2ನೇ ಟೆಸ್ಟ್ ಪಂದ್ಯಕ್ಕೆ ಅಶ್ವಿನ್ ಜೊತೆ ಕುಲ್ದೀಪ್ ಕಣಕ್ಕಿಳಿಯಲಿ; ಹರ್ಭಜನ್ ಸಿಂಗ್

news18
Updated:August 8, 2018, 5:38 PM IST
2ನೇ ಟೆಸ್ಟ್ ಪಂದ್ಯಕ್ಕೆ ಅಶ್ವಿನ್ ಜೊತೆ ಕುಲ್ದೀಪ್ ಕಣಕ್ಕಿಳಿಯಲಿ; ಹರ್ಭಜನ್ ಸಿಂಗ್
news18
Updated: August 8, 2018, 5:38 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್​ ಸರಣಿ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ನಾಳೆಯಿಂದ ಆರಂಭವಾಗುವ ಎರಡನೇ ಟೆಸ್ಟ್​ನಲ್ಲಿ ಇಬ್ಬರು ಸ್ಪಿನ್ನರ್​​​ಗಳನ್ನು ಆಡಿಸುವುದು ಸೂಕ್ತ ಎಂದು ಹೇಳಿದ್ದಾರೆ. ಮೊದಲ ಟೆಸ್ಟ್​​ನಲ್ಲಿ ಎಡ್ಜ್​​​​​​ಬಸ್ಟನ್​​​ನ ವಾತಾವರಣದ ಬಗ್ಗೆ ಅರಿತುಕೊಳ್ಳುವಲ್ಲಿ ಟೀಂ ಇಂಡಿಯಾ ಆಟಗಾರರು ವಿಫಲರಾಗಿದ್ದರು. ಹೀಗಾಗಿ 31 ರನ್​ಗಳ ಸೋಲು ಕಾಣಬೇಕಾಯಿತು ಎಂದಿದ್ದಾರೆ.

ಎಡ್ಜ್​​​​​​ಬಸ್ಟನ್​​​ನಲ್ಲಿ ಒಬ್ಬ ಸ್ಪಿನ್ನರ್​​ ಅನ್ನು ಕಣಕ್ಕಿಳಿಸಿ ಭಾರತ ತಂಡ ತಪ್ಪು ಮಾಡಿತ್ತು. ಮೊದಲ ಟೆಸ್ಟ್​ನಲ್ಲಿ ಹಾರ್ದಿಕ್ ಪಾಂಡ್ಯ ಬದಲು ಕುಲ್ದೀಪ್ ಯಾದವ್ ಅವರನ್ನು ಕಣಕ್ಕಿಳಿಸಿದ್ದರೆ ಉತ್ತಮವಿತ್ತು. ನಾಲ್ಕು ವೇಗಿಗಳ ಹಾಗೂ ಕೇವಲ ಒಬ್ಬ ಸ್ಪಿನ್ನರ್​​ ಆಯ್ಕೆ ಮಾಡಿದ್ದು ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದೆ ಎಂದಿದ್ದಾರೆ. ಪಾಂಡ್ಯ ಮೊದಲ ಟೆಸ್ಟ್​ನಲ್ಲಿ ಮಾಡಿದ್ದು ಕೇವಲ 10 ಓವರ್​​ಗಳನ್ನಷ್ಟೆ. ಎರಡನೇ ಇನ್ನಿಂಗ್ಸ್​ನಲ್ಲಿ ಒಂದು ಓವರ್ ಕೂಡ ಮಾಡಿಲ್ಲ. ಕುಲ್ದೀಪ್ ಯಾದವ್ ಅವರು ಗೂಗ್ಲಿ ಬೌಲಿಂಗ್ ಮಾಡುವಲ್ಲಿ ನಿಸ್ಸೀಮರು. ಅವರಿಗೆ ಮೊದಲ ಪಂದ್ಯದಲ್ಲಿ ಅವಿಕಾಶ ನೀಡಬೇಕಿತ್ತು. ಈಗ ದ್ವಿತೀಯ ಟೆಸ್ಟ್​ಗಾದರು ಆಡಿಸಿದರೆ ತಂಡಕ್ಕೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಇನ್ನು ಇಂಗ್ಲೆಂಡ್​​ನಲ್ಲಿ ಉಷ್ಣಾಂಶ ತಗ್ಗುವ ಬಗ್ಗೆ ಹವಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಎರಡನೇ ಟೆಸ್ಟ್​ಗೆ ಭಾರತ ಪರ ಆರ್. ಅಶ್ವಿನ್ ಜೊತೆ ಕುಲ್ದೀಪ್ ಯಾದವ್ ಕೂಡ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಲ್ಲದೆ ಇಂಗ್ಲೆಂಡ್ ತಂಡದಲ್ಲೂ ಆದಿಲ್ ರಶೀದ್ ಜೊತೆ ಮತ್ತೊಬ್ಬ ಸ್ಪಿನ್ನರ್ ಮೊಯೀನ್ ಅಲಿ ಕೂಡ ಆಡುವ ಸಂಭವವಿದೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ