ಐತಿಹಾಸಿಕ ಗೆಲುವಿನತ್ತ ಟೀಂ ಇಂಡಿಯಾ: 4ನೇ ದಿನದಾಟಕ್ಕೆ ಆಸ್ಟ್ರೇಲಿಯಾ 258/8

ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 258 ರನ್​ಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸನಿಹದಲ್ಲಿದ್ದರೆ, ಭಾರತ ಐತಿಹಾಸಿಕ ಗೆಲುವಿನತ್ತ ಮುನ್ನಡೆದಿದೆ.

Vinay Bhat | news18
Updated:December 29, 2018, 1:25 PM IST
ಐತಿಹಾಸಿಕ ಗೆಲುವಿನತ್ತ ಟೀಂ ಇಂಡಿಯಾ: 4ನೇ ದಿನದಾಟಕ್ಕೆ ಆಸ್ಟ್ರೇಲಿಯಾ 258/8
Pic: BCCI Twitter
  • News18
  • Last Updated: December 29, 2018, 1:25 PM IST
  • Share this:
ಮೆಲ್ಬೋರ್ನ್​​: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಗೆಲುವಿಗೆ ಇನ್ನು ಕೇವಲ 2 ಮೆಟ್ಟಿಲುಗಳಷ್ಟೆ ಬಾಕಿ ಉಳಿದಿವೆ. ಆದರೆ ಆಸೀಸ್ ಗೆಲುವಿಗೆ ಇನ್ನೂ 141 ರನ್​ಗಳ ಅಗತ್ಯವಿದೆ.

ಕೊಕ್ಲಿ ಪಡೆ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 108 ರನ್​ಗೆ ಡಿಕ್ಲೇರ್ ಘೋಷಿಸಿ ಆಸೀಸ್​ಗೆ 399 ರನ್​ಗಳ ಬೃಹತ್ ಟಾರ್ಗೆಟ್ ನೀಡಿದ್ದು, ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 258 ರನ್​ಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸನಿಹದಲ್ಲಿದ್ದರೆ, ಭಾರತ ಐತಿಹಾಸಿಕ ಗೆಲುವಿನತ್ತ ಮುನ್ನಡೆದಿದೆ.

ದೊಡ್ಡ ಮೊತ್ತ ಬೆನ್ನತ್ತಿದ ಕಾಂಗರೂ ಪಡೆ ಬುಮ್ರಾ ಹಾಗೂ ಜಡೇಜಾ ಬೌಲಿಂಗ್ ದಾಳಿಗೆ ಮಂಕಾಗಿ ಪ್ರಮುಖ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಹಾದಿ ಹಿಡಿದರು. ಓಪನರ್​ಗಳಾದ ಆ್ಯರೋನ್ ಫಿಂಚ್​ರನ್ನು 3 ರನ್​ ಗಳಿಸಿರುವಾಗ ತನ್ನ ಮೊದಲ ಓವರ್​ನಲ್ಲೇ ಬುಮ್ರಾ ಪೆವಿಲಿಯನ್​ಗೆ ಅಟ್ಟಿದರೆ, ಮಾರ್ಕಸ್ ಹ್ಯಾರಿಸ್​ 13 ರನ್​ಗೆ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಉಸ್ಮನ್ ಖ್ವಾಜಾ ಕೆಲ ಹೊತ್ತು ಕ್ರೀಸ್​ನಲ್ಲಿ ಇದ್ದರಾದರು 33 ರನ್​ಗೆ ಸುಸ್ತಾದರು. ಬಳಿಕ ಬಂದ ಶಾನ್ ಮಾರ್ಶ್​​​ ಬಿರುಸಿನ ಆಟಕ್ಕೆ ಮುಂದಾಗಿ 44 ರನ್​ಗೆ ನಿರ್ಗಮಿಸಿದರು.

ಇದನ್ನೂ ಓದಿ: (VIDEO): ಸೇಡು ತೀರಿಸಿಕೊಂಡ ಪಂತ್: ಆಸೀಸ್ ನಾಯಕನಿಗೆ ಮೈದಾನದಲ್ಲೇ ಚಳಿ ಬಿಡಿಸಿದ ರಿಷಭ್

ಇದರ ಬೆನ್ನಲ್ಲೆ ಮಿಚೆಲ್ ಮಾರ್ಶ್​​(10) ಹಾಗೂ ನಾಯಕ ಟಿಮ್ ಪೇಯ್ನ್​​(26) ಕೂಡ ಔಟ್ ಆಗಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿತ್ತು. ಮಿಚೆಲ್ ಸ್ಟಾರ್ಕ್ ಮೇಲೆ ಬರವಸೆಯಿಟ್ಟಿದ್ದರಾದರು 18 ರನ್ ಗಳಿಸಿರುವಾಗ ಶಮಿ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು.

ಆದರೆ ಏಕಾಂಗಿ ಹೋರಾಟ ನಡೆಸುತ್ತಿರುವ ಪ್ಯಾಟ್ ಕಮಿನ್ಸ್​ ಅಜೇಯ 61 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರ ಜೊತೆ ನೇಥನ್ ಲ್ಯಾನ್ 6 ರನ್​ಗಳಿಸಿ ಉತ್ತಮ ಸಾತ್ ನೀಡುತ್ತಿದ್ದಾರೆ. ಭಾರತ ಪರ ರವೀಂದ್ರ ಜಡೇಜಾ 3, ಬುಮ್ರಾ ಹಾಗೂ ಶಮಿ 2 ಮತ್ತು ಇಶಾಂತ್ ಶರ್ಮಾ 1 ವಿಕೆಟ್ ಕಿತ್ತಿದ್ದಾರೆ.

ಇದನ್ನೂ ಓದಿ: (VIDEO): ಹೆಂಡತಿ ಜೊತೆ ಫಿಲ್ಮ್​ಗೆ ಹೋದಾಗ ನನ್ನ ಮಗು ನೋಡ್ಕೊ: ಪಂತ್​ ಕಾಲೆಳೆದ ಆಸೀಸ್ ನಾಯಕಇದಕ್ಕೂ ಮುನ್ನ ನಿನ್ನೆ 54 ರನ್​ಗೆ 5 ವಿಕೆಟ್​​ ಕಳೆದುಕೊಂಡು ದಿನದಾಟ ಮುಗಿಸಿದ್ದ ಭಾರತ ಇಂದು 52 ರನ್​​ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮಯಾಂಕ್ ಅಗರ್ವಾಲ್ 42, ರಿಷಭ್ ಪಂತ್ 33 ಹಾಗೂ ಜಡೇಜಾ 5 ರನ್​ಗಳಿಸಿ ಔಟ್ ಆದರು. ಅಂತಿಮವಾಗಿ ಭಾರತ 106 ರನ್​ಗೆ 8 ವಿಕೆಟ್ ಕಳೆದುಕೊಂಡ ವೇಳೆ ಎದುರಾಳಿಗೆ 399 ರನ್​ಗಳ ಟಾರ್ಗೆಟ್ ನೀಡಿ ಡಿಕ್ಲೇರ್ ಮಾಡಿತು. ಆಸೀಸ್ ಪರ ಪ್ಯಾಟ್ ಕಮಿನ್ಸ್ 6 ವಿಕೆಟ್ ಪಡೆದರು.

ಭಾರತ ಮೊದಲ ಇನ್ನಿಂಗ್ಸ್​​: 443/7 ಡಿಕ್ಲೇರ್

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​: 151/10

ಭಾರತ ಎರಡನೇ ಇನ್ನಿಂಗ್ಸ್​: 106/8 ಡಿಕ್ಲೇರ್

First published:December 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ