ಐಪಿಎಲ್ 2023 (ಐಪಿಎಲ್ 2023) ರ 51ನೇ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (GT vs LSG) ನಡುವೆ ಹಣಾಹಣಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ರೋಚಕ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ನಾಯಕರು ಗೆಲುವಿನ ಆಸೆಯಲ್ಲಿದ್ದು, ಇಂದಿನ ಪಂದ್ಯ ಗೆದ್ದಲ್ಲಿ ಹಾರ್ದಿಕ್ ಪಡೆ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೃನಲ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಲಕ್ನೋ vs ಗುಜರಾತ್ ಹೆಡ್ ಟು ಹೆಡ್ ದಾಖಲೆ:
ಐಪಿಎಲ್ ಇತಿಹಾಸದಲ್ಲಿ ಎರಡು ತಂಡಗಳ ನಡುವಿನ ಮುಖಾಮುಖಿಯ ಬಗ್ಗೆ ನೋಡುವುದಾದರೆ, ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಹಲವು ಬಾರಿ ಮುಖಾಮುಖಿಯಾಗಿವೆ. ಪ್ರತಿ ಬಾರಿಯೂ ಲಕ್ನೋ ತಂಡ ಸೋಲನ್ನು ಎದುರಿಸುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಮೂರರಲ್ಲಿಯೂ ಲಕ್ನೋ ತಂಡ ಸೋಲನ್ನಪ್ಪಿದೆ.
ಅಂಕಪಟ್ಟಿಯಲ್ಲಿ ಉಭಯ ತಂಡಗಳ ಸ್ಥಾನ:
ಐಪಿಎಲ್ 2023ರ 50 ಪಂದ್ಯಗಳ ನಂತರ, ಗುಜರಾತ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಮತ್ತೊಂದೆಡೆ, ಲಕ್ನೋ ತಂಡವು ಮೂರನೇ ಸ್ಥಾನದಲ್ಲಿದೆ. ಪ್ರಸಕ್ತ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಒಟ್ಟು 10 ಪಂದ್ಯಗಳನ್ನು ಆಡಿದೆ. ಏತನ್ಮಧ್ಯೆ, ಅವರು ಏಳು ಪಂದ್ಯಗಳನ್ನು ಗೆದ್ದಿದ್ದರೆ, ಮೂರರಲ್ಲಿ ಸೋಲು ಕಂಡಿದ್ದಾರೆ. ಇದಲ್ಲದೇ ಲಕ್ನೋ ಇದುವರೆಗೆ 10 ಪಂದ್ಯಗಳನ್ನು ಆಡಿದೆ. ಏತನ್ಮಧ್ಯೆ, ತಂಡವು ಐದು ಗೆಲುವುಗಳನ್ನು ಪಡೆದಿದೆ, ನಾಲ್ಕು ಸೋಲು ಎದುರಿಸಿದೆ.
ಇದನ್ನೂ ಓದಿ: Virat Kohli: ಐಪಿಎಲ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ! ರೆಕಾರ್ಡ್ಗಳೆಲ್ಲಾ ಪೀಸ್ ಪೀಸ್
ಅಹಮದಾಬಾದ್ ಪಿಚ್- ಹವಾಮಾನ ವರದಿ:
ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಈ ಋತುವಿನಲ್ಲಿ ಇದುವರೆಗೆ ಬ್ಯಾಟರ್‌ಗಳಿಗೆ ಪ್ರಯೋಜನಕಾರಿಯಾಗಿದೆ. ಆದರೆ, ವೇಗಿಗಳು ಹೊಸ ಚೆಂಡಿನೊಂದಿಗೆ ಸ್ವಲ್ಪ ಪ್ರಾಬಲ್ಯ ತೋರುತ್ತಾರೆ. ಈ ಐಪಿಎಲ್‌ನಲ್ಲಿ ಈ ಹಿಂದೆ ನಡೆದ 5 ಪಂದ್ಯಗಳಲ್ಲಿ ಚೇಸಿಂಗ್ ತಂಡಗಳು 3 ಬಾರಿ ವಿಜಯಶಾಲಿಯಾಗಿ ಹೊರಹೊಮ್ಮಿವೆ. ಇಂದು ಅಹಮದಾಬಾದ್‌ನಲ್ಲಿ ಹವಾಮಾನವು ಸಾಮಾನ್ಯವಾಗಿ ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮಳೆಯ ಯಾವುದೇ ಸೂಚನೆ ಇಲ್ಲದ ಕಾರಣ ಪಂದ್ಯವು ಸಂಪೂರ್ಣವಾಗಿ ನಡೆಯಲಿದೆ.
ಉಭಯ ತಂಡಗಳಲ್ಲಿ ಬದಲಾವಣೆ:
ಕ್ವಿಂಟನ್ ಡಿ ಕಾಕ್ ಇಂದು ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. ಅವರು ಕೈಲ್ ಮೇಯರ್ಸ್ ಜೊತೆಗೆ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ, ನವೀನ್-ಉಲ್-ಹಕ್ ಇಂದು ಆಡುವುದಿಲ್ಲ ಎಂದು ನಾಯಕ ಕೃನಲ್ ಪಾಂಡ್ಯ ತಿಳಿಸಿದ್ದಾರೆ. ಜೊತೆಗೆ ಜೋಶುವಾ ಲಿಟಲ್ ರಾಷ್ಟ್ರೀಯ ತಂಡದ ಪರ ಆಡುವ ಸಲುವಾಗಿ ಐರ್ಲೆಂಡ್‌ಗೆ ಮರಳಿದ್ದಾರೆ, ಅವರ ಬದಲಿಗೆ ಅಲ್ಜಾರಿ ಜೋಸೆಫ್ ಗುಜರಾತ್ ಟೈಟಾನ್ಸ್‌ನ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಲಕ್ನೋ - ಗುಜರಾತ್ ಪ್ಲೇಯಿಂಗ್ 11:
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್(ಡಬ್ಲ್ಯೂ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಕರಣ್ ಶರ್ಮಾ, ಕೃನಾಲ್ ಪಾಂಡ್ಯ(ಸಿ), ಮಾರ್ಕಸ್ ಸ್ಟೋನಿಸ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಅವೇಶ್ ಖಾನ್.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ವೃದ್ಧಿಮಾನ್ ಸಹಾ(ಪ), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ(ಸಿ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ