ಇಂಡಿಯನ್ ಪ್ರೀಮಿಯರ್ ಲೀಗ್ 2023ರ (IPL 2023) 57ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ (GT vs MI) ತಂಡಗಳು ಸೆಣಸಾಡುತ್ತಿದೆ. ಉಭಯ ತಂಡಗಳ ನಡುವಿನ ಈ ರೋಚಕ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ಪ್ಲೇಆಫ್ ಸನಿಹಕ್ಕೆ ಬಂದಿರುವ ಗುಜರಾಥ್ಗೆ ಇಂದಿನ ಪಂದ್ಯ ಗೆದ್ದರೆ ಪ್ಲೇಆಫ್ಗೆ ತಲುಪಿದ ಮೊದಲ ತಂಡವಾಗಲಿದೆ. ಇತ್ತ ಮುಂಬೈ ಇಂಡಿಯನ್ಸ್ ಗೆದ್ದರೆ ಪ್ಲೇಆಫ್ ಸನಿಹವಾಗಲಿದೆ. ಈಗಾಗಲೇ ಟಾಸ್ ಗೆದ್ದ, ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಮುಂಬೈ ತಂಡ ಬ್ಯಾಟಿಂಗ್ ಆರಂಭಿಸಲಿದೆ.
ದಾಖಲೆಯ ಹೆಡ್ ಟು ಹೆಡ್:
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಇಲ್ಲಿಯವರೆಗೆ 2 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎರಡೂ ತಂಡಗಳ ಸಮತೋಲನ ಸಮಬಲವಾಗಿತ್ತು. ಅಲ್ಲಿ ಮುಂಬೈ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೆದ್ದಿದೆ. ಅದೇ ಹೊತ್ತಿಗೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ಗೆ ಜಯ ಸಿಕ್ಕಿದೆ. ಇಲ್ಲಿಯವರೆಗೆ ನಡೆಯುತ್ತಿರುವ ಋತುವಿನಲ್ಲಿ ಇವರಿಬ್ಬರ ನಡುವೆ ಪಂದ್ಯ ನಡೆದಿದ್ದು, ಇದರಲ್ಲಿ ಗುಜರಾತ್ ಟೈಟಾನ್ಸ್ ತಂಡ ಜಯ ಸಾಧಿಸಿದೆ.
Playing 1️⃣1️⃣s for tonight’s game are here 💪
Who is winning this folks? 🤔
Follow the Match: https://t.co/o61rmJWtC5#TATAIPL | #MIvGT pic.twitter.com/6pMSOnlIPD
— IndianPremierLeague (@IPL) May 12, 2023
ಮೇಲ್ಮೈಯಲ್ಲಿ ಸ್ವಲ್ಪ ತೇವಾಂಶವಿದೆ ಅಂದರೆ ಸ್ವಲ್ಪ ಸ್ವಿಂಗ್ ಆಗಬಹುದು. ವಿಶೇಷವಾಗಿ ಮೊದಲ 3-4 ಓವರ್‌ಗಳಲ್ಲಿ ಬೌಲರ್ಗಳು ಮಿಂಚಬಹುದು. ಆದರೆ ಬೌಲ್ ಮಾಡಿ ನಂತರ ಗುರಿಯನ್ನು ಬೆನ್ನಟ್ಟಿದ ತಂಡಕ್ಕೆ ಗೆಲುವಿನ ಪ್ರಮಾಣ ಹೆಚ್ಚಿದೆ. ಈ ಸ್ಥಳದಲ್ಲಿ ಯಾವುದೇ ಸ್ಕೋರ್ ಸುರಕ್ಷಿತವಾಗಿಲ್ಲ ಎನ್ನಬಹುದು. ಹೀಗಾಗಿ ದೊಡ್ಡ ಸ್ಕೋರ್ ಪಂದ್ಯವನ್ನು ಇಂದು ನೋಡಬಹುದು.
ಇದನ್ನೂ ಓದಿ: IPL 2023: ಗುಜರಾತ್ ವಿರುದ್ಧ ಮುಂಬೈ ಸೋತರೆ ಆರ್ಸಿಬಿಗೆ ಲಾಭ! ಪ್ಲೇಆಫ್ ರೇಸ್ನಲ್ಲಿ ಬಿಗ್ ಟ್ವಿಸ್ಟ್
IPL 2023 ರಲ್ಲಿ ಎರಡೂ ತಂಡಗಳ ಸ್ಥಾನ:
ಐಪಿಎಲ್ 2023 ರ 56 ಪಂದ್ಯಗಳ ನಂತರ, ಗುಜರಾತ್ ಟೈಟಾನ್ಸ್ ತಂಡವು 16 ಅಂಕಗಳೊಂದಿಗೆ (+0.951) ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಮುಂಬೈ ತಂಡ 12 ಅಂಕಗಳೊಂದಿಗೆ (-0.255) ನಾಲ್ಕನೇ ಸ್ಥಾನದಲ್ಲಿದೆ. ನಡೆಯುತ್ತಿರುವ ಋತುವಿನಲ್ಲಿ, ಗುಜರಾತ್ ಇದುವರೆಗೆ ಎಂಟು ಪಂದ್ಯಗಳಲ್ಲಿ ಗೆಲುವು ಕಂಡಿದೆ. ಅದೇ ಹೊತ್ತಿಗೆ ಮುಂಬೈ ಆರು ಪಂದ್ಯಗಳಲ್ಲಿ ಜಯ ಕಂಡಿದೆ.
ಗುಜರಾತ್ - ಮುಂಬೈ ಪ್ಲೇಯಿಂಗ್ 11:
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ವೃದ್ಧಿಮಾನ್ ಸಹಾ(ಡಬ್ಲ್ಯೂ), ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ(ಸಿ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ನೂರ್ ಅಹ್ಮದ್.
ಇಂಪ್ಯಾಕ್ಟ್ ಪ್ಲೇಯರ್ಸ್: ಆಕಾಶ್ ಮಧ್ವಲ್, ರಮಣದೀಪ್, ಡೆವಾಲ್ಡ್ ಬ್ರೆವಿಸ್, ಸಂದೀಪ್ ವಾರಿಯರ್, ಹೃತಿಕ್ ಶೋಕೀನ್.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ಇಶಾನ್ ಕಿಶನ್, ರೋಹಿತ್ ಶರ್ಮಾ, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ವಿಷ್ಣು ವಿನೋದ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ.
ಇಂಪ್ಯಾಕ್ಟ್ ಪ್ಲೇಯರ್ಸ್: ಶುಭಮನ್ ಗಿಲ್, ಸಾಯಿ ಸುದರ್ಶನ್, ಕೆಎಸ್ ಭರತ್, ಶಿವಂ ಮಾವಿ, ಆರ್ ಸಾಯಿ ಕಿಶೋರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ