Happy Birthday Virat Kohli: ವಿರಾಟ್ ಕೊಹ್ಲಿ​ ಅಬ್ಬರಿಸಿದ ಈ ಐದು ಪಂದ್ಯಗಳನ್ನು ಯಾರೂ ಮರೆಯುವಂತಿಲ್ಲ

ವಿರಾಟ್​ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇದಾದ ನಂತರದಲ್ಲಿ ಒಂದಾದರ ಮೇಲೆ ಒಂದರಂತೆ ದಾಖಲೆ ಬರೆಯುತ್ತಲೇ ಇದ್ದಾರೆ.  ಅವರು ಆಡಿದ ಐದು ಅತ್ಯದ್ಭುತ ಮ್ಯಾಚ್​ಗಳ ಬಗ್ಗೆ ಇಲ್ಲಿದೆ ವಿವರ.

Virat Kohli

Virat Kohli

 • Share this:
  ವಿರಾಟ್​ ಕೊಹ್ಲಿ ಭಾರತ ಕ್ರಿಕೆಟ್​ ಕಂಡ ಅತ್ಯದ್ಭುತ ಆಟಗಾರ. ಕಳೆದ ಒಂದು ದಶಕದಲ್ಲಿ ವಿರಾಟ್​ ಕೊಹ್ಲಿಯಷ್ಟು ಎತ್ತರಕ್ಕೆ ಬೆಳೆದ ಆಟಗಾರ ಮತ್ತೊಬ್ಬರಿಲ್ಲ ಎಂದರೆ ತಪ್ಪಾಗಲಾರದು. ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಕೂಡ ಹೆಚ್ಚು ಖ್ಯಾತಿ ಹೊಂದಿದ್ದಾರೆ. ವಿರಾಟ್​ ಕೊಹ್ಲಿ ಟೆಸ್ಟ್​, ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ವೇಗವಾಗಿ 8000, 9000, ಮತ್ತು 11000 ರನ್​ ತಲುಪಿದ ಆಟಗಾರ ಎನ್ನುವ ಖ್ಯಾತಿ ಕೊಹ್ಲಿಯದ್ದು.

  ವಿರಾಟ್​ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇದಾದ ನಂತರದಲ್ಲಿ ಒಂದಾದರ ಮೇಲೆ ಒಂದರಂತೆ ದಾಖಲೆ ಬರೆಯುತ್ತಲೇ ಇದ್ದಾರೆ.  ಅವರು ಆಡಿದ ಐದು ಅತ್ಯದ್ಭುತ ಮ್ಯಾಚ್​ಗಳ ಬಗ್ಗೆ ಇಲ್ಲಿದೆ ವಿವರ.

  ಹೊಬಾರ್ಟ್​ನಲ್ಲಿ ಹರಿಕೇನ್​:

  2012ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಬ್ಬರಿಸಿದ್ದರು. ಶ್ರೀಲಂಕಾ ನೀಡಿದ್ದ 321 ರನ್​ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾಗೆ ಕೊಹ್ಲಿ ಆಸರೆಯಾಗಿ ನಿಂತರು. 86 ಬಾಲ್​ಗಳಲ್ಲಿ 133 ರನ್​ ಸಿಡಿಸಿದರು. ಈ ಮೂಲಕ ಕೇವಲ 37 ಓರವರ್​ಗೆ ಶ್ರೀಲಂಕಾ ನೀಡಿದ್ದ ಗುರಿಯನ್ನು ಟೀಂ ಇಂಡಿಯಾ ತಲುಪಿತ್ತು. ಯಾರ್ಕರ್​ ಸ್ಪೆಷಲಿಸ್ಟ್​ ಲಸಿತ್​ ಮಲಿಂಗಾ ಓವರ್​ನಲ್ಲಿ 24 ರನ್​ ಬಾರಿಸುವ ಮೂಲಕ ದಿಗ್ಗಜರಿಗೂ ಅಚ್ಚರಿ ಮೂಡಿಸಿದ್ದರು

  ಏಷ್ಯಾ ಕಪ್​ನಲ್ಲಿ ಕ್ಲಾಸಿಕ್​ ಆಟ:

  ಅದು ಪಾಕಿಸ್ತಾನದ ವಿರುದ್ಧದ ಪಂದ್ಯ. ಕೊಹ್ಲಿ ಶ್ರೀಲಂಕಾ ವಿರುದ್ಧ ಅಬ್ಬರಿಸಿ ಕೆಲವೇ ತಿಂಗಳು ಕಳೆದಿದ್ದವು. ಮೊದಲು ಬ್ಯಾಟ್​ ಮಾಡಿದ್ದ ಪಾಕಿಸ್ತಾನ ಭಾರತಕ್ಕೆ 329 ರನ್​ಗಳ ಗುರಿ ನೀಡಿತ್ತು. ಇದನ್ನು ಬೆನ್ನು ಹತ್ತಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿತ್ತು. ಗೌತಮ್​ ಗಂಭೀರ್ ರನ್​ ಗಳಿಸದೆಯೇ ಔಟ್​ ಆಗಿದ್ದರು. ನಂತರ ಬ್ಯಾಟ್​ ಮಾಡಿದ ಕೊಹ್ಲಿ 183 ರನ್​ ಬಾರಿಸಿದ್ದರು. ಈ ಮೂಲಕ ಟೀಂ ಇಂಡಿಯಾ ಗೆಲುವಿನ ರುವಾರಿ ಆದರು.

  ಟಿ20 ವರ್ಡ್​​ಕಪ್​ನಲ್ಲಿ ಕೊಹ್ಲಿ ಅಬ್ಬರ:

  2016ರ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಅಬ್ಬರಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 49 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ಕೊಹ್ಲಿ 86 ರನ್​ ಬಾರಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

  ಇಂಗ್ಲೆಂಡ್​ನಲ್ಲಿ ಕೊಹ್ಲಿ ದರ್ಬಾರ್​:

  2014ರಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಸರಾಸರಿ ರನ್​ ​ ಕೇವಲ 13.50 ಇತ್ತು. ನಂತರ ಕಂಬ್ಯಾಕ್​ ಮಾಡಿದ ಕೊಹ್ಲಿ 2018ರಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಒಂದೇ ಪಂದ್ಯದಲ್ಲಿ 149 ರನ್​ ಬಾರಿಸಿದರು. ಟೆಸ್ಟ್​ನಲ್ಲಿ ಒಟ್ಟು 593 ರನ್​ ಗಳಿಸಿದ್ದರು.

  2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿದ ಕೊಹ್ಲಿ:

  2014ರಲ್ಲಿ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಅಬ್ಬರಿಸಿದ್ದರು ಟೆಸ್ಟ್​ ಮ್ಯಾಚ್​ನಲ್ಲಿ ಎರಡು ಸೆಂಚೂರಿ ಬಾರಿಸು ಮೂಲಕ ದಾಖಲೆ ಬರೆದಿದ್ದರು.
  Published by:Rajesh Duggumane
  First published: