ಇಂಡಿಯಾಗೆ ಸೇರ್ಪಡೆ ಮಾಡಿಕೊಳ್ಳದೆ ಇರುವುದಕ್ಕೆ ಬಜ್ಜಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.  ಸೂರ್ಯ ಕುಮಾರ್​ ಟೀಂ ಇಂಡಿಯಾಗೆ ಏಕೆ ಆಯ್ಕೆಆಗಿಲ್ಲ ಎಂಬುದು ತಿಳಿಯುತ್ತಿಲ್ಲ. ಅವರು ಪ್ರತಿ ಐಪಿಎಲ್​ ಹಾಗೂ ರಣಜಿ ಮ್ಯಾಚ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಒಬ್ಬರಿಗೆ ಒಂದೊಂದು ನಿಯಮವನ್ನು ಮಾಡುವುದೇಕೆ? ಬಿಸಿಸಿಐ ಒಮ್ಮೆ ಅವರ ದಾಖಲೆಗಳನ್ನು ಒಮ್ಮೆ ತಿರುವಿ ಹಾಕಲಿ ಎಂದಿದ್ದಾರೆ.
  Published by:Rajesh Duggumane
  First published: