ಕನ್ನಡಿಗ ರಾಹುಲ್ ದ್ರಾವಿಡ್​ಗೆ ಇಂದು 46ನೇ ಜನ್ಮ ದಿನ ಸಂಭ್ರಮ

ಕ್ರಿಕೆಟ್​​ ಅನ್ನೆ ಉಸಿರಾಗಿಸಿರುವ ದ್ರಾವಿಡ್ ಟೀಂ ಇಂಡಿಯಾಕ್ಕಾಗಿ ಇಂದಿಗೂ ತಮ್ಮಲ್ಲಿರುವ ಕಲೆಯನ್ನು ಕಲಿಸುತ್ತಿದ್ದಾರೆ. ದ್ರಾವಿಡ್ ಅವರ 46ನೇ ಹುಟ್ಟು ಹಬ್ಬಕ್ಕೆ ಶುಭಾಷಯಗಳ ಮಹಾಪೂರವೆ ಹರಿದುಬರುತ್ತಿದೆ.

Vinay Bhat | news18
Updated:January 11, 2019, 11:20 AM IST
ಕನ್ನಡಿಗ ರಾಹುಲ್ ದ್ರಾವಿಡ್​ಗೆ ಇಂದು 46ನೇ ಜನ್ಮ ದಿನ ಸಂಭ್ರಮ
ರಾಹುಲ್ ದ್ರಾವಿಡ್
Vinay Bhat | news18
Updated: January 11, 2019, 11:20 AM IST

ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್​ಮನ್​​ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಇಂದು 46ನೇ ಹುಟ್ಟು ಹಬ್ಬದ ಸಂಭ್ರಮ.

ಸದ್ಯ ಭಾರತ ಅಂಡರ್-19 ಹಾಗೂ ಭಾರತ ಎ ತಂಡದ ಕೋಚ್ ಆಗಿರುವ ದ್ರಾವಿಡ್ ಅವರು ಸುಮಾರು ಒಂದುವರೆ ದಶಕಗಳ ಕಾಲ ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚಿದ್ದರು. ಸಾಧನೆಗಳ ಶಿಖರವನ್ನು ಏರಿದ 'ದಿ ವಾಲ್' 164 ಟೆಸ್ಟ್​​ ಪಂದ್ಯಗಳಲ್ಲಿ 13288 ರನ್ ಕಲೆಹಾಕಿದ್ದಾರೆ. ಇದರಲ್ಲಿ 36 ಶತಕ ಹಾಗೂ 63 ಅರ್ಧಶತಕಗಳಿವೆ. ಅಂತೆಯೆ 344 ಏಕದಿನ ಪಂದ್ಯಗಳಲ್ಲಿ 10889ರನ್ ಸಿಡಿಸಿದ್ದಾರೆ.

ದ್ರಾವಿಡ್ ಅವರ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ವಿಚಾರಗಳನ್ನು ನೋಡುವುದಾದರೆ, ಕ್ರೀಸ್​ನಲ್ಲಿ ಒಟ್ಟಾರೆ 735 ಗಂಟೆ 52 ನಿಮಿಷವಿದ್ದು ಅತಿ ಹೆಚ್ಚು ಸಮಯ ಕ್ರೀಸ್​​ನಲ್ಲಿ ಕಳೆದ ಆಟಗಾರ ಎಂಬ ದಾಖಲೆ ಮಾಡಿದ್ದಾರೆ. ಅಂತೆಯೆ ಮೂರನೇ ಕ್ರಮಾಂಕದಲ್ಲಿ ಹತ್ತು ಸಾವಿನ ರನ್ ಬಾರಿಸಿದ ಮೊದಲ ಆಟಗಾರ ಎನ್ನು ಹೆಗ್ಗಳಿಕೆ ನಮ್ಮ ಕನ್ನಡಿಗನದ್ದು. ಇನ್ನೊಂದು ಪ್ರಮುಖ ವಿಷಯವೆಂದರೆ ದ್ರಾವಿಡ್ ಅವರು ವೇಗದ ಆಟಕ್ಕೆ ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಆದರೆ, 2003ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ದ್ರಾವಿಡ್ ಅವರು ಕೇವಲ 22 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು.

1996ರ ಏಪ್ರಿಲ್​​ 3 ರಂದು ಶ್ರೀಲಂಕಾ ವಿರುದ್ಧ ಪಂದ್ಯವನ್ನಾಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ದ್ರಾವಿಡ್ ಅವರು 2012ರಲ್ಲಿ ಕೊನೆಯ ಟೆಸ್ಟ್​ ಪಂದ್ಯವನ್ನು ಆಡಿದ್ದರು. ಕ್ರಿಕೆಟ್​​ ಅನ್ನೆ ಉಸಿರಾಗಿಸಿರುವ ದ್ರಾವಿಡ್ ಟೀಂ ಇಂಡಿಯಾಕ್ಕಾಗಿ ಇಂದಿಗೂ ತಮ್ಮಲ್ಲಿರುವ ಕಲೆಯನ್ನು ಕಲಿಸುತ್ತಿದ್ದಾರೆ. ದ್ರಾವಿಡ್ ಅವರ 46ನೇ ಹುಟ್ಟು ಹಬ್ಬಕ್ಕೆ ಶುಭಾಷಯಗಳ ಮಹಾಪೂರವೆ ಹರಿದುಬರುತ್ತಿದೆ.  

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ