ಏಕದಿನ ಕ್ರಿಕೆಟ್​ನಲ್ಲಿ ಹೊಸ ದಾಖಲೆ: ಒಂದೇ ಪಂದ್ಯದಲ್ಲಿ 807 ರನ್, 46 ಸಿಕ್ಸರ್​​; ಗೇಲ್ ನಿವೃತ್ತಿ ಮುಂದಕ್ಕೆ?

ಕೇವಲ 97 ಎಸೆತಗಳಲ್ಲಿ 11 ಬೌಂಡರಿ ಹಾಗೂ 14 ಸಿಕ್ಸ್​ ಸಿಡಿಸಿ 162 ರನ್ ಬಾರಿಸಿ ಕ್ರಿಸ್ ಗೇಲ್ ಔಟ್ ಆದರು. ಈ ಮೂಲಕ ಗೇಲ್ ಅಮೋಘ ಆಟ ಅಂತ್ಯವಾಗುತ್ತಿದ್ದಂತೆ ಗೆಲುವು ಇಂಗ್ಲೆಂಡ್​ನತ್ತ ವಾಲಿತು.

ಕ್ರಿಸ್ ಗೇಲ್

ಕ್ರಿಸ್ ಗೇಲ್

  • News18
  • Last Updated :
  • Share this:
ವೆಸ್ಟ್​ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ರನ್​ ಮಳೆಯೇ ಸುರಿಯಿತು. ಅಲ್ಲದೆ ಅನೇಕ ದಾಖಲೆಗಳೂ ದಾಖಲಾಯಿತು. ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್​ಗೆ ಬರೋಬ್ಬರಿ 418 ರನ್ ಚಚ್ಚಿತು.

ಆಂಗ್ಲ ಪರ ಆರಂಭಿಕರಾದ ಜಾನಿ ಬೈರ್​​ಸ್ಟೋ(56) ಹಾಗೂ ಅಲೆಕ್ಸ್​ ಹೇಲ್ಸ್​(82) ಮೊದಲ ವಿಕೆಟ್​​ಗೆ ಶತಕದ ಕಾಣಿಕೆ ನೀಡಿದರು. ಬಳಿಕ 4ನೇ ವಿಕೆಟ್​ಗೆ ಒಂದಾದ ನಾಯಕ ಇಯಾನ್ ಮಾರ್ಗನ್ ಹಾಗೂ ಜಾಸ್ ಬಟ್ಲರ್ ಸ್ಪೋಟಕ ಆಟ ಆಡಿದರು. ಟಿ-20 ಮಾದರಿಯಲ್ಲಿ ಬ್ಯಾಟ್ ಬೀಸಿದ ಈ ಜೋಡಿ 204 ರನ್​​ಗಳ ಜೊತೆಯಾಟ ಆಡಿದರು. ಮಾರ್ಗನ್ ಕೇವಲ 88 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸ್​ನೊಂದಿಗೆ 103 ರನ್ ಬಾರಿಸಿದರೆ, ಬಟ್ಲರ್ 77 ಎಸೆತಗಳಲ್ಲಿ 13 ಬೌಂಡರಿ ಹಾಗೂ 12 ಸಿಕ್ಸ್​ನೊಂದಿಗೆ 150 ರನ್ ಚಚ್ಚಿದರು. ಪರಿಣಾಮ 50 ಓವರ್​ಗೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 418 ರನ್ ಪೇರಿಸಿತು.

ಇತ್ತ 419 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ತಂಡ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು ಕ್ರಿಸ್ ಗೇಲ್ ಹಾಗೂ ಡ್ಯಾರೆನ್ ಬ್ರಾವೋ ತಂಡಕ್ಕೆ ಆಸರೆಯಾಗಿ ನಿಂತರು. ಬ್ರಾವೋ(61) ಒಂದಿಷ್ಟು ರನ್ ಕಲೆಹಾಕಿ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​​ಗಳು ಬೇಗನೆ ಔಟ್ ಆದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ, ಇತ್ತ ಗೇಲ್ ಆರ್ಭಟ ಮಾತ್ರ ಜೋರಾಗೆಯಿತ್ತು. ತಂಡದ ಮೊತ್ತವನ್ನು 300ರ ಅಂಚಿಗೆ ತಂದಿಟ್ಟು ಗೇಲ್ ನಿರ್ಗಮಿಸಿದರು.

ಇದನ್ನೂ ಓದಿ: India vs Australia: ಮ್ಯಾಕ್ಸ್​ವೆಲ್ ಶತಕಕ್ಕೆ ಭಾರತ ಕಂಗಾಲು; ಟಿ-20 ಸರಣಿ ಕಾಂಗರೂ ಪಾಲು

ಕೇವಲ 97 ಎಸೆತಗಳಲ್ಲಿ 11 ಬೌಂಡರಿ ಹಾಗೂ 14 ಸಿಕ್ಸ್​ ಸಿಡಿಸಿ 162 ರನ್ ಬಾರಿಸಿ ಕ್ರಿಸ್ ಗೇಲ್ ಔಟ್ ಆದರು. ಈ ಮೂಲಕ ಗೇಲ್ ಅಮೋಘ ಆಟ ಅಂತ್ಯವಾಗುತ್ತಿದ್ದಂತೆ ಗೆಲುವು ಇಂಗ್ಲೆಂಡ್​ನತ್ತ ವಾಲಿತು. ಗೇಲ್ ನಿರ್ಗಮನದ ಬಳಿಕ ಬಂದ ಕಾರ್ಸನ್ ಬ್ರಾಥ್​​​ವೈಟ್ 50 ಹಾಗೂ ಆಶ್ಲೇ ನರ್ಸ್​ 43 ರನ್ ಗಳಿಸಿದರಾದರು ಯಾವುದೇ ಪ್ರಯೋಜನವಾಗಿಲ್ಲ. 48 ಓವರ್​ಗೆ ವೆಸ್ಟ್​ ಇಂಡೀಸ್ 389 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಆದಿಲ್ ರಶೀದ್ 5 ವಿಕೆಟ್ ಕಿತ್ತರೆ ಮಾರ್ಕ್ ವುಡ್ 4 ವಿಕೆಟ್ ಕಿತ್ತರು. ಈ ಮೂಲಕ ಇಂಗ್ಲೆಂಡ್ 29 ರನ್​​ಗಳಿಂದ ಗೆದ್ದು ಬೀಗಿದ್ದು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ದಾಖಲಾದ ದಾಖಲೆಗಳು:

ಈ ಪಂದ್ಯದಲ್ಲಿ ಒಟ್ಟು 46 ಸಿಕ್ಸ್​​ಗಳು ಸಿಡಿದಿದ್ದು, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸ್​ ಇದಾಗಿದೆ. ಇನ್ನು ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ 24 ಸಿಕ್ಸ್​ ಬಾರಿಸಿ ಏಕದಿನ ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್​ಗಳನ್ನು ಬಾರಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಡೀ ಪಂದ್ಯದಲ್ಲಿ ಒಟ್ಟು 807 ರನ್​ಗಳು ದಾಖಲಾದವು. ಏಕದಿನ ಕ್ರಿಕೆಟ್​​​ನಲ್ಲಿ ಇದು ಮೂರನೇ ಹೈ ಸ್ಕೋರಿಂಗ್ ಪಂದ್ಯವಾಗಿದೆ.

ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ಗೇಲ್, ಏಕದಿನ ಕ್ರಿಕೆಟ್​ನಲ್ಲಿ ನಾನು ಸಾಕಷ್ಟು ಶ್ರಮ ವಹಿಸುತ್ತಿದ್ದೇನೆ. ಫಿಟ್ನೆಸ್ ಕಾಪಾಡಿಕೊಳ್ಳುವತ್ತ ಗಮನ ಹರಿಸತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ ಮುಂದಿನ ಕೆಲವೇ ತಿಂಗಳುಗಳಲ್ಲಿ ನನ್ನ ದೇಹ ಬದಲಾಗುವ ಅಂದಾಜಿದೆ ಎಂದು ಹೇಳಿದ್ದು, ನಿವೃತ್ತಿಯನ್ನು ಮುಂದಕ್ಕೆ ಹಾಕುವ ಮುನ್ಸೂಚನೆ ನೀಡಿದ್ದಾರೆ.

First published: