IND vs PAK: ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಸುದ್ದಿ, ನಡೆಯಲಿದ್ಯಾ ಇಂಡೋ-ಪಾಕ್-ಆಸೀಸ್ ತ್ರಿಕೋನ ಸರಣಿ?

ಆಸ್ಟ್ರೆಲಿಯಾ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಿಕ್ ಹಾಕ್ಲೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಗೆ ಆತಿಥ್ಯ ವಹಿಸಲು ಆಸ್ಟ್ರೇಲಿಯಾ ಸಿದ್ಧವಾಗಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯದೆಯೇ ಅದೆಷ್ಟೋ ವರ್ಷಗಳೇ ಕಳೆದುಹೋಗಿದೆ. ಭಾರತ ಮತ್ತು ಪಾಕ್​ ನಡುವಿನ ರಾಜಕೀಯ ಪರಿಸ್ಥಿಯು ಹದಗೆಟ್ಟಿರುವ ಹಿನ್ನಲೆ, ಕ್ರಿಕೆಟ್​ (Cricket) ಪಂದ್ಯಗಳಿಗೂ ಅಡ್ಡಿಪಡಿಸುತ್ತಲಿದೆ. ಆದರೂ ಕೇವಲ ಐಸಿಸಿ (ICC) ಟೂರ್ನಿಗಳಲ್ಲಿ ಮಾತ್ರ ಭಾರತ-ಪಾಕ್​ ತಂಡಗಳು ಎದುರಾಗುತ್ತಿದ್ದು, ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಸರಣಿ ಆಯೋಜನೆಯಾಗದೆ ಬಹುತೇಕ ಒಂದು ದಶಕ ಸಮೀಪಿಸುತ್ತಿದೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳು ಮತ್ತೆ ಈ ಎರಡೂ ದೇಶಗಳ ಮಧ್ಯೆ ಕ್ರಿಕೆಟ್ ಸರಣಿಗಳು ಪ್ರಾರಂಭವಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಸ್ಟ್ರೆಲಿಯಾ (Australia) ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಿಕ್ ಹಾಕ್ಲೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಗೆ ಆತಿಥ್ಯ ವಹಿಸಲು ಆಸ್ಟ್ರೇಲಿಯಾ ಸಿದ್ಧವಾಗಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಭಾರತ-ಪಾಕ್ ಪಂದ್ಯಕ್ಕೆ ಆಸೀಸ್ ಆತಿಥ್ಯ:

ಭಾರತ ಮತ್ತು ಪಾಕ್​ ನಡುವಿನ ಪಂದ್ಯಗಳನ್ನು ನೋಡಲು ಇಡೀ ವಿಶ್ವವೇ ಕಾದು ಕುಳಿತ್ತಿರುತ್ತದೆ ಎಂದರೂ ತಪ್ಪಾಗಲಾರದು. ಆದರೆ ಇದೀಗ ಇದರ ಲಾಭವನ್ನು ಪಡೆಯಲು ಇದೀಗ ಆಸ್ಟ್ರೆಲಿಯಾ ಕ್ರಿಕೆಟ್ ಮಂಡಳಿ ಸಜ್ಜಾಗಿದೆ. ಹೌದು, ಭಾರತ ಹಾಗೂ ಪಾಕಿಸ್ತಾನ ಜೊತೆಗಿನ ಸರಣಿಗೆ ಆತಿಥ್ಯ ವಹಿಸಲು ನಾವು ಸಿದ್ಧವಾಗಿದ್ದೇವೆ ಎಂದು ಆಸ್ಟ್ರೆಲಿಯಾ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿದ್ದಾರೆ.

ಎರಡು ದೇಶಗಳ ನಡುವಿನ ಹಣಾಹಣಿ ಮುಂದುವರಿಯಲು ನಾವು ವೇದಿಕೆ ನೀಡಲು ಸಂತಸಪಡುತ್ತೇವೆ. ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ದೊಡ್ಡ ಪ್ರಮಾಣದ ವಲಸಿಗರು ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಹೀಗಾಗಿ ಮಾರುಕಟ್ಟೆ ದೃಷ್ಟಿಯಿಂದಲೂ ಆಸ್ಟ್ರೇಲಿಯಾ ಈ ಎರಡು ತಂಡಗಳ ಪಂದ್ಯಗಳನ್ನು ಆಯೋಜಿಸಲು ಉತ್ತಮ ತಾಣವಾಗುತ್ತದೆ. ಅಲ್ಲದೇ ಭಾರತ ಹಾಗೂ ಪಾಕ್ ಒಳಗೊಂಡಂತೆ ಆಸೀಸ್ ತ್ರಿಕೋನ ಸರಣಿ ಆಡಲು ಉತ್ಸುಕವಾಗಿದೆ. ಅಲ್ಲದೇ ವೈಯಕ್ತಿಕವಾಗಿ ನಾನು ತ್ರಿಕೋನ ಸರಣಿ ಪರಿಕಲ್ಪನೆಯನ್ನು ಇಷ್ಟಪಡುತ್ತೇನೆ. ಈ ಹಿಂದೆಯೂ ಅದು ತುಂಬಾ ಚೆನ್ನಾಗಿ ಯಶಸ್ಸು ಸಾಧಿಸಿದೆ ಎಂದು ನಿಕ್ ಹಾಕ್ಲೆ ಹೇಳಿದ್ದಾರೆ.

ಇದನ್ನೂ ಓದಿ: India vs Pakistan: ಕಿಂಗ್ ಕೊಹ್ಲಿಯಿಂದ ಸಚಿನ್​ರ ಮತ್ತೊಂದು ದಾಖಲೆ ಉಡೀಸ್

4 ತಂಡಗಳನ್ನೊಳಗೊಂಡ ಟೂರ್ನಿ ಆಯೋಜನೆ:

ಕಳೆದ ಕೆಲ ತಿಂಗಳುಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖಸ್ಥ ರಮೀಜ್ ರಾಜಾ ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಒಳಗೊಂಡ 4 ತಂಡಗಳ ಟೂರ್ನಿಯ ಆಯೋಜನೆಗೆ ಐಸಿಸಿ ಎದುರು ಪ್ರಸ್ತಾವನೆಯನ್ನು ಇಟ್ಟಿದ್ದರು. ಜೊತೆಗೆ ಈ ಟೂರ್ನಮೆಂಟ್‌ನಿಂದ ಬಂದ ಲಾಭವನ್ನು ಎಲ್ಲಾ ಐಸಿಸಿ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಬಹುದು ಎಂದು ಸಲಹೆಯನ್ನು ನೀಡಿದ್ದರು. ಆದರೆ ಬಿಸಿಸಿಐ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲ್ಲ.

ತ್ರಿಕೋನ ಸರಣಿ ಬಹುತೇಕ ಅಸಾಧ್ಯ:

ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಿನ ತ್ರಿಕೋನ ಸರಣಿ ಬಹುತೇಕ ಅಸಾಧ್ಯ ಎಂದು ಭಾರತೀಯ ಕ್ರಿಕೆಟ್ ವಲಯಗಳು ಅಭಿಪ್ರಾಯಪಟ್ಟಿವೆ. ಹೌದು, 2023ರ ವರೆಗಿನ ಟೀಂ ಇಂಡಿಯಾ ವೇಳಾಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಟಿ20 ವಿಶ್ವಕಪ್​ನಲ್ಲಿ ಭಾರತ-ಪಾಕ್ ಹಣಾಹಣಿ:

ಕಳೆದ ಬಾರಿ ನಡೆದ ಐಸಿಸಿ ಟೂರ್ನಿಯ ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕ್​ ತಂಡಗಳು ಮೊದಲ ಪಂದ್ಯದಲ್ಲಿಯೇ ಮುಖಾಮುಖಿಯಾಗಿದ್ದವು. ಅಂತೆಯೇ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಆರಂಭಿಕ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ.

ಇದನ್ನೂ ಓದಿ: India vs Pakistan: ಭಾರತಕ್ಕೆ ಪಾಕ್ ವಿರುದ್ಧ ಸೋಲೇ ಇಲ್ಲ; ಹೈವೋಲ್ಟೇಜ್ ಪಂದ್ಯದಲ್ಲಿ ದಾಖಲೆಗಳ ಸರಮಾಲೆ!

ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಅಕ್ಟೋಬರ್ 23 ರಂದು ನಡೆಯಲಿರುವ ಪಂದ್ಯದ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಇದಕ್ಕೂ ಮುನ್ನ ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆಯಿದೆ.

24 ವರ್ಷಗಳ ಬಳಿಕ ಆಸೀಸ್-ಪಾಕ್ ಸರಣಿ:

ಸರಿಸುಮಾರು 24 ವರ್ಷಗಳ ಬಳಿಕ ಆಸೀಸ್ ತಂಡ ಪಾಕಿಸ್ತಾನಕ್ಕೆ  ಸರಣಿಯನ್ನಾಡಲು ಹೋಗಿದೆ. ಈ ವೇಳೆ ಒಟ್ಟು ಮೂರು ಮಾದರಿಯ ಸರಣಿ ಆಯೋಜನಗೊಂಡಿದ್ದು, ಮೊದಲ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ನಡೆದಿದ್ದು, ಡ್ರಾ ನಲ್ಲಿ ಅಂತ್ಯಗೊಂಡಿದ್ದೆ.
Published by:shrikrishna bhat
First published: