GT vs CSK Live Score, IPL 2023: ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ಗುಜರಾತ್​​ಗೆ ಭರ್ಜರಿ ಗೆಲುವು

GT vs CSK Live Score, IPL 2023: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK vs GT) ತಂಡಗಳು ಮುಖಾಮುಖಿ ಆಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023ಕ್ಕೆ (IPl2023) ವೇದಿಕೆ ಸಿದ್ಧವಾಗಿದೆ. ಇಂದಿನಿಂದ ಐಪಿಎಲ್ 16ನೇ ಸೀಸನ್ ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK vs GT) ತಂಡಗಳು ಮುಖಾಮುಖಿ ಆಗಲಿದೆ. ಅದರಲ್ಲಲಿಯೂ ಈ ಬಾರಿ ಐಪಿಎಲ್​ ಮತ್ತೆ ಹಳೆಯ ಮಾದರಿಯಲ್ಲಿ ನಡೆಯಲಿದ್ದು, ಬರೋಬ್ಬರಿ 8 ಹೊಸ ನಿಯಮಗಳೊಂದಿಗೆ ನಡೆಯಲಿದೆ. ಈ ಮೂಲಕ ಈ ವರ್ಷ 52 ದಿನಗಳ ಅವಧಿಯಲ್ಲಿ 12 ಸ್ಥಳಗಳಲ್ಲಿ ಒಟ್ಟು 70 ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಐಪಿಎಲ್ 2023 ರ ವೇಳಾಪಟ್ಟಿಯಂತೆ ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಕ್ರಮವಾಗಿ 7 ಹೋಮ್ ಪಂದ್ಯಗಳನ್ನು ಮತ್ತು 7 ಬೇರೆಡೆ ಪಂದ್ಯಗಳನ್ನು ಆಡುತ್ತವೆ.

ಮತ್ತಷ್ಟು ಓದು ...
31 Mar 2023 23:42 (IST)

ಚೆನ್ನೈ ವಿರುದ್ಧ ಹಾರ್ದಿಕ್​​ ಪಡೆಗೆ ರೋಚಕ ಗೆಲುವು

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೈ ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 178 ರನ್ ಗಳಿಸಿತು. ಈ ಟಾರ್ಗೆಟ್​ ಬೆನ್ನಟ್ಟಿದ ಹಾರ್ದಿಕ್​ ಪಡೆ ನಿಗದಿತ 19.2 ಓವರ್​ ಗಳಲ್ಲಿ 5  ವಿಕೆಟ್​​ಗಳ ನಷ್ಟಕ್ಕೆ 182 ರನ್​ ಗಳಿಸುವ ಮೂಲಕ ರೋಚಕ ಜಯ ದಾಖಲಿಸಿತು.

31 Mar 2023 23:17 (IST)

ಗಿಲ್ ವಿಕೆಟ್‌ನೊಂದಿಗೆ CSK ಕಂಬ್ಯಾಕ್​:

ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಗುಜರಾತ್‌ನ ಅತ್ಯುತ್ತಮ ಅರ್ಧಶತಕಗಳ ಇನ್ನಿಂಗ್ಸ್‌ನಿಂದ ಉತ್ತಮವಾಗಿ ಆಡುತ್ತಿದ್ದರು. ಆದರೆ ಗಿಲ್ ವಿಕೆಟ್ ಪಡೆಯುವ ಮೂಲಕ ಸಿಎಸ್‌ಕೆ ಪಂದ್ಯದಲ್ಲಿ ಪುನರಾಗಮನ ಮಾಡಿದೆ.

31 Mar 2023 22:50 (IST)

ಗುಜರಾತ್​ ಸ್ಕೋರ್​ ಬೋರ್ಡ್​:

ಓವರ್​: 11
ರನ್​: 106
ವಿಕೆಟ್​: 2

ಸುದ್ದಿ ಬರೆಯವಾಗಿನ ಸ್ಕೋರ್​

31 Mar 2023 22:49 (IST)

ಗೆಲುವಿನತ್ತ ಗುಜರಾತ್​

ಸಿಎಸ್​ಕೆ ನೀಡಿದ ಟಾರ್ಗೆಟ್​ ಬೆನ್ನಟ್ಟಿದ ಗುಜರಾತ್​ ತಂಡವು ಉತ್ತಮ ಬ್ಯಾಟಿಂಗ್​ ಮಾಡುತ್ತಿದೆ. ಶುಭ್​ಮನ್ ಗಿಲ್​ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದು, ತಂಡ ಗೆಲುವಿನತ್ತ ಸಾಗುತ್ತಿದೆ.

31 Mar 2023 21:49 (IST)

100 ವಿಕೆಟ್​ ಪಡೆದು ಶಮಿ ಸಾಧನೆ:

ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ದೊಡ್ಡ ಸಾಧನೆ ಮಾಡಿದ್ದಾರೆ. ಮೊಹಮ್ಮದ್ ಶಮಿ ತಮ್ಮ ನಾಲ್ಕನೇ ಐಪಿಎಲ್ ತಂಡದೊಂದಿಗೆ ಆಡುವಾಗ ಐಪಿಎಲ್​ ಲೀಗ್‌ನಲ್ಲಿ 100 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು. ಮೊಹಮ್ಮದ್ ಶಮಿ ಅವರು ಸಿಎಸ್‌ಕೆ ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿ ಈ ಸಾಧನೆ ಮಾಡಿದರು.

 

31 Mar 2023 21:43 (IST)

ಗುಜರಾತ್​ ಟೈಟನ್ಸ್​ ಬೌಲಿಂಗ್​:

ಗುಜರಾತ್ ಟೈಟನ್ಸ್​ ಪರ ಮೊಹಮ್ಮದ್ ಶಮಿ, ರಶೀದ್ ಖಾನ್ ಮತ್ತು ಅಲ್ಜಾರಿ ಜೋಸೆಫ್ ತಲಾ 2 ವಿಕೆಟ್​ ಪಡೆದು ಮಿಂಚಿದರು. ಜೋಶುವಾ ಲಿಟಲ್ ಸಹ 1 ವಿಕೆಟ್​ ಪಡೆಯುವ ಮೂಲಕ ಚೆನ್ನೈ ಬ್ಯಾಟ್ಸ್​ ಮನ್​​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

31 Mar 2023 21:35 (IST)

ಸಿಎಸ್​ಕೆ ಬ್ಯಾಟಿಂಗ್​:

ಡೆವೊನ್ ಕಾನ್ವೆ 1 ರನ್, ಬೆನ್ ಸ್ಟೋಕ್ಸ್ 7 ರನ್, ಅಂಬಟಿ ರಾಯುಡು 12 ರನ್, ಮೊಯಿನ್ ಅಲಿ 23 ರನ್, ಶಿವಂ ದುಬೆ 19 ರನ್, ರವೀಂದ್ರ ಜಡೇಜಾ 1 ರನ್, ಎಂಎಸ್​ ಧೋನಿ ಅಂತಿಮವಾಗಿ ಆಕರ್ಷಕ ಸಿಕ್ಸ್ ಸಿಡಿಸುವ ಮೂಲಕ 7 ಬಾಲ್​ಗೆ 14 ರನ್​ ಗಳಿಸಿದರು. ಮಿಚೆಲ್ ಸ್ಯಾಂಟ್ನರ್ 1 ರನ್ ಗಳಿಸಿದರು.

31 Mar 2023 21:31 (IST)

ಚೆನ್ನೈ ಸ್ಕೋರ್​ ಬೋರ್ಡ್​:

ಓವರ್​: 20
ರನ್​: 178
ವಿಕೆಟ್​: 7
ಗುಜರಾತ್​ ಟೈಟನ್ಸ್​ಗೆ ಟಾರ್ಗೆಟ್​: 179

31 Mar 2023 20:55 (IST)

ಸ್ಕೋರ್​ ಬೋರ್ಡ್​:

ಓವರ್​:14
ರನ್​: 125
ವಿಕೆಟ್​: 4

ಸುದ್ದಿ ಬರೆಯುವ ವೇಳೆಗೆ

31 Mar 2023 20:54 (IST)

ಬೃಹತ್​ ಮೊತ್ತದತ್ತ ಚೆನ್ನೈ ಸೂಪರ್​ ಕಿಂಗ್ಸ್:

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಉತ್ತಮ ಬ್ಯಾಟಿಂಗ್​​ ಮಾಡುತ್ತಿದ್ದು, ರುತುರಾಜ್​ ಗಾಯಕ್ವಾಡ್​ ಅವರ ಭರ್ಜರಿ ಬ್ಯಾಟಿಂಗ್​ ಮೂಲಕ ತಂಡವು ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ.

 

31 Mar 2023 20:25 (IST)

ಗಾಯಕ್ವಾಡ ಭರ್ಜರಿ ಅರ್ಧಶತಕ:

ರುತುರಾಜ್​ ಗಾಯಕ್ವಾಡ ಗುಜರಾತ್​ ವಿರುದ್ಧ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. ಗಾಯಕ್ವಾಡ 23 ಎಸೆತದಲ್ಲಿ 5 ಸಿಕ್ಸ್ ಮತ್ತು 3 ಫೋರ್​ ಮೂಲಕ ಆಕರ್ಷಕ 50 ರನ್​ ಗಳಿಸಿದ್ದಾರೆ. (ಇದು ಸುದ್ದಿ ಬರೆಯುವಾಗಿನ ಸ್ಕೋರ್​ ಆಗಿರುತ್ತದೆ)

31 Mar 2023 20:14 (IST)

ಸಿಎಸ್​ಕೆ 2ನೇ ವಿಕೆಟ್​ ಪತನ:

ಮೋಯಿನ್​ ಅಲಿ 23 ರನ್​ ಗಳಿಸಿ ಆಡುವಾಗ ರಶಿಧ್​ ಖಾನ್​ಗೆ ವಿಕೆಟ್​ ಒಪ್ಪಿಸಿದರು. ಮೊದಲು ಎಲ್​ಬಿ ಬಲೆಗೆ ಬಿದ್ದ ಅಲಿ ಬಳಿಕ ಯುಡಿಆರ್​ಎಸ್​ ನೆರವಿನಿಂದ ನಾಟೌಟ್​ ಆದರು. ಬಳಿಕ ಕೀಪರ್​ಗೆ ಕ್ಯಾಚಿಟ್ಟು ಫೆವಿಲಿಯನ್​ಗೆ ತೆರಳಿದರು.

31 Mar 2023 19:47 (IST)

ಚೆನ್ನೈ ಮೊದಲ ವಿಕೆಟ್​ ಪತನ:

ಸಿಎಸ್​ಕೆ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಮೊಹಮ್ಮದ್ ಶಮಿ ಓವರ್​ನಲ್ಲಿ ಚೆನ್ನೈ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೆ (1) ಬೋಲ್ಡ್​ ಆಗಿ ಫೆವೆಲಿಯನ್​ ಸೇರಿದ್ದಾರೆ.

31 Mar 2023 19:29 (IST)

ಚೆನ್ನೈ-ಗುಜರಾತ್​​ ಪ್ಲೇಯಿಂಗ್​ 11:

ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್​ 11: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಎಂಎಸ್ ಧೋನಿ (w/c), ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ರಾಜವರ್ಧನ್ ಹಂಗರ್ಗೇಕರ್.

 

ಗುಜರಾತ್​ ಟೈಟನ್ಸ್  ಪ್ಲೇಯಿಂಗ್​ 11: ವೃದ್ಧಿಮಾನ್​ ಸಹಾ, ಶುಭ್​ಮನ್ ಗಿಲ್​, ಕೇನ್​ ವಿಲಿಯಮ್ಸನ್​, ಹಾರ್ದಿಕ್​ ಪಾಂಡ್ಯ, ವಿಜಯ್​ ಶಂಕರ್​, ರಾಹುಲ್​ ತೆವಾಟಿಯಾ, ರಶೀದ್ ಖಾನ್​, ಮೊಹಮ್ಮದ್ ಶಮಿ, ಜೋಶುವಾ ಲಿಟಲ್​, ಯಶ್​​ ದಯಾಲ್​, ಅಲ್ಜಾರಿ ಜೋಸೆಫ್​

31 Mar 2023 19:15 (IST)

ಟಾಸ್​ ಗೆದ್ದ ಹಾರ್ದಿಕ್​, ಬೌಲಿಂಗ್​ ಆಯ್ಕೆ

ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಗುಜರಾತ್​ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.

 

31 Mar 2023 18:48 (IST)

ಭರ್ಜರಿ ಡ್ಯಾನ್ಸ್ ಮಾಡಿದ ರಶ್ಮಿಕಾ:

ಅರಜಿತ್​ ಸಿಂಗ್​ ಬಳಿಕ ತಮನ್ನಾ ನೃತ್ಯದ ಮೂಲಕ ಎಲ್ಲರನ್ನೂ ರಂಜಿಸಿದರು. ಇದಾದ ಬಳಿಕ ಕನ್ನಡದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಸಹ ನರೇಂದ್ರ ಮೋದಿ ಮೈದಾನದಲ್ಲಿ ಭರ್ಜರಿ ಡ್ಯಾನ್ಸ್​ ಮಾಡುವ ಮೂಲಕ ಎಲ್ಲರನ್ನೂ ಹೆಚ್ಚೆದ್ದು ಕುಣಿಯುವಂತೆ ಮಾಡಿದರು.

 

31 Mar 2023 18:30 (IST)

ಅರಜಿತ್​ ಸಿಂಗ್​ ಹಾಡಿಗೆ ಮನಸೋತ ಪ್ರೇಕ್ಷಕರು:

ಬಾಲಿವುಡ್​ನ ಖ್ಯಾತ ಸಂಗೀತಗಾರ ಅರಿಜಿತ್ ಸಿಂಗ್​ ಹಾಡಿನ ಮೂಲಕ ಐಪಿಎಲ್​ 2023ರ 16ನೇ ಸೀಸನ್​ ಅದ್ಧೂರಿಯಾಗಿ ಆರಂಭವಾಗಿದೆ. ತಮ್ಮ ಮಧುರವಾದ ಹಾಡುಗಳ ಮೂಲಕ ಅರಿಜಿತ್ ಸಿಂಗ್ ಮೋದಿ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಕ್ರಿಕೆಟ್​ ಅಭಿಮಾನಿಗಳನ್ನು ರಂಜಿಸಿದರು.

 

31 Mar 2023 18:02 (IST)

ಪಂದ್ಯಕ್ಕೆ ಮಳೆ ಅಡ್ಡಿ:

ಋತುವಿನ ಆರಂಭಿಕ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಗುರುವಾರ ರಾತ್ರಿಯಿಂದ ಪಂದ್ಯ ನಡೆಯುವ ಸಾಧ್ಯತೆ ಇಲ್ಲ ಎಂಬ ಸುದ್ದಿ ಬರುತ್ತಿದೆ. ಗುರುವಾರ ಸಂಜೆ ಗುಜರಾತ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಂದ್ಯ ನಡೆಯುವುದಿಲ್ಲ ಎಂಬ ನಿರಾಸೆ ಉಂಟಾಗಿತ್ತು. ಮೊದಲ ಪಂದ್ಯ ನಡೆಯದಿರುವುದು ಕ್ರಿಕೆಟ್ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. ಮೇಲಾಗಿ ಪಂದ್ಯಕ್ಕೂ ಮುನ್ನ ನಡೆಯಲಿರುವ ಉದ್ಘಾಟನಾ ಸಮಾರಂಭವೂ ರದ್ದಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: IPL 2023, CSK vs GT: ಐಪಿಎಲ್​ ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್​, ಚೆನ್ನೈ-ಗುಜರಾತ್​ ಪಂದ್ಯ ನಡೆಯುವುದು ಡೌಟ್​!

31 Mar 2023 17:35 (IST)

ಚೆನ್ನೈ- ಗುಜರಾತ್​ ಬಲಾಬಲ:

ಇನ್ನು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಮತ್ತು ಗುಜರಾತ್​ ತಂಡಗಳು ಸೆಣಸಾಡಲಿದೆ. ಗುಜರಾತ್ ಇದುವರೆಗೆ 2 ಬಾರಿ ಸಿಎಸ್‌ಕೆಯನ್ನು ಎದುರಿಸಿದ ನಂತರ ಎರಡೂ ಬಾರಿಯೂ ಗೆದ್ದಿದೆ. ಈ ಎರಡೂ ತಂಡಗಳು ಕಳೆದ ವರ್ಷ ಏಪ್ರಿಲ್‌ನಲ್ಲಿ ಒಮ್ಮೆ ಮತ್ತು ಮೇ ತಿಂಗಳಲ್ಲಿ ಒಮ್ಮೆ ಮುಖಾಮುಖಿಯಾಗಿದ್ದವು. ಎರಡೂ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಜಯ ಸಾಧಿಸಿತ್ತು.

31 Mar 2023 17:33 (IST)

ಐಪಿಎಲ್​ಗೆ ಬಾಲಿವುಡ್​ ರಂಗು:

ಜೊತೆಗೆ ಬಾಲಿವುಡ್ ನಟಿ ಕತ್ರಿನಾ ಕೈಫ್, ನಟ ಟೈಗರ್ ಶ್ರಾಫ್ ಸಹ ಹೆಜ್ಜೆ ಹಾಕಲಿದ್ದಾರೆ. ಜೊತೆಗೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶೇಷ ಲೇಸರ್ ಶೋ ಕಾರ್ಯಕ್ರಮವನ್ನೂ ಬಿಸಿಸಿಐ ಹಮ್ಮಿಕೊಂಡಿದೆ. ಐಪಿಎಲ್​ ಉದ್ಘಾಟನಾ ಕಾರ್ಯಕ್ರಮವು ಸಂಜೆ 6 ಗಂಟೆಗೆ ಆರಂಭವಾಗಲಿದೆ. ಈ ಅದ್ಧೂರಿ ಕಾರ್ಯಕ್ರಮವು ಸುಮಾರು 45 ನಿಮಿಷಗಳ ಕಾಲ ನಡೆಯಲಿದೆ. ಬಳಿಕ 7 ಗಂಟೆಗೆ ಟಾಸ್​ ನಡೆಯಲಿದ್ದು, 7:30ಕ್ಕೆ ಪಂದ್ಯ ಆರಂಭವಾಗಲಿದೆ.