ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಹನುಮ ವಿಹಾರಿ

news18
Updated:September 9, 2018, 8:24 PM IST
ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಹನುಮ ವಿಹಾರಿ
  • News18
  • Last Updated: September 9, 2018, 8:24 PM IST
  • Share this:
ನ್ಯೂಸ್ 18 ಕನ್ನಡ

ಲಂಡನ್ (ಸೆ. 09): ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್​​ನಲ್ಲಿ ಕೊಹ್ಲಿ ಪಡೆ ಈಗಾಗಲೇ 292 ರನ್​ಗೆ ಆಲೌಟ್ ಆಗಿ, ಅಲ್ಪ ಹಿನ್ನಡೆ ಅನುಭವಿಸಿದೆ. ಈ ಮಧ್ಯೆ ಭಾರತ ಪರ ಚೊಚ್ಚಲ ಟೆಸ್ಟ್​ ಪಂದ್ಯವನ್ನಾಡಿದ ಹನುಮ ವಿಹಾರಿ ದಾಖಲೆ ಬರೆದಿದ್ದಾರೆ.

124 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸ್​​ನೊಂದಿಗೆ 56 ರನ್​ ಬಾರಿಸಿ ವಿಹಾರಿ ಅವರು ಪದಾರ್ಪಣೆ ಟೆಸ್ಟ್​ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಸಾಲಿಗೆ ಸೇರಿದ್ದಾರೆ. ಈ ಹಿಂದೆ 1996ರಲ್ಲಿ ಇಂಗ್ಲೆಂಡ್ ವಿರುದ್ದ ಅವರ ನೆಲದಲ್ಲೇ ಗಂಗೂಲಿ ಪದಾರ್ಪಣೆ ಟೆಸ್ಟ್​ನಲ್ಲಿ 131 ರನ್ ಬಾರಿಸಿ ಶತಕದ ಸಾಧನೆ ಮಾಡಿದ್ದರು. ಇದೇ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಕೂಡ 95 ರನ್ ಗಳಿಸಿ ತಮ್ಮ ಮೊದಲ ಅರ್ಧಶತಕ ಬಾರಿಸಿದ್ದರು. ಸದ್ಯ 24 ವರ್ಷ ಪ್ರಾಯದ ವಿಹಾರಿ ಕೂಡ  ಆಡಿದ ಮೊದಲ ಟೆಸ್ಟ್​ನಲ್ಲೇ 56 ರನ್ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ತಿಸಿದ್ದಾರೆ.
First published: September 9, 2018, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading