ರಣಜಿ ಟ್ರೋಫಿ: ಕರ್ನಾಟಕ ಸಂಘಟಿತ ಬೌಲಿಂಗ್ ದಾಳಿ: ಗುಜರಾತ್ 216 ಆಲೌಟ್

ಗುಜರಾತ್ ತಂಡದ ಪರ ನಾಯಕ ಪ್ರಿಯಾಂಕ್ ಪಂಚಲ್ ಏಕಾಂಗಿ ಹೋರಾಟ ನಡೆಸಿದರಾದರು, ಇವರಿಗೆ ಉಳಿದ ಬ್ಯಾಟ್ಸ್​ಮನ್​ಗಳು ಸಾತ್ ನೀಡಲಿಲ್ಲ. ಸದ್ಯ ಪ್ರೀಯಾಂಕ್ ಕೂಡ 74 ರನ್ ಗಳಿಸಿ ನಿರ್ಗಮಿಸಿದರು.

news18
Updated:December 14, 2018, 5:35 PM IST
ರಣಜಿ ಟ್ರೋಫಿ: ಕರ್ನಾಟಕ ಸಂಘಟಿತ ಬೌಲಿಂಗ್ ದಾಳಿ: ಗುಜರಾತ್ 216 ಆಲೌಟ್
ಸಾಂದರ್ಭಿಕ ಚಿತ್ರ
  • News18
  • Last Updated: December 14, 2018, 5:35 PM IST
  • Share this:
ಸೂರತ್: ಇಲ್ಲಿನ ಲಾಲಾಭಾಯ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಗುಜರಾತ್ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಬೌಲರ್​ಗಳು ಭರ್ಜರಿ ಪ್ರದರ್ಶನ ತೋರಿದ್ದಾರೆ. ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ತಂಡ 216 ರನ್​ಗೆ ಆಲೌಟ್ ಆಗಿದೆ. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ತಂಡದ ಪರ ನಾಯಕ ಪ್ರಿಯಾಂಕ್ ಪಂಚಲ್ ಏಕಾಂಗಿ ಹೋರಾಟ ನಡೆಸಿದರಾದರು, ಇವರಿಗೆ ಉಳಿದ ಬ್ಯಾಟ್ಸ್​ಮನ್​ಗಳು ಸಾತ್ ನೀಡಲಿಲ್ಲ. ಇತ್ತ ಪ್ರೀಯಾಂಕ್ ಕೂಡ 74 ರನ್ ಗಳಿಸಿ ಸುಸ್ತಾದರು. ಉಳಿದಂತೆ ಕಥನ್ 13, ಭಾರ್ಗವ್ 4, ರುಜುಲ್ ಭಟ್ 12 ಪ್ರಮುಖ ಬ್ಯಾಟ್ಸ್​ಮನ್​ಗಳು ಬೇಗನೆ ಪೆವಿಲಿಯನ್ ಹಾದಿ ಹಿಡಿದರು.

ಇದನ್ನೂ ಓದಿ: ಈ ವರ್ಷ ಅತ್ಯಧಿಕ ಲೈಕ್ಸ್​​ ಗಿಟ್ಟಿಸಿಕೊಂಡಿದ್ದು 'ಕೊಹ್ಲಿ'ಯ ಆ ಒಂದು ಫೋಟೋ

ಕೊನೆಯಲ್ಲಿ ಪಿಯೂಶ್ ಚಾವ್ಲಾ 34 ಹಾಗೂ ಮೆಹುಲ್ ಪಟೇಲ್ ಅಜೇಯ 31 ರನ್ ಗಳಿಸಿದ ಪರಿಣಾಮ ತಂಡದ ಮೊತ್ತ 216 ತಲುಪಿತು. ಕರ್ನಾಟಕ ಪರ ಬೌಲಿಂಗ್ ಮಾಡಿದ ಎಲ್ಲರೂ 2 ವಿಕೆಟ್ ಕಿತ್ತರು. ಕೃಷ್ಣಪ್ಪ ಗೌತಮ್, ನಾಯಕ ವಿನಯ್ ಕುಮಾರ್, ಪ್ರತೀಕ್ ಜೈನ್, ರೋನಿತ್ ಮೋರ್, ಶ್ರೇಯಸ್ ಗೋಪಾಲ್ 2 ವಿಕೆಟ್ ಕಿತ್ತು ಮಿಂಚಿದರು.

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಕರ್ನಾಟಕ ಬೇಗನೆ ತನ್ನ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ 25 ರನ್ ಗಳಿಸಿ ಔಟ್ ಆದರೆ ದಿನದ ಕೊನೆಯ ಎಸೆತದಲ್ಲಿ ನಿಶ್ಚಲ್(12) ಬೌಲ್ಡ್ ಆಗುವ ಮೂಲಕ ಮೊದಲ ದಿನದಾಟವನ್ನು ಅಂತ್ಯಗೊಳಿಸಲಾಯಿತು. ಸದ್ಯ ರವಿಕುಮಾರ್ ಸಮರ್ಥ್ 7 ರನ್ ಗಳಿಸಿ ನಾಳೆ ದೇವದತ್ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಕರ್ನಾಟಕ ಇನ್ನು 171 ರನ್​ಗಳ ಹಿನ್ನಡೆಯಲ್ಲಿದೆ.
First published:December 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading