• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • RR vs GT: ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್, ಅಗ್ರಸ್ಥಾನದ ಮೇಲೆ ಸಂಜು ಸ್ಯಾಮ್ಸನ್​ ಕಣ್ಣು

RR vs GT: ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್, ಅಗ್ರಸ್ಥಾನದ ಮೇಲೆ ಸಂಜು ಸ್ಯಾಮ್ಸನ್​ ಕಣ್ಣು

GT vs RR IPl 2023

GT vs RR IPl 2023

GT vs RR: ರಾಜಸ್ಥಾನ್​ ರಾಯಲ್ಸ್ ತಂಡವು ಗುಜರಾತ್​ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಹವಣಿಸುತ್ತಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

  • Share this:

ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ (RR vs GT) ತಂಡಗಳು ಇಂದು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ (Sawai Mansingh Stadium) ಸೆಣಸಾಡುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ, ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ (Hardik Pandya) ಮತ್ತೊಮ್ಮೆ ಐಪಿಎಲ್‌ನಲ್ಲಿ (IPL 2023) ನಾಯಕತ್ವದ ಸಾಮರ್ಥ್ಯದಿಂದ ಅನೇಕರನ್ನು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂದು ರಾಜಸ್ಥಾನ್​ ವಿರುದ್ಧ ಗೆದ್ದು ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆಯಲು ಗುಜರಾತ್ ಸಿದ್ಧವಾಗಿದ್ದರೆ, ಇತ್ತ ರಾಜಸ್ಥಾನ್​ ರಾಯಲ್ಸ್ ತಂಡವು ಗುಜರಾತ್​ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಹವಣಿಸುತ್ತಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.


ರಾಜಸ್ಥಾನಕ್ಕಿದೆ ಯಶಸ್ವಿ ಬಲ:


ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇಲ್ಲಿಯವರೆಗೆ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಶತಕ ಬಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಯಶಸ್ವಿ ಜೈಸ್ವಾಲ್ ಈ ಋತುವಿನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ರಾಜಸ್ಥಾನದ ಆರಂಭಿಕ ಆಟಗಾರ 9 ಪಂದ್ಯಗಳಲ್ಲಿ 428 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ. 16ನೇ ಋತುವಿನಲ್ಲಿ ಯಶಸ್ವಿ 1 ಶತಕ ಹಾಗೂ 3 ಅರ್ಧ ಶತಕ ಸಿಡಿಸಿದ್ದಾರೆ.


ಗುಜರಾತ್​ಗೆ ಶುಭ್​ಮನ್ ಗಿಲ್​ ಆಧಾರ:


ಮತ್ತೊಂದೆಡೆ ಗುಜರಾತ್​ ತಂಡಕ್ಕೆ, ಶುಭ್​ಮನ್ ಗಿಲ್ ತಮ್ಮ ಬ್ಯಾಟಿಂಗ್ ಮೂಲಕ ಟೈಟಾನ್ಸ್‌ಗೆ ಆಧಾರವಾಗಿದ್ದಾರೆ. ವಿಜಯ್ ಶಂಕರ್, ರಾಹುಲ್ ತೆವಾಟಿಯಾ ಮತ್ತು ಡೇವಿಡ್ ಮಿಲ್ಲರ್ ಬ್ಯಾಟ್‌ನೊಂದಿಗೆ ಗುಜರಾತ್​ ಟೈಟನ್ಸ್​ಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಈ ಋತುವಿನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಆದರೆ ಅಂತಿಮ ಹಂತದಲ್ಲಿ ಅವರು ಅಬ್ಬರಿಸುವ ನಿರೀಕ್ಷೆಯಿದೆ.


ಇದನ್ನೂ ಓದಿ: IPL 2023: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​, ಪ್ಲೇಆಫ್​ ರೇಸ್​ನಲ್ಲಿವೆ 6 ತಂಡಗಳು


ಐಪಿಎಲ್ 2023 ಪ್ಲೇಆಫ್​ ಲೆಕ್ಕಾಚಾರ:


ಇನ್ನು, ಐಪಿಎಲ್ 2023 ಲೀಗ್​ನ 16ನೇ ಆವೃತ್ತಿಯು ಆಲ್​ಮೋಸ್ಟ್​ ಅಂತಿಮ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಎಲ್ಲಾ ತಂಡಗಳು ಪ್ಲೇಆಫ್​ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದು, ಪ್ರತಿ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿದೆ. ಈ ಬಾರಿ ಬರೋಬ್ಬರಿ 7 ತಂಡಗಳು ಪ್ಲೇಆಫ್​ ರೇಸ್​ನಲ್ಲಿದೆ. ಗುಜರಾತ್ ಟೈಟನ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಗುಜರಾತ್​ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 3ರಲ್ಲಿ ಸೋಲು ಕಂಡು 12 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.




ಅದರಂತೆ 10 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 4ರಲ್ಲಿ ಸೋತು 1 ಪಂದ್ಯ ಡ್ರಾ ಆಗುವ ಮೂಲಕ ಲಕ್ನೋ ತಂಡ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಳಿದಂತೆ 3ನೇ ಸ್ಥಾನದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡವಿದ್ದು, ಆಡಿರುವ 10 ಪಂದ್ಯದಲ್ಲಿ 5ರಲ್ಲಿ ಗೆದ್ದು 4ರಲ್ಲಿ ಸೋತು 1 ಪಂದ್ಯ ಡ್ರಾ ಮಾಡಿಕೊಂಡು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್​ ರಾಯಲ್ಸ್ ಸಹ 9 ಪಂದ್ಯದಲ್ಲಿ 5 ಪಂದ್ಯ ಗೆದ್ದು 10 ಅಂಕದ ಜೊತೆ 4ನೇ ಸ್ಥಾನದಲ್ಲಿದೆ.


ರಾಜಸ್ಥಾನ್​ - ಗುಜರಾತ್​ ಪ್ಲೇಯಿಂಗ್ 11:


ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (w/c), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

top videos


    ಗುಜರಾತ್​ ಟೈಟನ್ಸ್ ಪ್ಲೇಯಿಂಗ್ 11: ವೃದ್ಧಿಮಾನ್ ಸಹಾ(ಪ), ಹಾರ್ದಿಕ್ ಪಾಂಡ್ಯ(ಸಿ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್.

    First published: