• Home
  • »
  • News
  • »
  • sports
  • »
  • Gujarat Election: ಗುಜರಾತ್ ಚುನಾವಣೆಯಲ್ಲಿ ಜಡೇಜಾ ಪತ್ನಿಗೆ ಸಿಗುತ್ತಾ ಬಿಜೆಪಿ  ಟಿಕೆಟ್? ಕಾಂಗ್ರೆಸ್​ ಕೈ ಹಿಡಿದ ಜಡ್ಡು ತಂಗಿ?

Gujarat Election: ಗುಜರಾತ್ ಚುನಾವಣೆಯಲ್ಲಿ ಜಡೇಜಾ ಪತ್ನಿಗೆ ಸಿಗುತ್ತಾ ಬಿಜೆಪಿ  ಟಿಕೆಟ್? ಕಾಂಗ್ರೆಸ್​ ಕೈ ಹಿಡಿದ ಜಡ್ಡು ತಂಗಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gujarat Election: ಮುಂಬರಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ (Gujarat Election) ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

  • Share this:

ಟೀಂ ಇಂಡಿಯಾ (Team India) ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ (Rivaba Jadeja) ಸದ್ಯ ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್​ನಿಂದ ದುರ ಉಳಿದಿದ್ದಾರೆ. ಆದರೆ ಮುಂಬರುವ ಬಾಂಗ್ಲಾದೇಶ ಸರಣಿಗೆ ಜಡೇಜಾ ಆಯ್ಕೆ ಆಗಿದ್ದು, ಮತ್ತೆ ತಂಡಕ್ಕೆ ಮರಳಲು ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಕಳೆದ 3 ವರ್ಷಗಳ ಹಿಂದೆ ಬಿಜೆಪಿ ಪಕ್ಷ ಸೇರಿಕೊಂಡಿದ್ದ ಜಡೇಜಾ ಅವರ ಜೊತೆ ಇದೀಗ ಅವರ ಪತ್ನಿ ರಿವಾಬಾ ಜಡೇಜಾ (Rivaba Jadeja) ಸಹ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಅಲ್ಲದೇ ಮುಂಬರಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ (Gujarat Election) ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಅಲ್ಲದೇ ಈ ಸಂಬಂಧ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಇಂದು ಸಭೆ ಸೇರಲಿದೆ ಎಂದು ತಿಳಿದುಬಂದಿದೆ.


ಜಡ್ಡು ಪತ್ನಿಗೆ ಬಿಜೆಪಿ ಯಿಂದ ಟಿಕೆಟ್?:


ಹೌದು, ಇಂತಹುದೊಂದು ಸುದ್ದಿ ಇದೀಗ ಗುಜರಾತ್ ಚುನಾವಣಾ ಕಣದಿಂದ ಕೇಳಿಬರುತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಸ್ಪಷ್ಟನೆ ಈವರೆಗೂ ದೊರಕಿಲ್ಲ.  ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಪಡೆದಿರುವ ರಿವಾಬಾ ಜಡೇಜಾ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿಕರಾಗಿದ್ದಾರೆ. ರಿವಾಬಾ ಅವರು 2016ರಲ್ಲಿ ಜಡೇಜಾ ಅವರನ್ನು ವಿವಾಹವಾಗಿದ್ದರು. ಸದ್ಯ ಗುಜರಾತ್ ವಿಧಾನಸಭಾ ಚುನಾವಣೆ ಪಟ್ಟಿಯಲ್ಲಿ ರಿವಾಬಾ ಅವರ ಹೆಸರಿರುವುದಾಗಿ ಕೇಳಿಬರುತ್ತಿದೆ. ಅಲ್ಲದೇ ಇಂದು ಬಿಜೆಪಿ ಟಿಕೆಟ್​ ಅಂತಿಮಗೊಳಿಸಲಿದೆ.


ಜಾಮ್‌ನಗರ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಈಗಾಗಲೇ ಪಕ್ಷದ ಮುಖ್ಯಸ್ಥ ಜೆ.ಪಿ ನಡ್ಡಾ ಸಭೆ ನಡೆಸುತ್ತಿದ್ದು, ಇವರ ಜೊತೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಭೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಜಡೇಜಾ ಅವರ ಪತ್ನಿ ಕರ್ಣಿ ಸೇನಾದ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದರು. ಇದೇ ಕಾರಣಕ್ಕಾಗಿ ಹಾಲಿ ಶಾಸಕ ಧರ್ಮೇಂದ್ರ ಸಿಂಗ್ ಜಡೇಜಾ ಅವರಿಗೆ ಈ ಬಾರಿ ಟಿಕೆಟ್ ಸಿಗದಿರದ ಸಾಧ್ಯತೆ ಇದೆ.


ಇದನ್ನೂ ಓದಿ: PAK vs NZ, T20 World Cup 2022: ನ್ಯೂಜಿಲ್ಯಾಂಡ್​ ಮನೆಗೆ, ಪಾಕಿಸ್ತಾನ ಫೈನಲ್​ಗೆ; ನಾಳೆ ಭಾರತ ಗೆದ್ರೆ ಭಾನುವಾರ ‘ಬಾಡೂಟ‘ ಫಿಕ್ಸ್!


ಜಡ್ಡು ತಂಡಗಿಗೆ ಕಾಂಗ್ರೆಸ್​ನಿಂದ ಟಿಕೆಟ್?:


ಇತ್ತ, ಪತ್ನಿಗೆ ಬಿಜೆಪಿ ಇಂದ ಟಿಕೆಟ್​ ಸಿಗುವ ಸಾಧ್ಯತೆ ಇದ್ದರೆ, ಅತ್ತ ಜಡೇಜಾ ತಂಗಿ ಸಹ ಕಾಂಗ್ರೆಸ್​ ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಜಡ್ಡು ಸಹೋದರಿ ನೈನಾ ಜಡೇಜಾ ಈಗಾಗಲೇ ಕಾಂಗ್ರೆಸ್‌ ಪಕ್ಷದಲ್ಲಿ ಇದ್ದಾರೆ. ಅವರೂ ಸಹ ಈ ಬಾರಿ ಕಾಂಗ್ರೆಸ್​ ಪಕ್ಷದಿಂದ ಕಣಕ್ಕಿಳಿಯಬುದು. ಸದ್ಯ ಅವರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: Ind vs Eng T20 World Cup 2022: ಅಭ್ಯಾಸದ ವೇಳೆ ಗಾಯಗೊಂಡ ಕೊಹ್ಲಿ, ಸೆಮೀಸ್​ ಪಂದ್ಯಕ್ಕೆ ಅಲಭ್ಯ?


ಗುಜರಾತ್‌ನಲ್ಲಿ ಬಿಜೆಪಿ 27 ವರ್ಷಗಳಿಂದ ಅಧಿಕಾರದಲ್ಲಿದೆ. ಅಲ್ಲದೇ ಈ ಬಾರಿ ಬಿಜೆಪಿ ಅನೇಕ ಹಿರಿಯ ಅಭ್ಯರ್ಥಿಗಳಿಗೆ ಟಿಕೆಟ್​ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ 75 ವರ್ಷ ಮೇಳ್ಪಟ್ಟವರಿಗೆ ಟಿಕೆಟ್ ಸಿಗುವುದು ಡೌಟ್​ ಎನ್ನಲಾಗುತ್ಇದ್ದು, ಈ ಪಟ್ಟಿಯಲ್ಲಿ ಮಾಜಿ ಸಿಎಂ ವಿಜಯ್ ರೂಪಾಣಿ, ಮಾಜಿ ಡಿಸಿಎಂ ನಿತಿನ್ ಪಟೇಲ್ ಟಿಕೆಟ್ ವಂಚಿತರಾಗುವ ಹಿರಿಯ ನಾಯಕರ ಪಟ್ಟಿಯಲ್ಲಿದ್ದಾರೆ.

Published by:shrikrishna bhat
First published: