Sachin Tendulkar: ಬಾಲ್ಯದ ದಿನಗಳನ್ನು ನೆನೆದು ಭಾವುಕರಾದ ಸಚಿನ್, 35 ವರ್ಷಗಳ ನಂತರ ಆ ಸ್ಥಳಕ್ಕೆ ಭೇಟಿ ನೀಡಿದ ತೆಂಡೂಲ್ಕರ್​

ಲಿಟ್ಲ್‌ ಮಾಸ್ಟರ್‌ ಸಚಿನ್ ತೆಂಡೂಲ್ಕರ್​ ಅವರು ಇನ್ಸ್ಟಾಗ್ರಾಂ ನಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಹೌದು, ಸಚಿನ್​ ಅವರು ತಮ್ಮ 15ನೇ ವಯಸ್ಸಿನಲ್ಲಿ ಪುಣೆಯ ಪಿವೈಸಿ ಜಿಮ್ಖಾನಾ ಕ್ಲಬ್ ನಲ್ಲಿ ಕ್ರಿಕೆಟ್​ ಆಟವಾಡುತ್ತಿದ್ದ ವೇಳೆಯ ದಿನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

  • Share this:
ಕ್ರಿಕೆಟ್ (Cricket) ಆಟದ ಮಾಸ್ಟರ್ ಬ್ಲಾಸ್ಟರ್ ಅಂತಾನೆ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಕ್ರಿಕೆಟ್ ನಿಂದ ನಿವೃತ್ತಿ ಪಡೆದರೂ ಸಹ ಅವರ ಖ್ಯಾತಿ ಈವರೆಗೂ ಕಡಿಮೆ ಆಗಿಲ್ಲ.  ಸಚಿನ್ ಅವರು ತಮ್ಮ 16ನೇ ವಯಸ್ಸಿನಲ್ಲಿ ಟೀಂ ಇಂಡಿಯಾಗೆ (Team India) ಪಾದಾರ್ಪಣೆ ಮಾಡಿದ್ದರು. ಬರೋಬ್ಬರಿ 24 ವರ್ಷಗಳ ಕಾಲ ಕ್ರಿಕೆಟ್​ ಮೈದಾನದಲ್ಲಿ ಭಾರತ ದೇಶಕ್ಕಾಗಿ ಅದಷ್ಟೋ ಅವಿಸ್ಮರಣೀಯ ಪಂದ್ಯಗಳನ್ನು ಆಡುವ ಮೂಲಕ ಇಂದಿಗೂ ಕ್ರಿಕೆಟ್​ (Cricket) ಲೋಕದಲ್ಲಿ ಕ್ರಿಕೆಟ್​ ದೇವರು ಎಂದೇ ಖ್ಯಾತಿ ಪಡೆದಿದ್ದಾರೆ.  ಅಲ್ಲದೇ ನಿವೃತ್ತಿಯ ನಂತರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು  ಸಕ್ರಿಯರಾಗಿದ್ದಾರೆ. ಇದರ ನಡುವೆ ಅವರು ಇದೀಗ ಇನ್ಸ್ಟಾಗ್ರಾಂ ನಲ್ಲಿ (Instagram) ಅವರು ಹಂಚಿಕೊಂಡಿರುವ ವಿಡಯೋ ಒಂದು ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

ಬಾಲ್ಯದ ದಿನಗಳನ್ನು ನೆನೆದ ಸಚಿನ್:

ಲಿಟ್ಲ್‌ ಮಾಸ್ಟರ್‌ ಸಚಿನ್ ತೆಂಡೂಲ್ಕರ್​ ಅವರು ಇನ್ಸ್ಟಾಗ್ರಾಂ ನಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಹೌದು, ಸಚಿನ್​ ಅವರು ತಮ್ಮ 15ನೇ ವಯಸ್ಸಿನಲ್ಲಿ ಪುಣೆಯ ಪಿವೈಸಿ ಜಿಮ್ಖಾನಾ ಕ್ಲಬ್ ನಲ್ಲಿ ಕ್ರಿಕೆಟ್​ ಆಟವಾಡುತ್ತಿದ್ದರು. ಇಲ್ಲಿ ಮುಂಬೈ ಪರ ಅವರು ಬ್ಯಾಟಿಂಗ್​ ಮಾಡುತ್ತಿದ್ದರು. ಈ ವೇಳೆಯ ಒಂದು ಘಟನೆಯನ್ನು ನೆನೆದು ಅವರು ಭಾವುಕರಾಗಿದ್ದರು. 1986ರಲ್ಲಿ ನಡೆದ ಪಂದ್ಯವೊಂದರಲ್ಲಿ ಅವರು ಜೊತೆಗಾರನಿಂದಾಗಿ ಕೇವಲ 4 ರನ್​ಗೆ  ರನ್​ಔಟ್​ ಆಗಿದ್ದರು. ಹೀಗಾಗಿ ಅವರು ಪೆವಿಲಿಯನ್ ನಲ್ಲಿ ಬೇಸರದಲ್ಲಿ ಅಳುತ್ತಾ ಕುಳಿತಿದ್ದರಂತೆ. ಇದನ್ನು ಅವರು ಹೇಳಿಕೊಂಡಿದ್ದು, ತಮ್ಮ ಬಾಲ್ಯದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಯೋವನ್ನು ಅವರು ಸ್ವತಃ ಅವರೇ ಪುಣೆಯ ಪಿವೈಸಿ ಜಿಮ್ಖಾನಾ ಕ್ಲಬ್ ಮೈದಾನದಲ್ಲಿ ಹೋಗಿ ಮಾಡಿದ್ದಾರೆ.


35 ವರ್ಷಗಳ ನಂತರ ಜಿಮ್ಖಾನಾ ಕ್ಲಬ್​ಗೆ ಆಗಮಿಸಿದ್ದ ತೆಂಡೂಲ್ಕರ್:

ಸಚಿನ್ ಹಂಚಿಕೊಂಡಿರುವ ವಿಡಿಯೋದಲ್ಲಿ ತಮ್ಮ ಅಂದಿನ ದಿನಗಳ ಬಗ್ಗೆ ಹೇಳಿಕೊಂಡಿದ್ದು, ‘1986ರ ವೇಳೆ ನನ್ನ 15 ವರ್ಷದೊಳಗಿನವರ ವಿಭಾಗದ ಮೊದಲ ಪಂದ್ಯವನ್ನು ಪಿವೈಸಿ ಕ್ಲಬ್‌ ಆಡಿದೆ, ಆ ಪಂದ್ಯದಲ್ಲಿ ನನ್ನ ಸ್ನೇಹಿತ ರಾಹುಲ್ ಗನ್‌ಪುಲೆ ಜೊತೆ ನಾನು ಮೊದಲು ಬ್ಯಾಟಿಂಗ್​ಗೆ ಆಗಮಿಸಿದೆ. ಅವರು ನನಗಿಂತ ಸುಮಾರು 2 ವರ್ಷ ದೊಡ್ಡವರು. ಪಂದ್ಯದ ಆರಂಭವಾದ ವೇಳೆ ಅವರು ಒಂದು ಎಸೆತವನ್ನು​ ಅನ್ನು ಆಫ್ ಡ್ರೈವ್ ಶಾಟ್ ಹೊಡೆದರು. ಆ ಹೊಡೆತಕ್ಕೆ ಅವರು ನನ್ನ ಬಳಿ 3 ರನ್ ಪಡೆಯುವಂತೆ ಹೇಳಿದರು. ಅಲ್ಲದೇ ಅವರು ನನಗಿಂತ ವೇಗವಾಗಿ ಓಡುತ್ತಿದ್ದರು. ಆದರೆ ನನಗೆ ಅವರಷ್ಟು ವೇಗವಾಗಿ ಓಡಲು ಸಾಧ್ಯವಾಗಲಿಲ್ಲ. ಹೀಗಾಗಿ ರನ್​ ಔಟ್​ ಆದೆ‘ ಎಂದು ಹೇಳಿದರು.

ಇದನ್ನೂ ಓದಿ: KL Rahul: ರಾಷ್ಟ್ರಗೀತೆಗೆ ಗೌರವ ಕೊಟ್ಟ ಕನ್ನಡಿಗ ಕೆಎಲ್​ ರಾಹುಲ್​, ಇದಕ್ಕೆ ಇವ್ರು ಸಖತ್ ಇಷ್ಟ ಆಗೋದು

ಇದಲ್ಲದೇ ನಾನು ಬೇಗ ರನ್​ ಔಟ್​ ಆದ ಕಾರಣ ತುಂಬಾ ಬೇಸರಗೊಂಡಿದ್ದೆ. ಹೀಗಾಗಿ ಪೆವಿಲಿಯನ್‌ ನಲ್ಲಿ ಅಳುತ್ತಾ ಕುಳಿತಿದ್ದೆ. ಆದರೆ ಮುಂಬೈ ತಂಡದ ಮ್ಯಾನೇಜರ್ ಅಬ್ದುಲ್ ಇಸ್ಮಾಯಿಲ್ ನನ್ನನ್ನು ಸಮಾಧಾನ ಪಡಿಸಿದರು. ಅಲ್ಲದೇ ಭವಿಷ್ಯದಲ್ಲಿ ನೀನು ಅನೇಕ ಪಂದ್ಯಗಳಲ್ಲಿ ಸಾಕಷ್ಟು ರನ್​ ಗಳನ್ನು ಗಳಿಸುವೆ ಎಂದು ಹೇಳಿ ಸಮಾಧಾನ ಪಡಿಸಿದರು. ಈ ಘಟನೆಯಾದ 35 ವರ್ಷಗಳ ನಂತರ ನಾನಿಲ್ಲಿಗೆ ಬಂದಿರುವುದರಿಂದ ಸ್ವಲ್ಪ ಭಾವುಕನಾಗಿದ್ದೇನೆ ಎಂದು ಹೇಳಿದರು.
Published by:shrikrishna bhat
First published: