ವಿವಾದಕ್ಕೆ ಕಾರಣವಾಗಿದೆ ಇಂಡೋ-ವಿಂಡೀಸ್ ಟೆಸ್ಟ್​ ಬಗ್ಗೆ ಭಜ್ಜಿ ಮಾಡಿರುವ ಈ ಟ್ವೀಟ್

 • Share this:
  ನ್ಯೂಸ್ 18 ಕನ್ನಡ

  ವೆಸ್ಟ್​​ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್​ ಸೇರಿದಂತೆ 272 ರನ್​​ಗಳ ದೊಡ್ಡ ಮೊತ್ತದ ಗೆಲುವು ಸಾಧಿಸಿದೆ. ಈ ಮಧ್ಯೆ ಟೀಂ ಇಂಡಿಯಾ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೆರಿಬಿಯನ್ನರ ಕಳಪೆ ಆಟದ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.

  'ವೆಸ್ಟ್​ ಇಂಡೀಸ್ ತಂಡದ ಪರಿಸ್ಥಿತಿ ನೋಡಲು ದುಃಖವಾಗುತ್ತದೆ. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಕೆರಿಬಿಯನ್ನರು ರಣಜಿಯಲ್ಲಿ ಕ್ವಾರ್ಟರ್ ಫೈನಲ್ ತಲುಪುತ್ತಾ? ತಲುಪಲು ಸಾಧ್ಯವಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

     ಹರ್ಭಜನ್ ಅವರ ಈ ಟ್ವೀಟ್​ಗೆ ಸಾಕಷ್ಟು ಕಮೆಂಟ್​​ಗಳು ಬರುತ್ತಿದ್ದು, ವೆಸ್ಟ್​ ಇಂಡೀಸ್ ಒಂದು ಉತ್ತಮ ತಂಡ, ಅವರ ಪರಿಸ್ಥಿತಿ ಈಗ ರೀತಿ ಇರಬಹುದು ಅಷ್ಟೆ ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಇನ್ನೂ ಕೆಲವರು ಮೊನ್ನೆಯಷ್ಟೇ ಇಂಗ್ಲೆಂಡ್ ವಿರುದ್ಧ ಭಾರತದ ಪ್ರದರ್ಶನ ಹೇಗಿತ್ತು ಎಂಬುದನ್ನು ನೆನಪುಮಾಡಿಕೊಳ್ಳಿ ಎಂದು ನೆಟ್ಟಿಗರು ಭಜ್ಜಿ ಟ್ವೀಟ್​ಗೆ ಪ್ರತ್ಯುತ್ತರ ನೀಡಿದ್ದಾರೆ.
  First published: