• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • LSG vs GT: ಲಕ್ನೋ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ಲೇಆಫ್​ಗೆ ಲಗ್ಗೆಯಿಟ್ಟ ಗುಜರಾತ್

LSG vs GT: ಲಕ್ನೋ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ಲೇಆಫ್​ಗೆ ಲಗ್ಗೆಯಿಟ್ಟ ಗುಜರಾತ್

ಗುಜರಾತ್​ ತಂಡಕ್ಕೆ ಗೆಲುವು

ಗುಜರಾತ್​ ತಂಡಕ್ಕೆ ಗೆಲುವು

GT vs LSG: ಲಕ್ನೋ ಸೂಪರ್​ ಜೈಂಟ್ಸ್ ತಂಡವು ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸುವ ಮೂಲಕ 57 ರನ್​ಗಳಿಂದ ಸೋಲನ್ನಪ್ಪಿದೆ. ಈ ಮೂಲಕ ಗುಜರಾತ್ ಟೈಟನ್ಸ್ ತಂಡವು ಆಲ್​ಮೋಸ್ಟ್​ ಐಪಿಎಲ್ 2023ರ ಪ್ಲೇಆಫ್​ ಹಂತಕ್ಕೆ ತಲುಪಿದೆ.

  • Share this:

ಐಪಿಎಲ್ 2023ರ (IPl 2023) 51ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ (GT vs LSG) 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ಇದು ಐಪಿಎಲ್‌ನಲ್ಲಿ ಗುಜರಾತ್‌ನ ಅತಿ ದೊಡ್ಡ ಸ್ಕೋರ್ ಆಗಿದೆ. ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 12.1 ಓವರ್‌ಗಳಲ್ಲಿ 142 ರನ್‌ಗಳ ಜೊತೆಯಾಟವಾಡಿದರು. ಇದು IPL  2023ರಲ್ಲಿ ಮೊದಲ ವಿಕೆಟ್‌ಗೆ ಎರಡನೇ ಗರಿಷ್ಠ ಜೊತೆಯಾಟವಾಗಿದೆ. ಈ ಬಿಗ್​ ಟಾರ್ಗೆಟ್​ ಬೆನ್ನಟ್ಟಿದ ಲಕ್ನೋ ಸೂಪರ್​ ಜೈಂಟ್ಸ್ ತಂಡವು ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸುವ ಮೂಲಕ 57 ರನ್​ಗಳಿಂದ ಸೋಲನ್ನಪ್ಪಿದೆ. ಈ ಮೂಲಕ ಗುಜರಾತ್ ಟೈಟನ್ಸ್ ತಂಡವು ಆಲ್​ಮೋಸ್ಟ್​ ಐಪಿಎಲ್ 2023ರ ಪ್ಲೇಆಫ್​ ಹಂತಕ್ಕೆ ತಲುಪಿದೆ.


ಗಿಲ್​​ ಮತ್ತು ಸಾಹಾ ಭರ್ಜರಿ ಬ್ಯಾಟಿಂಗ್​:


ಗಿಲ್ ಅವರ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಐಪಿಎಲ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್‌ಗಳನ್ನು ಬಾರಿಸಿದ ಗುಜರಾತ್‌ನ ಮೊದಲ ಬ್ಯಾಟ್ಸ್‌ಮನ್ ಗಿಲ್. ಅವರಿಗಿಂತ ಮೊದಲು, ಡೇವಿಡ್ ಮಿಲ್ಲರ್ ಕಳೆದ ವರ್ಷ ಪುಣೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 51 ಎಸೆತಗಳಲ್ಲಿ 94 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಶುಭಮನ್ ಗಿಲ್ ನಿಧಾನಗತಿಯ ಆರಂಭ ಪಡೆದಿದ್ದರು.



ಅವರು ಮೊದಲ 10 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದರು. ಆದರೆ, ಇದಾದ ಬಳಿಕ 41 ಎಸೆತಗಳಲ್ಲಿ 85 ರನ್ ಗಳಿಸಿದರು. ಅರ್ಧಶತಕ ಗಳಿಸುವವರೆಗೂ ಅವರು ಒಂದೇ ಒಂದು ಬೌಂಡರಿ ಬಾರಿಸಿರಲಿಲ್ಲ. ಅವರು 29 ಎಸೆತಗಳಲ್ಲಿ 50 ರನ್ ಪೂರೈಸಿದರು. ಶುಭಮನ್ ಗಿಲ್ ಐಪಿಎಲ್ 2023 ರಲ್ಲಿ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 142 ಸ್ಟ್ರೈಕ್ ರೇಟ್‌ನಲ್ಲಿ 447 ರನ್ ಗಳಿಸಿದ್ದಾರೆ.


ಇದನ್ನೂ ಓದಿ: Virat Kohli: ಅರ್ಧಶತಕ ಸಿಡಿಸಿದರೂ ಕೊಹ್ಲಿ ಮೇಲೆ ಅಸಮಾಧಾನ! ಯಾಕೆ? ಅಷ್ಟಕ್ಕೂ ಏನಾಯ್ತು?


ಅವರು 4 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರು 48 ಬೌಂಡರಿ ಮತ್ತು 12 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ ಸಹಾ ಈ ಋತುವಿನಲ್ಲಿ ಗರಿಷ್ಠ 47 ರನ್ ಗಳಿಸಿದ್ದರು. 10 ಪಂದ್ಯಗಳಲ್ಲಿ ಕೇವಲ 192 ರನ್ ಗಳಿಸಿದ್ದರು. ಆದರೆ 11ನೇ ಪಂದ್ಯದಲ್ಲಿ ಅವರು ಈ ಫಾರ್ಮ್ ಅನ್ನು ಇನ್ನೂ ಮುಂದುವರಿಸಿದರೆ, ನಂತರ ಅವರು ಕೆಎಲ್ ರಾಹುಲ್ ಬದಲಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಆಯ್ಕೆಯಾಗಬಹುದು. ಇನ್ನು, ಉಳಿದಂತೆ ಹಾರ್ದಿಕ್​ 25 ರನ್ ಮತ್ತು ಡೇವಿಡ್​ ಮಿಲ್ಲರ್ 21 ರನ್​ ಗಳಿಸಿದರು.




ಡಿಕಾಕ್-ಮೈಯರ್ಸ್ ಲಕ್ನೋಗೆ ಉತ್ತಮ ಆರಂಭ:


ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್‌ನ 9 ನೇ ಓವರ್‌ನಲ್ಲಿ ಮೋಹಿತ್ ಶರ್ಮಾ ಮೈಯರ್ಸ್ ಅವರನ್ನು ಔಟ್ ಮಾಡುವ ಮೂಲಕ ಅಪಾಯಕಾರಿ ಜೋಡಿಯನ್ನು ಮುರಿದರು. ರಶೀದ್ ಖಾನ್ ಬೌಂಡರಿಯಲ್ಲಿ ಮೈಯರ್ಸ್ ಅವರ ಅದ್ಭುತ ಕ್ಯಾಚ್ ಪಡೆದರು. ಮೈಯರ್ಸ್ ಔಟಾದ ನಂತರ ಲಕ್ನೋ ರನ್‌ಗಳ ವೇಗ ಸ್ಥಗಿತಗೊಂಡಿತು ಮತ್ತು ಮುಂದಿನ 4 ಓವರ್‌ಗಳಲ್ಲಿ ತಂಡವು ಕೇವಲ 25 ರನ್ ಗಳಿಸಿತು. ಇದೇ ವೇಳೆ ಡಿಕಾಕ್ 50 ರನ್ ಪೂರೈಸಿದರು. ಆದರೆ, ಕಡಿಮೆ ರನ್ ರೇಟ್‌ನಿಂದಾಗಿ ಲಕ್ನೋ ಸಂಕಷ್ಟಕ್ಕೆ ಸಿಲುಕಿ ತಂಡವು ಪಂದ್ಯವನ್ನು ಸೋತಿತು.

First published: