ಐಪಿಎಲ್ 2023 (IPL 2023) ಪ್ಲೇಆಫ್‌ಗಳು ಪ್ರಾರಂಭವಾಗುವ ಕೊನೆಯ ವಾರವಾಗಿದೆ ಮತ್ತು ಯಾವುದೇ ತಂಡಗಳು ಇನ್ನೂ ಅರ್ಹತೆ ಪಡೆದಿಲ್ಲವಾದ್ದರಿಂದ, ಇಲ್ಲಿಂದ ಪ್ರತಿಯೊಂದು ಪಂದ್ಯವೂ ನಿರ್ಣಾಯಕವಾಗುತ್ತದೆ. ನಾಕೌಟ್‌ನಲ್ಲಿ ಸ್ಥಾನ ಪಡೆಯುವ ಗುರಿಯೊಂದಿಗೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (GT vs SRH) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. ಗುಜರಾತ್‌ಗೆ ನಾಕೌಟ್‌ನಲ್ಲಿ ಸ್ಥಾನ ಪಡೆಯುವ ಅವಕಾಶವಿತ್ತು ಆದರೆ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಸೋಲಿನ ಮೂಲಕ ಅವಕಾಶಗಳನ್ನು ಸ್ಥಗಿತಗೊಳಿಸಿತು. ಅಹಮದಾಬಾದ್‌ನಲ್ಲಿ ಸನ್‌ರೈಸರ್ಸ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಜಿಟಿ ಮುಂದಿನ ಸುತ್ತಿಗೆ ಪ್ರವೇಶಿಸಿದ ಮೊದಲ ತಂಡವಾಗುತ್ತದೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಪಿಂಕ್ ಜೆರ್ಸಿಯಲ್ಲಿ ಗುಜರಾತ್:
ಇನ್ನು, ಗುಜರಾತ್ ಟೈಟಾನ್ಸ್ ತಂಡ ಇಂದಿನ ಪಂದ್ಯದಲ್ಲಿ ವಿಶೇಷ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಹಾರ್ದಿಕ್ ಪಡೆ ಪ್ರತಿ ಪಂದ್ಯದಲ್ಲಿ ಡಾರ್ಕ್ ಬ್ಲೂ ಬಣ್ಣದ ಜರ್ಸಿಯಲ್ಲಿ ಕಣಕ್ಕಿಳಿಯುತ್ತಿತ್ತು. ಆದರೆ, ಗುಜರಾತ್ ತಂಡ ಇಂದು ಪಿಂಕ್ (ಲ್ಯಾವೆಂಡರ್) ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಗುಜರಾತ್ ತಂಡ ಈ ಜೆರ್ಸಿ ಧರಿಸುವ ಹಿಂದೆ ಪ್ರಮುಖ ಉದ್ದೇಶವಿದೆ. ಹೌದು, ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಬೆಂಬಲಿಸಿ ತಂಡ ಇಂದು ವಿಭಿನ್ನ ಜೆರ್ಸಿಯಲ್ಲಿ ಕಾಣಿಸಿಕೊಲ್ಳಲಿದೆ. ಈ ಮೂಲಕ ಕ್ಯಾನ್ಸರ್ ವಿರುದ್ಧದ ಹೋರಾಟ, ಸಾಮಾನ್ಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ಧೇಶ ಇದಾಗಿದೆ ಎಂದು ಪ್ರಾಂಚೈಸಿ ತಿಳಿಸಿದೆ.
#CaptainPandya has an important message for our #TitansFAM.
Gujarat Titans will be sporting their 𝙇𝙖𝙫𝙚𝙣𝙙𝙚𝙧 𝙠𝙞𝙩 to show support for the fight against cancer.
Do join us and show your support for this noble cause.#GTvSRH #AavaDe #TATAIPL 2023 pic.twitter.com/nWdFudxB4N
— Gujarat Titans (@gujarat_titans) May 14, 2023
ಐಪಿಎಲ್ 2023ರ ಸಮಯದಲ್ಲಿ ಈ ಸ್ಥಳದಲ್ಲಿ ಪಂದ್ಯಗಳು ಸಾಮಾನ್ಯವಾಗಿ ಹೆಚ್ಚಿನ ಸ್ಕೋರಿಂಗ್ ಆಗಿವೆ. ಗುಜರಾತ್ ಟೈಟಾನ್ಸ್ ತವರಿನಲ್ಲಿ ಆಡುವಾಗ ಮೂರು ಪಂದ್ಯಗಳನ್ನು ಗೆದ್ದಿದೆ. ಇವುಗಳಲ್ಲಿ ಎರಡು ಕೊನೆಯ ಓವರ್ನಲ್ಲಿ ಗೆಲುವು ದಾಖಲಿಸಿತ್ತು. ಹೀಗಾಗಿ ಇಂದಿನ ಪಂದ್ಯವು ದೊಡ್ಡ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.
ಅಗ್ರಸ್ಥಾನದಲ್ಲಿ ಗುಜರಾತ್ ಟೈಟನ್ಸ್:
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬಿರುಸಿನ ಆಟ ಪ್ರದರ್ಶಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡ 8 ಗೆಲುವಿನಿಂದ 16 ಅಂಕಗಳನ್ನು ತನ್ನ ಖಾತೆಯಲ್ಲಿ ಹೊಂದಿದೆ. ಸನ್‌ರೈಸರ್ಸ್ ಹೈದರಾಬಾದ್ ತನ್ನ ಖಾತೆಯಲ್ಲಿ 4 ಗೆಲುವುಗಳಿಂದ ಕೇವಲ 8 ಅಂಕಗಳನ್ನು ಹೊಂದಿದೆ. ಗುಜರಾತ್ ತಂಡ 12 ಪಂದ್ಯಗಳನ್ನು ಆಡಿದ್ದರೆ ಹೈದರಾಬಾದ್ ತಂಡ 11 ಪಂದ್ಯಗಳನ್ನು ಆಡಿದೆ. ಈ ಪಂದ್ಯ ಹೈದರಾಬಾದ್‌ಗೆ ಮಾಡು ಇಲ್ಲವೇ ಮಡಿ, ಇಂದು ತಂಡ ಸೋತರೆ ಅದರ ಪ್ರಯಾಣ ಇಲ್ಲಿಗೆ ಕೊನೆಗೊಳ್ಳುತ್ತದೆ.
ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ರೋಚಕ ಪಂದ್ಯದಲ್ಲಿ ಸೋಲಿಸಿತ್ತು. ಅದೇ ಸಮಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಹೀನಾಯ ಸೋಲು ಕಂಡಿತ್ತು. ಮೊದಲು ಬ್ಯಾಟ್ ಮಾಡಿದ ಮುಂಬೈ 5 ವಿಕೆಟ್‌ಗೆ 218 ರನ್ ಗಳಿಸಿದ್ದು, ಗುಜರಾತ್ 8 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುಜರಾತ್ - ಹೈದರಾಬಾದ್ ಪ್ಲೇಯಿಂಗ್ 11:
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಶುಭಮನ್ ಗಿಲ್, ವೃದ್ಧಿಮಾನ್ ಸಹಾ (WK), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ದಸುನ್ ಶನಕ, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (WK), ಅಬ್ದುಲ್ ಸಮದ್, ಸನ್ವಿರ್ ಸಿಂಗ್, ಮಯಾಂಕ್ ಮಾರ್ಕಾಂಡೆ, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಟಿ ನಟರಾಜನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ