ಲೈಂಗಿಕ ನಿಂದನೆ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತುಂಡು ಬಟ್ಟೆಗೆ ವಿದಾಯ ಹೇಳಿದ ಜರ್ಮನಿ ಜಿಮ್ನಾಸ್ಟಿಕ್ಸ್‌ ತಂಡ..!

ಯು.ಎಸ್.ನ ಪ್ರಧಾನ ಲಿಯೋಟಾರ್ಡ್‌ ಉಡುಪು ತಯಾರಕ ಜಿಕೆ ಎಲೈಟ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಮ್ಯಾಟ್ ಕೋವನ್, ಯುನಿಟಾರ್ಡ್‌ಗಳಿಗೆ ಹೆಚ್ಚಿನ ದೇಶಗಳಿಂದ ಬೇಡಿಕೆ ಬಂದಿದ್ದು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರಣಗಳಿಗಾಗಿ ನಾವು ಅದನ್ನು ಗೌರವಿಸುವ ಅಗತ್ಯವಿರುತ್ತದೆ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಒಲಿಂಪಿಕ್ಸ್ ಕ್ರೀಡಾಕೂಟ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು, ನಾರ್ವೆ ಮಹಿಳೆಯರ ಬೀಚ್ ಹ್ಯಾಂಡ್‌ಬಾಲ್ ತಂಡ ಯುರೋಪಿಯನ್ ಪಂದ್ಯಾವಳಿಗಳಲ್ಲಿ ಬಿಕಿನಿ ಬಾಟಮ್‌ಗಳನ್ನು ಹಾಕಿಕೊಂಡು ಆಟವಾಡಲು ನಿರಾಕರಿಸಿತ್ತು. ಅದರ ಬದಲಿಗೆ ಸಕಿನ್‌ ಟೈಟ್‌ ಶಾರ್ಟ್ಸ್‌ಗಳನ್ನು ಧರಿಸಿ ಆಟವಾಡಿತ್ತು. ಅದಕ್ಕಾಗಿ ಈ ತಂಡಕ್ಕೆ ಉಡುಪಿನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿತ್ತು.


  ಈಗ ಒಲಿಂಪಿಕ್ಸ್‌ನಲ್ಲೂ ಇದೇ ರೀತಿಯ ಬದಲಾವಣೆಯ ಕ್ರಾಂತಿ ಕಾಣಿಸಿಕೊಂಡಿದ್ದು, ಜರ್ಮನಿ ಮಹಿಳಾ ಜಿಮ್ನಾಸ್ಟಿಕ್ಸ್‌ ತಂಡ ಬಿಕಿನಿ ಕಟ್‌ ಲಿಯೋಟಾರ್ಡ್‌ ಅಥವಾ ತುಂಡು ಬಟ್ಟೆಗೆ ವಿದಾಯ ಹೇಳಿದ್ದು, ಪ್ಯಾಂಟ್‌ನಂತೆ ಕಾಲುಗಳವರೆಗೆ ಮುಚ್ಚಿಕೊಳ್ಳುವ ಯುನಿಟಾರ್ಡ್‌ಗಳನ್ನು ಧರಿಸಿದೆ. ಈ ಉಡುಪುಗಳು ಮಹಿಳಾ ಜಿಮ್ನಾಸ್ಟಿಕ್ಸ್‌ನ ಇತರ ತಂಡಗಳ ಬಟ್ಟೆಯಂತೆ ಹೋಲುತ್ತಿತ್ತು.


  ಜರ್ಮನ್ ಜಿಮ್ನಾಸ್ಟಿಕ್ಸ್ ತಂಡದ ಹೊಸ ಒಲಿಂಪಿಕ್ ಸೂಟ್‌ಗಳು ಇತರೇ ಮಹಿಳಾ ಕ್ರೀಡಾಪಟುಗಳಲ್ಲಿ ಸಂಚಲನ ಮೂಡಿಸಿತ್ತು. ದಶಕಗಳಿಂದ, ಮಹಿಳಾ ಜಿಮ್ನಾಸ್ಟ್‌ಗಳು ಬಿಕಿನಿಗಳನ್ನು ಧರಿಸಿ ಈ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ, ಭಾನುವಾರ ಅರ್ಹತಾ ಪಂದ್ಯದಲ್ಲಿ ಜರ್ಮನ್ ತಂಡವು ಪಾದದವರೆಗೆ ಚಾಚಿಕೊಂಡಿರುವ ಯುನಿಟಾರ್ಡ್‌ಗಳನ್ನು ಧರಿಸಿದ್ದರು, ಇದು ಜಿಮ್ನಾಸ್ಟಿಕ್ಸ್‌ನಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ನಿಂದಿಸುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮವನ್ನು ಅನುಸರಿಸಲಾಗಿದೆ ಎಂದು ಹೇಳಲಾಗಿದೆ.


  ಯುಎಸ್ಎ ಮಾಜಿ ಜಿಮ್ನಾಸ್ಟಿಕ್ಸ್ ರಾಷ್ಟ್ರೀಯ ತಂಡದ ವೈದ್ಯರಾದ ಲ್ಯಾರಿ ನಾಸರ್‌ ಅವರನ್ನು 176 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದ ನಂತರ ನಡೆಯುತ್ತಿರುವ ಮೊದಲ ಬೇಸಿಗೆ ಕ್ರೀಡಾಕೂಟವಾಗಿದೆ. ಈ ಕ್ರೀಡೆಯ ಕೆಲವು ಶ್ರೇಷ್ಠ ತಾರೆಗಳು ಸೇರಿದಂತೆ ನೂರಾರು ಜಿಮ್ನಾಸ್ಟ್‌ಗಳನ್ನು ಲೈಂಗಿಕವಾಗಿ ನಿಂದಿಸಿದ್ದ ಕಾರಣ ಇವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಅವರಿಗೆ ಶಿಕ್ಷೆ ನೀಡುವ ಸಮಯದಲ್ಲಿ ಕ್ರೀಡಾಪಟುಗಳು, ಅದರಲ್ಲೂ ಕೆಲವು ಒಲಿಂಪಿಯನ್ನರು, ಈ ರೀತಿಯ ಉಡುಪನ್ನು ನಾವು ಧರಿಸುತ್ತಿರುವ ಕಾರಣಕ್ಕೆ ಯುವತಿಯರು ಮತ್ತು ಹುಡುಗಿಯರನ್ನು ನಿಂದಿಸಲು ಹೇಗೆ ಅವಕಾಶ ನೀಡಿದೆ ಎಂಬುದನ್ನು ವಿವರಿಸಿದ್ದರು.


  ಪುರುಷ ಜಿಮ್ನಾಸ್ಟ್‌ಗಳು ದೇಹವನ್ನು ಆವರಿಸುವ ಸಿಂಗ್‌ಲೆಟ್ಸ್‌ ಉಡುಪು ಧರಿಸುತ್ತಾರೆ,  ಸಡಿಲವಾದ ಚಡ್ಡಿಗಳ ಜೊತೆಗೆ ಉದ್ದವಾದ ಪ್ಯಾಂಟ್‌ ಕೂಡ ಧರಿಸುತ್ತಾರೆ. ಆದರೆ ಮಹಿಳೆಯರಿಗೆ ಏಕೆ ಈ ರೀತಿ ನಿಯಮ ಎಂದು ಕೂಗು ಎದ್ದಿತ್ತು.


  ಜರ್ಮನ್ ತಂಡವು ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ನಡೆದ ಯುರೋಪಿಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಯುನಿಟಾರ್ಡ್‌ಗಳನ್ನು ಧರಿಸಿದ್ದರು. ಆದರೆ, ಒಲಿಂಪಿಕ್ಸ್‌ ಸ್ಪರ್ಧೆಯ ಸಮಯದಲ್ಲಿ ಅವುಗಳನ್ನು ಮತ್ತೆ ಧರಿಸುತ್ತೇವೆ ಎಂದು ಆ ವೇಳೆ ಖಚಿತವಾಗಿ ಹೇಳಿರಲಿಲ್ಲ ಎಂದು 21 ವರ್ಷದ ಜರ್ಮನಿಯ ಮಹಿಳಾ ಜಿಮ್ನಾಸ್ಟ್‌ ಸಾರಾ ವೋಸ್ ಹೇಳಿದ್ದಾರೆ.


  ಅವರ ಈ ವಸ್ತ್ರ ಕ್ರಾಂತಿ ಬಗ್ಗೆ ಚರ್ಚೆಯಾಗುತ್ತಿದ್ದರೂ ಇಲ್ಲಿಯವರೆಗೆ ಇದೊಂದು ಪ್ರವೃತ್ತಿ ಅಥವಾ ಟ್ರೆಂಡ್‌ ಆಗಿ ಬದಲಾಗಿಲ್ಲ. ಏಕೆಂದರೆ ಟೋಕಿಯೋ ಕ್ರೀಡಾಕೂಟದಲ್ಲಿ ಅರ್ಹತೆ ಪಡೆಯುವಾಗ ಪ್ರತಿ ಮಹಿಳಾ ಜಿಮ್ನಾಸ್ಟ್‌ಗಳು ಹಳೆಯ ಲಿಯೋಟಾರ್ಡ್‌ ತುಂಡು ಬಟ್ಟೆಯನ್ನೇ ತೊಟ್ಟಿದ್ದರು.

  4-ಅಡಿ -8 ಇಂಚು ಉದ್ದದ ಅಮೆರಿಕದ ಸೂಪರ್‌ಸ್ಟಾರ್ ಸಿಮೋನೆ ಬೈಲ್ಸ್ ಸಹ ತಾನು ಲಿಯೋಟಾರ್ಡ್‌ಗಳಿಗೆ ಆದ್ಯತೆ ನೀಡುತ್ತೇನೆ. ಏಕೆಂದರೆ ಅದು ಕಾಲನ್ನು ಉದ್ದವಾಗಿಸುತ್ತದೆ ಮತ್ತು ತನ್ನನ್ನು ಎತ್ತರವಾಗಿ ಕಾಣುವಂತೆ ಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ಇಷ್ಟಪಡುವದನ್ನು ಧರಿಸುವ ಅವರ ನಿರ್ಧಾರ ಮತ್ತು ಅವರಿಗೆ ಹಿತಕರ ಎನಿಸುವುದನ್ನು ಧರಿಸುವುದಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದೂ ಹೇಳಿದ್ದಾರೆ.


  ಯು.ಎಸ್.ನ ಪ್ರಧಾನ ಲಿಯೋಟಾರ್ಡ್‌ ಉಡುಪು ತಯಾರಕ ಜಿಕೆ ಎಲೈಟ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಮ್ಯಾಟ್ ಕೋವನ್, ಯುನಿಟಾರ್ಡ್‌ಗಳಿಗೆ ಹೆಚ್ಚಿನ ದೇಶಗಳಿಂದ ಬೇಡಿಕೆ ಬಂದಿದ್ದು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರಣಗಳಿಗಾಗಿ ನಾವು ಅದನ್ನು ಗೌರವಿಸುವ ಅಗತ್ಯವಿರುತ್ತದೆ ಎಂದಿದ್ದಾರೆ. ಆದರೂ, ಕ್ಯಾಟ್‌ ಸೂಟ್‌ಗಳ ಕಡೆಗೆ ಯಾವುದೇ ವಿಪರೀತ ಬೇಡಿಕೆ ಬಂದಿಲ್ಲ ಎಂದೂ ಹೇಳಿದ್ದಾರೆ.


  ಜಿಮ್ನಾಸ್ಟಿಕ್ಸ್ ಅನ್ನು ಸಾಮಾನ್ಯವಾಗಿ ಯುವತಿಯರು ಮತ್ತು ಹುಡುಗಿಯರು ಪ್ರದರ್ಶಿಸುವ ಕ್ರೀಡೆಯಾಗಿ ನೋಡಲಾಗುತ್ತದೆ. 24ನೇ ವಯಸ್ಸಿನ ಬೈಲ್ಸ್ ತನಗೆ ವಯಸ್ಸಾದ ಬಗ್ಗೆ ಹಾಸ್ಯ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತನ್ನನ್ನು ಅಜ್ಜಿ ಎಂದು ಅವರು ಇತ್ತೀಚೆಗೆ ಕರೆದುಕೊಂಡಿದ್ದರು.


  ಆದರೆ ಜರ್ಮನ್ನರು ಸೇರಿದಂತೆ ಇತರ ರಾಷ್ಟ್ರಗಳ ತಂಡಗಳಲ್ಲಿ 27ರ ವಯಸ್ಸಿನ ಎಲಿಜಬೆತ್‌ ಸೀಟ್ಜ್, ಕಿಮ್ ಬುಯಿ (32), ಪಾಲಿನ್ ಶಾಫರ್ (24) ಮತ್ತು ವೋಸ್ (21) ವಯಸ್ಸಿನವರೂ ಇದ್ದಾರೆ. ಜರ್ಮನಿ ತಂಡದ ಈ ಹೊಸ ಬಟ್ಟೆಗಳು ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್‌ನ ವಸ್ತ್ರ ನಿಯಮಗಳನ್ನು ಅನುಸರಿಸುತ್ತವೆ. ಆದರೆ ಮಹಿಳಾ ಕ್ರೀಡಾಪಟುಗಳು ಸಾಮಾನ್ಯವಾಗಿ ಅವರು ಆಯ್ಕೆ ಮಾಡಿದಂತೆ ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಮುಕ್ತರಾಗಿದ್ದಾರೆ ಎಂದರ್ಥವಲ್ಲ ಎಂಬುದನ್ನೂ ಇದೇ ವೇಳೆ ಹೇಳಲಾಗಿದೆ.


  ಇದನ್ನೂ ಓದಿ: ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ಶೀಘ್ರದಲ್ಲೇ ಹೆಚ್ಚು ಪ್ರಬಲವಾಗಲಿದೆ ಎಚ್ಚರ!

  ಆದರೆ ಭಾನುವಾರ ಜಿಮ್ನಾಸ್ಟಿಕ್ಸ್ ಅರ್ಹತಾ ಸುತ್ತಿನ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ನಿರೂಪಕ ಯುನಿಟಾರ್ಡ್‌ ಬಟ್ಟೆಗಳನ್ನು ನಿಜಕ್ಕೂ ತುಂಬಾ ಒಳ್ಳೆಯದು ಎಂದು ಕರೆದರು. ಆದರೆ ಈ ಪಂದ್ಯದಲ್ಲ
  Published by:HR Ramesh
  First published: