ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ (GG vs DC) ನಾಯಕಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 105 ರನ್ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ 7.1 ಓವರ್ಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ 107 ರನ್ಗಳಿಸುವ ಮೂಲಕ ಭರ್ಜರಿ ಜಯ ದಾಖಲಿಸಿತು. ಡೆಲ್ಲಿ ಪರ ಶೆಫಾಲಿ ವರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಅಬ್ಬರಿಸಿದ ಶಫಾಲಿ ವರ್ಮಾ:
ಡೆಲ್ಲಿ ಕ್ಯಾಪಿಟಲ್ಸ್ ಪರ ಶಫಾಲಿ ವರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದರು. ಅವರು 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ದಾಖಲೆ ನಿರ್ಮಿಸಿದರು. ಅಲ್ಲದೆ 28 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 10 ಫೋರ್ನೊಂದಿಗೆ ಅಜೇಯ 78 ರನ್ ಬಾರಿಸಿದರು. ಇದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ 7.1 ಓವರ್ಗಳಲ್ಲಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಅಲ್ಲದೇ ನಾಯಕಿ ಮೆಗ್ ಲ್ಯಾನಿಂಗ್ 15 ಎಸೆತದಲ್ಲಿ 3 ಬೌಂಡರಿ ಮೂಲಕ 21 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖರಾದರು.
The @DelhiCapitals are back to winning ways and how 🙌🙌
A comprehensive 🔟-wicket win for #DC over the Gujarat Giants 👌🏻👌🏻
Scorecard 👉 https://t.co/ea9cEEkMGR#TATAWPL | #GGvDC pic.twitter.com/HGF6c8yQpW
— Women's Premier League (WPL) (@wplt20) March 11, 2023
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಡೆಲ್ಲಿ ವಿರುದ್ಧ ಬ್ಯಾಟಿಂಗ್ನಲ್ಲಿ ವಿಫಲವಾಯಿತು. ಗುಜರಾತ್ ಪರ, ಸಬ್ಬಿನೇನಿ ಮೇಘನಾ ಶೂನ್ಯ, ಲಾರಾ ವೊಲ್ವಾರ್ಡ್ 1 ರನ್, ಹರ್ಲೀನ್ ಡಿಯೋಲ್ 20 ರನ್, ಆಶ್ಲೀಗ್ ಗಾರ್ಡ್ನರ್ ಶೂನ್ಯ, ಜಾರ್ಜಿಯಾ ವೇರ್ಹ್ಯಾಮ್ 22 ರನ್, ಸುಷ್ಮಾ ವರ್ಮಾ 2 ರನ್, ದಯಾಲನ್ ಹೇಮಲತಾ 5 ರನ್, ಸ್ನೇಹ್ ರಾಣಾ 2 ರನ್, ಕಿಮ್ ಗಾರ್ತ್ 32 ರನ್, ಮಾನ್ಸಿ ಜೋಶಿ 5 ರನ್ ಮತ್ತು ತನುಜಾ ಕನ್ವರ್ 13 ರನ್ ಗಳಿಸಿದ್ದರು.
ಇದನ್ನೂ ಓದಿ: IPL 2023: ಹೈದರಾಬಾದ್ ತಂಡದ ನಾಯಕತ್ವದಿಂದ ಮಾರ್ಕಮ್ ಔಟ್! ಈಗಲಾದ್ರೂ ಕನ್ನಡಿಗನಿಗೆ ಸಿಗುತ್ತಾ ಚಾನ್ಸ್?
ಡೆಲ್ಲಿ ಭರ್ಜರಿ ಬೌಲಿಂಗ್:
ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಡೆಲ್ಲಿ ಉತ್ತಮ ದಾಳಿ ನಡೆಸಿತು. ಡೆಲ್ಲಿ ಪರ ಮರಿಝನ್ನೆ ಕಪ್ 4 ಓವರ್ ಬೌಲ್ ಮಾಡಿ 15 ರನ್ ನೀಡಿ 5 ವಿಕೆಟ್ ಪಡೆದು ಗುಜರಾತ್ ಕುಸಿತಕ್ಕೆ ಕಾರಣರಾದರು. ಉಳಿದಂತೆ ಶೀಖಾ ಪಾಂಡೆ 3 ವಿಕೆಟ್ ಮತ್ತು ರಾಧಾ ಯಾದವ್ 1 ವಿಕೆಟ್ ಪಡೆದು ಮಿಂಚಿದರು.
ಗುಜರಾತ್ - ಡೆಲ್ಲಿ ಪ್ಲೇಯಿಂಗ್ 11:
ಗುಜರಾತ್ ಜೈಂಟ್ಸ್ ಪ್ಲೇಯಿಂಗ್ 11: ಸಬ್ಬಿನೇನಿ ಮೇಘನಾ, ಲಾರಾ ವೊಲ್ವಾರ್ಡ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ದಯಾಲನ್ ಹೇಮಲತಾ, ಸ್ನೇಹ್ ರಾಣಾ(ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಲಾರಾ ಹ್ಯಾರಿಸ್, ಮರಿಝನ್ನೆ ಕಪ್, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ನಾಯಕಿ), ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ