ಭಾರತದಲ್ಲಿ ಸ್ವಾತಂತ್ರ್ಯ ನಂತರದ ಕ್ರೀಡಾ ಜಗತ್ತಿನ ಅವಿಸ್ಮರಣೀಯ ಕ್ಷಣಗಳು..!

news18
Updated:August 15, 2018, 11:29 AM IST
ಭಾರತದಲ್ಲಿ ಸ್ವಾತಂತ್ರ್ಯ ನಂತರದ ಕ್ರೀಡಾ ಜಗತ್ತಿನ ಅವಿಸ್ಮರಣೀಯ ಕ್ಷಣಗಳು..!
news18
Updated: August 15, 2018, 11:29 AM IST
ನ್ಯೂಸ್ 18 ಕನ್ನಡ

1947ನೇ ಇಸವಿಯ ಆಗಸ್ಟ್​ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾರತದ ಕ್ರೀಡೆಯಲ್ಲೂ ಸಾಕಷ್ಟು ಬದಲಾವಣೆ ಜೊತೆಗೆ ಸುಧಾರಣೆ ಕಂಡಿತು. ಸ್ವಾತಂತ್ರ್ಯದ ಬಳಿಕ ಭಾರತೀಯ ಕ್ರೀಡಾಪಟುಗಳ ಕೆಲ ಅವಿಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕುವುದಾದರೆ…

1948: ಸ್ವಾತಂತ್ರ್ಯದ ಬಳಿಕ ಒಲಿಂಪಿಕ್​​ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕ

(AP)


ಭಾರತದ ಹಾಕಿ ತಂಡ ಒಲಿಂಪಿಕ್​​​ನಲ್ಲಿ ಮೂರು ಚಿನ್ನದ ಪದಕ ಗೆದ್ದಿತ್ತಾದರು ಅದು ಸ್ವಾತಂತ್ರ್ಯ ಸಿಗುವ ಮುನ್ನ. ಅಂದರೆ ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆ ನಡೆಸುತ್ತಿರುವಾಗಲೇ. ಆದರೆ 1948ರಲ್ಲಿ ಲಂಡನ್​ನಲ್ಲಿ ನಡೆದ ಒಲಿಂಪಿಕ್​​​ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ನೆದರ್​​ಲೆಂಡ್ ವಿರುದ್ದ 2-1 ಅಂತರದ ಜಯ ಸಾಧಿಸಿ ಫೈನಲ್​ಗೆ ಲೆಗ್ಗೆ ಇಟ್ಟಿತ್ತು. ಬಳಿಕ ಫೈನಲ್​​ ಪಂದ್ಯದಲ್ಲಿ ಭಾರತ ಹಾಕಿ ತಂಡ ಇಂಗ್ಲೆಂಡ್ ತಂಡವನ್ನು 4-0 ಅಂತರದಿಂದ ಮಣಿಸಿ ಭರ್ಜರಿ ಜಯ ಸಾಧಿಸಿ ಸ್ವಾತಂತ್ರ್ಯದ ಬಳಿಕ ಮೊದಲ ಚಿನ್ನದ ಪದಕವನ್ನು ಭಾರತ ಪಡೆದುಕೊಂಡು ಇತಿಹಾಸ ಸೃಷ್ಟಿಸಿತು.

1951: ಏಷ್ಯನ್ ಗೇಮ್ಸ್ ಅನ್ನು ಮೊದಲ ಬಾರಿ ಆಯೋಜಿಸಿದ ಭಾರತ
Loading...

ಮಾರ್ಚ್​ 1951ರಲ್ಲಿ ಭಾರತ ಮೊದಲ ಬಾರಿಗೆ ಸ್ವಾತಂತ್ರ್ಯ ಸಿಕ್ಕ ನಂತರ ಏಷ್ಯನ್ ಗೇಮ್ಸ್​ ಅನ್ನು ಆಯೋಜನೆ ಮಾಡಿತ್ತು. 11 ರಾಷ್ಟ್ರಗಳು ಇದರಲ್ಲಿ ಪಾಲ್ಗೊಂಡಿದ್ದು, ಸ್ವಾತಂತ್ರ್ಯಗೊಂಡ ದೇಶವು ತಮ್ಮ ಸ್ನೇಹದ ಭಾಂದವ್ಯವನ್ನು ಮೂಡಿಸುವುದು ಈ ಪಂದ್ಯವಳಿಯ ಉದ್ದೇಶವಾಗಿತ್ತು. ಇದರಲ್ಲಿ ಭಾರತದ ಲಾವಿ ಪಿಂಟೋ ಅವರು 100 ಹಾಗೂ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

1952: ಟೆಸ್ಟ್​ ಕ್ರಿಕೆಟ್ ಸರಣಿಯಲ್ಲಿ ಭಾರತಕ್ಕೆ ಮೊದಲ ಜಯ

ಭಾರತ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯವನ್ನು 1932ರಲ್ಲಿ ಆಡಿತ್ತಾದರು, ಸ್ವಾತಂತ್ರ್ಯ ಸಿಕ್ಕ ನಂತರ ಭಾರತಕ್ಕೆ ಮೊದಲ ಜಯ ದೊರಕಿದ್ದು 1952ರಲ್ಲಿ. ಪಾಕಿಸ್ತಾನ ವಿರುದ್ಧ ಭಾರತ ಮೊದಲ ಹಾಗೂ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ 2-1 ಅಂತರದ ಜಯ ಸಾಧಿಸಿತ್ತು.

1958: ಕಾಮನ್​ವೆಲ್ತ್​ ಗೇಮ್ಸ್​ನ ಕುಸ್ತಿ ಪದ್ಯಾಟದಲ್ಲಿ ಭಾರತಕ್ಕೆ ಮೊದಲ ಚಿನ್ನ:

ಭಾರತದಲ್ಲಿ ಹಲವಾರು ಕ್ರೀಡಾಪಟುಗಳು ಕುಸ್ತಿಯಲ್ಲಿ ಸ್ಪರ್ಧಿಸಿದ್ದರಿಂದ ಕುಸ್ತಿ ಭಾರತದಲ್ಲಿ ಹೆಸರುವಾಸಿಯಾಯಿತು. ಆದರೆ 1958ರಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಮೊದಲ ಚಿನ್ನದ ಪದಕ ಸಿಕ್ಕಿದ್ದು ಇತಿಹಾಸ ಸೃಷ್ಟಿಸಿತು.

1960: ವಿಂಬಲ್ಡನ್​​ನಲ್ಲಿ ಸೆಮಿ-ಫೈನಲ್​​ಗೆ ಲಗ್ಗೆ ಇಟ್ಟ ಭಾರತೀಯ:

(Getty Images)


ವಿಂಬಲ್ಡನ್ ವಿಶ್ವದ ಅತ್ಯಂತ ಹಳೆಯ ಟೆನ್ನಿಸ್ ಆಟ. ಸ್ವಾತಂತ್ರ್ಯ ಸಿಕ್ಕ ನಂತರ ಇಂಗ್ಲೆಂಡ್ ಕ್ಲಬ್​​ನಲ್ಲಿ ಭಾರತದ ರಮನಾಥನ್ ಕೃಷ್ಣನ್ ಅವರು ಮೊದಲ ಬಾರಿಗೆ ಸೆಮಿ ಫೈನಲ್​ಗೆ ಲಗ್ಗೆ ಇಡುವ ಮೂಲಕ ಇತಿಹಾಸ ನಿರ್ಮಿಸಿದ್ದರು.

1961-62: ಟೆಸ್ಟ್ ಕ್ರಿಕೆಟ್​​ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಮೊದಲ ಜಯ

ಇಂಗ್ಲೆಂಡ್ ವಿರುದ್ಧ ಭಾರತ ಅನೇಕ ಪಂದ್ಯಗಳನ್ನಾಡಿದ್ದರು ಸರಣಿ ಜಯ ಭಾರತ ದಕ್ಕಿರಲಿಲ್ಲ. ಆದರೆ 1961 ಡಿಸೆಂಬರ್ ಹಾಗೂ 1962 ಜನವರಿಯಲ್ಲಿ ಆಂಗ್ಲರು ಭಾರತಕ್ಕೆ 5 ಟೆಸ್ಟ್ ಪಂದ್ಯಗಳ ಸರಣಿ ಆಡಲು ಕಾಲಿಟ್ಟಿದ್ದರು. ಇದರಲ್ಲಿ ಮೊದಲ ಮೂರು ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡರೆ, ಉಳಿದ 2 ಟೆಸ್ಟ್​ ಪಂದ್ಯದಲ್ಲಿ ಭಾರತೀರು ಗೆದ್ದು ಸ್ವಾತಂತ್ರ್ಯದ ನಂತರ ಇಂಗ್ಲೆಂಡ್ ವಿರುದ್ಧ ಮೊದಲ ಸರಣಿ ಜಯ ಸಾಧಿಸಿದರು.

1967: ಟೆಸ್ಟ್​ ಕ್ರಿಕೆಟ್​​ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ವಿದೇಶದಲ್ಲಿ ಜಯ

(Getty Images)


ಈ ಹೊತ್ತಿಗೆ ಭಾರತ ಕ್ರಿಕೆಟ್ ತಂಡ ಬಲಿಷ್ಠ ತಂಡವಾಗಿ ರೂಪಿಗೊಂಡಿತ್ತು. ಇದೇ ಹುಮ್ಮಸ್ಸಿನಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸ ಬೆಳೆಸಿತ್ತು. ಇಲ್ಲಿ ಭಾರತ ತಂಡ ನ್ಯೂಜಿಲೆಂಡ್​ ಅನ್ನು 3-1 ಅಂತರದಿಂದ ಗೆದ್ದು 1967ರಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಗೆಲುವು ಸಾಧಿಸಿದ ಇತಿಹಾಸ ಬರೆಯಿತು.

1975: ವಿಶ್ವಕಪ್​​ನಲ್ಲಿ ಭಾರತ ಹಾಕಿ ತಂಡಕ್ಕೆ ಜಯ

1975ರಲ್ಲಿ ಹಾಕಿ ವಿಶ್ವಕಪ್ ಅನ್ನು ಕೌಲಾ ಲಂಪುರದಲ್ಲಿ ಆಯೋಜಿಸಲಾಗಿತ್ತು. ಅಜಿತ್ ಪಾಲ್ ಸಿಂಗ್ ಅವರ ನಾಯಕತ್ವದಲ್ಲಿ ಭಾರತ ಹಾಕಿ ತಂಡ ಸೆಮಿ-ಫೈನಲ್​​ನಲ್ಲಿ ಮಲೇಷ್ಯಾವನ್ನು 3-2 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಫೈನಲ್ ಕಾದಾಟದಲ್ಲಿ ಬದ್ಧವೈರಿ ಪಾಕಿಸ್ತಾನದ ವಿರುದ್ಧ 2-1 ಅಂತರದ ಜಯ ಸಾಧಿಸಿ ಚಿನ್ನದ ಪದಕ ತನ್ನದಾಗಿಸಿ ಭಾರತ ದಾಖಲೆ ಬರೆಯಿತು.

1980: ಇಂಗ್ಲೆಂಡ್​ನಲ್ಲಿ ಗೆದ್ದು ಬೀಗಿದ ಪ್ರಕಾಶ್ ಪಡಕೋಣೆ

ಇಂಗ್ಲೆಂಡ್​​ನ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ದೇಶದ ಅತ್ಯುತ್ತಮ ಆಟಗಾರರು ಭಾಗವಹಿಸುತ್ತಿದ್ದರು. ಇದರಲ್ಲಿ ಭಾರತದ ಪ್ರಕಾಶ್ ಪಡುಕೋಣೆಯೂ ಒಬ್ಬರು. ಗಟಾನುಗಟಿ ಆಟಗಾರರನ್ನು ಸೋಲಿಸಿ ಇಂಗ್ಲೆಂಡ್​​​ನಲ್ಲಿ ಭಾರತದ ಪ್ರಕಾಶ್ ಅವರು ಜಯ ಸಾಧಿಸಿ ಇತಿಹಾಸ ನಿರ್ಮಿಸಿದರು. ಅಲ್ಲದೆ ಮುಂದಿನ ವರ್ಷ ನಡೆದ ವಿಶ್ವಕಪ್​ನಲ್ಲೂ ಪಡುಕೋಣೆ ಅವರು ಗೆದ್ದು ಭಾರತ ದೇಶಕ್ಕೆ ಚಿನ್ನದ ಪದಕನ್ನು ತಂದುಕೊಟ್ಟಿದ್ದರು.

1983: ಭಾರತ ಕ್ರಿಕೆಟ್ ತಂಡ ಮೊದಲ ಬಾರಿ ವಿಶ್ವಕಪ್ ಎತ್ತಿ ಹಿಡಿದ ವರ್ಷ:

(Getty Images)


1983, ಜೂನ್ 25ರಂದು ಭಾರತೀಯ ಕ್ರಿಕೆಟ್​ಗೆ ಹೊಸ ಭಾಷ್ಯ ಬರೆದ ದಿನ. ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಬಲಿಷ್ಠ ವೆಸ್ಟ್​​ ಇಂಡೀಸ್ ತಂಡವನ್ನು ವಿಶ್ವಕಪ್​​ನಲ್ಲಿ ಸೋಲಿಸಿತು. ಆಗಿನ 60 ಓವರ್​ ಪಂದ್ಯದಲ್ಲಿ ಭಾರತ ಕೇವಲ 183 ರನ್​ಗೆ ಸರ್ವಪತನ ಕಂಡಿತ್ತು. 184 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ವಿಡೀಸ್ 52 ಓವರ್​​ನಲ್ಲಿ 140 ರನ್​ಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಎತ್ತಿ ಹಿಡಿದು ಇತಿಹಾಸ ಬರೆದಿತ್ತು.

1986: ಇತಿಹಾಸ ಸೃಷ್ಟಿಸಿದ ಪಿಟಿ ಉಷಾ:

(Getty Images)


ಪಿಟಿ ಉಷಾ ಅವರು ಒಳ್ಳೆಯ ಓಟಗಾರ್ತಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇವರು 1986 ಏಷ್ಯಾನ್​ ಗೇಮ್ಸ್​ನಲ್ಲಿಯೇ ತನ್ನ ಚತುರತೆಯ ಪ್ರದರ್ಶಿಸುವ ಮೂಲಕ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದರು. ಇವರು 100 ಮೀಟರ್ಸ್​ ಸೇರದಿಂತೆ 200, 400, 4x400 ಮೀಟರ್​ ರಿಲೆಯಲ್ಲಿ ಯಲ್ಲೋ ಮೆಟಲ್​ ಗೆದ್ದಿದರು ಎಂಬುದು ಇತಿಹಾಸವಾಗಿದೆ.

1987: ಭಾರತ ದೇಶದಿಂದ ಮೊದಲ ಬಾರಿ ವಿಶ್ವಕಪ್ ಕ್ರಿಕೆಟ್ ಆಯೋಜನೆ:

(Getty Images)


ವಿಶ್ವಕಪ್ ಗೆದ್ದ ನಂತರ ಭಾರತ ಕ್ರಿಕೆಟ್ ತಂಡ ಸಾಕಷ್ಟು ಬಲಶಾಲಿಯಾಯಿತು. ಬಿಸಿಸಿಐ ಕೂಡ ಇದರಲ್ಲಿ ಪ್ರಮುಖ ಪಾತ್ರವಹಿಸಿತ್ತು. ಆ ವರೆಗೆ ಕ್ರಿಕೆಟ್ ವಿಶ್ವಕಪ್ ಕೇವಲ ಇಂಗ್ಲೆಂಡ್​ನಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ 1987ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್​ನಿಂದ ವಿಶ್ವಕಪ್​ ಭಾರತ ಹಾಗೂ ಪಾಕಿಸ್ತಾನ ದೇಶಗಳ ಆತಿಥ್ಯದಲ್ಲಿ ನಡೆಯಿತು. ಈ ವಿಶ್ವಕಪ್​​ನಲ್ಲಿ ಭಾರತ ತಂಡ ಸೆಮಿ-ಫೈನಲ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು.

1988: ಮೊದಲ ಬಾರಿ ಚೆಸ್​ನಲ್ಲಿ ಗೆದ್ದ ಭಾರತದ ವಿಶ್ವನಾಥನ್ ಆನಂದ್​

18 ವರ್ಷ ಪ್ರಾಯದ ವಿಶ್ವನಾಥ್ ಆನಂದ್ ಅವರು ಮೊದಲ ಬಾರಿ ಭಾರತದ ಪರ ಚೆಸ್ ಆಡಿ ಜಯ ಸಾಧಿಸಿದ ಆಟಗಾರರಾಗಿದ್ದಾರೆ.

1990: ಭಾರತ ದೇಶ ಕಬಡ್ಡಿ ಪರಿಚಯಿಸಿದ ವರ್ಷ

1990ರಲ್ಲಿ ಬೀಜಿಂಗ್ ಏಷ್ಯಾ ಗೇಮ್ಸ್​​ನಲ್ಲಿ ಮೊಟ್ಟ ಮೊದಲ ಬಾರಿಗೆ ಕಬಡ್ಡಿ ಆಟವನ್ನು ಪರಿಚಯಿಸಲಾಯಿತು. ಇದರಲ್ಲಿ ಭಾರತ ಚಿನ್ನದ ಪದಕ ಕೂಡ ಗೆದ್ದಿತ್ತು.

1999: ಇಂಗ್ಲೆಂಡ್​ ಫುಟ್ಬಾಲ್ ಕ್ಲಬ್​​​ನಲ್ಲಿ ಭಾರತೀಯ:

(Getty Images)


199ರಲ್ಲಿ ಭಾರತದ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಅವರು ಇಂಗ್ಲೆಂಡ್ ಹೆಸರಾಂತ ಬ್ಯೂರಿ ಫುಟ್ಬಾಲ್ ಕ್ಲಬ್​​ನಲ್ಲಿ ಆಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...