ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಐಪಿಎಲ್ 2023ರಲ್ಲಿ (IPL 2023) ಇಂದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (GT vs MI) ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದರು. ಸೂರ್ಯಕುಮಾರ್ 49 ಎಸೆತಗಳಲ್ಲಿ 103 ರನ್ ಗಳಿಸಿ ಅಜೇಯ ಶತಕ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಗುಜರಾತ್ ತಂಡವು 20 ಓವರ್‌ಗಳಲ್ಲಿ 8ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ 27 ರನ್ ಗಳಿಂದ ಸೋಲನ್ನಪ್ಪಿದರು. ಈ ಮೂಲಕ ಮುಂಬೈ ತಂಡಕ್ಕೆ ಪ್ಲೇಆಫ್ ಸನಿಹಕ್ಕೆ ಬಂದಿದೆ.
ಭರ್ಜರಿ ಬ್ಯಾಟಿಂಗ್ ಮಾಡಿದ ರಶೀಧ್ ಖಾನ್:
ಇನ್ನು, ಮುಂಬೈ ನೀಡದ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡವು 20 ಓವರ್‌ಗಳಲ್ಲಿ 8ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಗುಜರಾತ್ ಟೈಟನ್ಸ್ ಪರ, ರಶೀಧ್ ಖಾನ್ ಅಬ್ಬರದ ಬ್ಯಾಟಿಂಗ್ ಮೂಲಕ ಒಮ್ಮೆ ಗೆಲುವಿನ ಆಸೆ ಚಿಗುರಿಸಿದ್ದರು. ಅವರು 32 ಎಸೆತದಲ್ಲಿ 10 ಸಿಕ್ಸ್ ಮತ್ತು 3 ಫೊರ್ ಮೂಲಕ ಅಜೇಯ 79 ರನ್ ಗಳಿಸಿದರು. ಉಳಿದಂತೆ ವೃದ್ಧಿಮಾನ್ ಸಹಾ 2 ರನ್, ವಿಜಯ್ ಶಂಕರ್ 29 ರನ್, ಹಾರ್ದಿಕ್ ಪಾಂಡ್ಯ 4 ರನ್, ಶುಭ್ಮನ್ ಗಿಲ್ 6 ರನ್, ಡೇವಿಡ್ ಮಿಲ್ಲರ್ 41 ರನ್, ರಾಹುಲ್ ತೆವಾಟಿಯಾ 14 ರನ್, ನೂರ್ ಅಹ್ಮದ್ 1 ರನ್, ಅಲ್ಜಾರಿ ಜೋಸೆಫ್ 7 ರನ್ ಗಳಸಿದರು. ಇನ್ನು, ಮುಂಬೈ ಪರ ಪಿಯೂಷ್ ಚಾವ್ಲಾ 2 ವಿಕೆಟ್, ಕುಮಾರ್ ಕಾರ್ತಿಕೇಯ 2 ವಿಕೆಟ್ , ಜನ್ಸನ್ 1 ವಿಕೆಟ್ ಮತ್ತು ಆಕಾಶ್ ಮಾಡ್ವಾಲ್ 3 ವಿಕೆಟ್ ಪಡೆದು ಮಿಂಚಿದರು.
ಶತಕದ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್:
ಇನ್ನು, ಇಂದು ವಾಂಖೆಡೆ ಮೈದಾದಲ್ಲಿ ಸೂರ್ಯಕುಮಾರ್ ಅಬ್ಬರಿಸಿದರು. ಅವರು 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ ಅಜೇಯ 103 ರನ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 218 ರನ್ ಗಳಿಸಿತು. ರೋಹಿತ್ ಶರ್ಮಾ (18 ಎಸೆತಗಳಲ್ಲಿ 29 ರನ್; 3 ಬೌಂಡರಿ, 2 ಸಿಕ್ಸರ್) ಮತ್ತು ಇಶಾನ್ ಕಿಶನ್ (20 ಎಸೆತಗಳಲ್ಲಿ 31; 4 ಬೌಂಡರಿ, 1 ಸಿಕ್ಸರ್) ಮಿಂಚಿದರು. ರಶೀದ್ ಖಾನ್ 4 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: IPL 2023: ಇದು KGF ಕಥೆಯಲ್ಲ, RCB ವ್ಯಥೆ! ಬದಲಾಗಬೇಕಿದೆ ಪ್ಲೇಯಿಂಗ್ 11
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಮುಂಬೈ ಇಂಡಿಯನ್ಸ್ ಗೆ ಆರಂಭಿಕರಾದ ರೋಹಿತ್ ಶರ್ಮಾ (29) ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ನೀಡಿದರು. ಕಳೆದ 5 ಪಂದ್ಯಗಳಲ್ಲಿ ಕೇವಲ 12 ರನ್ ಗಳಿಸಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಉತ್ತಮ ಇನಿಂಗ್ಸ್ ಆರಂಭಿಸಿದರು. ಆದರೆ ಬೌಲಿಂಗ್ ಗೆ ಬಂದ ರಶೀದ್ ಖಾನ್ ಒಂದೇ ಓವರ್ ನಲ್ಲಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ವಿಕೆಟ್ ಪಡೆದರು. ಮುಂಬೈ 5 ರನ್‌ಗಳ ಅಂತರದಲ್ಲಿ ಎರಡು ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಕ್ರೀಸ್ ಇಳಿದ ನೆಹಾಲ್ ವಧೇರಾ ಹಾಗೂ ಸೂರ್ಯಕುಮಾರ್ ಯಾದವ್ ತಂಡಕ್ಕೆ ಆಸರೆಯಾದರು. ಸೂರ್ಯಕುಮಾರ್ ಯಾದವ್ ಆರಂಭದಲ್ಲಿ ನಿಧಾನವಾಗಿ ಆಡಿದರು. ಇನ್ನೊಂದು ತುದಿಯಲ್ಲಿ ವಧೇರಾ ವೇಗವಾಗಿ ಬ್ಯಾಟ್ ಬೀಸಿದರು. ಆದರೆ ಬೌಲಿಂಗ್‌ಗೆ ಬಂದ ರಶೀದ್ ಖಾನ್ ಮತ್ತೊಮ್ಮೆ ವಧೇರಾ ಅವರನ್ನು ಔಟ್ ಮಾಡಿದರು. ಆದರೆ ಕೊನೆಯ ಹಂತದಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ 20 ಓವರ್‌ನ ಮೊದಲ ಎಸೆತದಲ್ಲಿ ಗ್ರೀನ್ ಸಿಂಗಲ್ ಗಳಿಸಿದಾಗ ಸೂರ್ಯಕುಮಾರ್ ಯಾದವ್ ಸ್ಟ್ರೈಕಿಂಗ್ ಎಂಡ್‌ಗೆ ಬಂದರು. ಶತಕಕ್ಕೆ 5 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿತ್ತು. ಅವರು ಮೊದಲ ನಾಲ್ಕು ಎಸೆತಗಳಲ್ಲಿ 10 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಚೊಚ್ಚಲ ಐಪಿಎಲ್ ಶತಕ ಸಿಡಿಸಿ ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ