2019 ವಿಶ್ವಕಪ್​​ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್-ರಿಷಭ್ ಪಂತ್​​ಗಿಲ್ಲವಂತೆ ಸ್ಥಾನ

ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ವಿಶ್ವಕಪ್​​​ಗೆ ಭಾರತದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, ಪ್ರಮುಖ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್​​ರನ್ನು ಹೊರಗಿಟ್ಟಿದ್ದಾರೆ.

Vinay Bhat | news18
Updated:February 12, 2019, 1:53 PM IST
2019 ವಿಶ್ವಕಪ್​​ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್-ರಿಷಭ್ ಪಂತ್​​ಗಿಲ್ಲವಂತೆ ಸ್ಥಾನ
ಕೆ ಎಲ್ ರಾಹುಲ್ ಹಾಗೂ ರಿಷಭ್ ಪಂತ್
Vinay Bhat | news18
Updated: February 12, 2019, 1:53 PM IST
2019 ವಿಶ್ವಕಪ್​​ಗೆ ಇನ್ನೇನು ಕೇವಲ ಎರಡು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಆಟಗಾರರ ಪ್ರಯೋಗದಲ್ಲಿ ತೊಡಗಿದ್ದು, ಟೀಂ ಇಂಡಿಯಾ ಕೂಡ ಹೊರತಾಗಿಲ್ಲ. ಅಂತೆಯೆ ಕ್ರಿಕೆಟ್ ದಿಗ್ಗಜರು ಭಾರತ ತಂಡದಿಂದ ಯಾವಯಾವ ಆಟಗಾರರು ವಿಶ್ವಕಪ್​​ನಲ್ಲಿ ಆಡಬೇಕು ಎಂಬ ಅಭಿಪ್ರಾಯ ಹೊರಹಾಕುತ್ತಿದ್ದಾರೆ.

ಸದ್ಯ ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ವಿಶ್ವಕಪ್​​​ಗೆ ಭಾರತದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, ಪ್ರಮುಖ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್​​ರನ್ನು ಹೊರಗಿಟ್ಟಿದ್ದಾರೆ.

ವಿಶ್ವಕಪ್​​ನಲ್ಲಿ ಹೇಗಾದರು ಸ್ಥಾನ ಪಡೆಯಬೇಕೆಂದು ರಾಹುಲ್ ಹರಸಾಹಸ ಪಡುತ್ತಿದ್ದಾರೆ. ಇತ್ತ ಸುನೀಲ್ ಗವಾಸ್ಕರ್ ಸೇರಿದಂತೆ ಪ್ರಮುಖರು ರಾಹುಲ್ ವಿಶ್ವಕಪ್​​​​​ ತಂಡದಲ್ಲಿ ಇರಬೇಕು ಎಂದು ಹೇಳಿದ್ದಾರೆ. ಹೀಗಿರುವಾಗ ಭಜ್ಜಿ ರಾಹುಲ್​​​​ರನ್ನು ಬಿಟ್ಟು ಉಳಿದ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: IPL​ 2019: ಐಪಿಎಲ್​ ಆರಂಭಕ್ಕೂ ಮುನ್ನವೇ ಬಣ್ಣ ಬದಲಿಸಿದ ರಾಜಸ್ಥಾನ್ ರಾಯಲ್ಸ್

​​ಹರ್ಭಜನ್ ಪ್ರಕಾರ ವಿಶ್ವಕಪ್​​ನಲ್ಲಿ ಭಾರತದ ಪರ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ, ಕೇದರ್ ಜಾಧವ್ ಬ್ಯಾಟಿಂಗ್ ಬಲವಾದರೆ ಆಲ್ರೌಂಡರ್ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ಹಾಗೂ ವಿಜಯ್ ಶಂಕರ್ ವಹಿಸಿಕೊಳ್ಳಬೇಕು ಎಂದಿದ್ದಾರೆ. ಈ ಮೂಲಕ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾರನ್ನು ಕೂಡ ಕಡೆಗಣಿಸಿ ಅಚ್ಚರಿ ಮೂಡಿಸಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್​ಗಳಾಗಿ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಆಯ್ಕೆಯಾಗಿದ್ದರೆ, ವೇಗಿಗಳ ಪೈಕಿ ಜಸ್​​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ತಂಡದಲ್ಲಿದ್ದರೆ ಉತ್ತಮ ಎಂಬ ಅಭಿಪ್ರಾಯ ಹರ್ಭಜನ್ ವ್ಯಕ್ತಪಡಿಸಿದ್ದಾರೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ