ಹರ್ಭಜನ್​ರಿಂದ ಮತ್ತೊಂದು ಕಪಾಳ ಮೋಕ್ಷ: ಈ ಬಾರಿ ಪೊಲೀಸ್​ಗೆ ಹೊಡೆದ ಭಜ್ಜಿ

ಭಜ್ಜಿ ಐಪಿಎಲ್​​ ಸಮಯದಲ್ಲಿ ಮಾತ್ರ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದ ಸಮಯ ಇತರೆ ಕೆಲಸದಲ್ಲಿ ತೊಡಗಿರುತ್ತಾರೆ. ಸದ್ಯ ಇವರ ಹಾಟ್ ನ್ಯೂಸ್ ಏನೆಂದರೆ, ಪೊಲೀಸ್ ಒಬ್ಬರಿಗೆ ಕಪಾಳ ಮೋಕ್ಷ ಮಾಡಿರುವುದು.

Vinay Bhat | news18
Updated:February 5, 2019, 5:09 PM IST
ಹರ್ಭಜನ್​ರಿಂದ ಮತ್ತೊಂದು ಕಪಾಳ ಮೋಕ್ಷ: ಈ ಬಾರಿ ಪೊಲೀಸ್​ಗೆ ಹೊಡೆದ ಭಜ್ಜಿ
ಹರ್ಭಜಿನ್ ಸಿಂಗ್ (pic: twitter, edited)
Vinay Bhat | news18
Updated: February 5, 2019, 5:09 PM IST
ಹೊಸ ಹೊಸ ಮುಖಗಳು ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದಿರುವವರ ಪೈಕಿ ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಒಬ್ಬರು. ಹೀಗಾಗಿಯೆ ಭಜ್ಜಿ ಐಪಿಎಲ್​​ ಸಮಯದಲ್ಲಿ ಮಾತ್ರ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದ ಸಮಯ ಇತರೆ ಕೆಲಸದಲ್ಲಿ ತೊಡಗಿರುತ್ತಾರೆ.

ಭಜ್ಜಿ ಅವರ ಸದ್ಯದ ಹಾಟ್ ನ್ಯೂಸ್ ಏನೆಂದರೆ, ಪೊಲೀಸ್ ಒಬ್ಬರಿಗೆ ಕಪಾಳ ಮೋಕ್ಷ ಮಾಡಿರುವುದು.

ಮೊನ್ನೆಯಷ್ಟೆ ಹರ್ಭಜನ್ ಅವರು ಬಿಡುವಿನ ವೇಳೆಯಲ್ಲಿ WWEಯ ಭಾರತದ ಕುಸ್ತಿಪಟು ದಿ ಗ್ರೇಟ್ ಖಾಲಿ ಅವರ ಅಕಾಡೆಮಿ CWEಗೆ ಬೇಟಿ ನೀಡಿದ್ದಾರೆ. ಪಂಜಾಬ್​​ನ ಜಲಂಧರ್​​​ನಲ್ಲಿ ಈ ಸಂಸ್ಥೆಯಿದ್ದು, ಇಲ್ಲಿನ ವಿಧ್ಯಾರ್ಥಿಗಳಿಗೆ ಭಜ್ಜಿ ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ಮತ್ತಷ್ಟು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: ಪಂತ್-ಖಲೀಲ್ ಕಮ್​​ಬ್ಯಾಕ್​​​: ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ-20ಗೆ ಭಾರತದ ಸಂಭಾವ್ಯ ಪಟ್ಟಿ

ಇದೇವೇಳೆ ಹರ್ಭಜನ್ ಮಾತನಾಡುತ್ತಿರುವಾಗ ದುಬೆ-ಜಿ ಎಂಬ ಕುಸ್ತಿಪಟು ಪೊಲೀಸ್ ಡ್ರೆಸ್​​​ನಲ್ಲಿ ತನ್ನನ್ನು ಪರಿಚಯಿಸುತ್ತ ನಾನು ಈ CWE ಕುಸ್ತಿ ಕೇಂದ್ರದ ಸಿಂಗಮ್ ಎಂದು ಹೇಳುತ್ತಾರೆ. ಇದಕ್ಕೆ ಭಜ್ಜಿ ತಮಾಷೆಯಾಗಿ ಕಾಲೆಳೆಯುತ್ತ, ನೀವು ಯಾವರೀತಿಯ ಸಿಂಗಮ್?, ಸಿಂಗಮ್ ಅಂದ್ರೆ ಬಲಶಾಲಿಯಾಗಿರುತ್ತಾರೆ. ಅವರಿಗೆ ತುಂಬಾ ಶಕ್ತಿ ಇರುತ್ತದೆ. ನಿಮ್ಮಂತೆ ಇರುವುದಿಲ್ಲ ಎಂದು ಕಾಲೆಳೆದಿದ್ದಾರೆ.

ಇದರಿಂದ ಕೋಪಗೊಂಡ ಕುಸ್ತಿಪಟು ರಿಂಗ್​​​​ಗೆ ಬಂದು ನನ್ನಜೊತೆ ಸೆಣೆಸಾಟ ನಡೆಸು ಎಂದಿದ್ದಾರೆ. ಇದಕ್ಕೆ ಒಪ್ಪಿದ ಭಜ್ಜಿ ರಿಂಗ್​​ನಲ್ಲೇ ಕುಸ್ತಿಪಟುವಿಗೆ ಕಪಾಳಕ್ಕೆ ಹೊಡೆದು ನೆಲಕ್ಕೆ ಉರುಳಿಸಿದ್ದಾರೆ. ಬಳಿಕ ನೋವನ್ನು ತಾಳಲಾರದೆ ದುಬೆ ಅವರು ರಿಂಗ್​ನಿಂದ ಹೊರ ನಡೆದಿದ್ದಾರೆ.

ಇದನ್ನೂ ಓದಿ: ರಿಷಭ್ ಪಂತ್​ರ ಈ ವಿಭಿನ್ನ ಶಾಟ್​ಗೆ ಏನೆಂದು ಹೆಸರಿಡಬಹುದು?: ವಿಡಿಯೋ ವೈರಲ್
Loading...

ಹರ್ಭಜನ್ ಈ ವಿಡಿಯೋವನ್ನು ತನ್ನ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ಸಾಕಷ್ಟು ಕಮೆಂಟ್​​ಗಳು ಬರುತ್ತಿವೆ.

  
View this post on Instagram
 

Some CWE time at @dalipsinghcwe Khali academy jalandhar 😜💪👊


A post shared by Harbhajan Turbanator Singh (@harbhajan3) on


First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...