• Home
  • »
  • News
  • »
  • sports
  • »
  • T20 World Cup: ವಿಶ್ವಕಪ್​ನಲ್ಲಿ ಪಾಕಿಸ್ತಾನದ ಆಟಗಾರರು ಹೀಗ್ ಆಡೋದಕ್ಕೆ ಬಾಬರ್​ ಅವರೇ ಕಾರಣವಂತೆ!

T20 World Cup: ವಿಶ್ವಕಪ್​ನಲ್ಲಿ ಪಾಕಿಸ್ತಾನದ ಆಟಗಾರರು ಹೀಗ್ ಆಡೋದಕ್ಕೆ ಬಾಬರ್​ ಅವರೇ ಕಾರಣವಂತೆ!

ಬಾಬರ್ ಅಜಮ್​

ಬಾಬರ್ ಅಜಮ್​

ಪಾಕಿಸ್ತಾನ ತಂಡವು ಕನಿಷ್ಠ ಸೆಮಿಫೈನಲ್ (Semifinal) ಗೆ ಆದರೂ ಬರುತ್ತೆ ಅಂತ ಅಂದುಕೊಂಡಿದ್ದ ಅನೇಕ ಜನರ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದಾರೆ ಅಂತ ಹೇಳಬಹುದು. 

  • Share this:

ಈ ಎರಡು ಸೋಲುಗಳನ್ನು ಅನುಭವಿಸಿದ ನಂತರ ಪಾಕಿಸ್ತಾನ ತಂಡ ( Pakistan Cricket Team) ವು ಟೂರ್ನಿಯಲ್ಲಿ ಎಲಿಮಿನೇಷನ್ (Elimination) ಅಂಚಿಗೆ ಬಂದು ನಿಂತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಪಾಕಿಸ್ತಾನ ತಂಡವು ಕನಿಷ್ಠ ಸೆಮಿಫೈನಲ್ (Semifinal) ಗೆ ಆದರೂ ಬರುತ್ತೆ ಅಂತ ಅಂದುಕೊಂಡಿದ್ದ ಅನೇಕ ಜನರ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದಾರೆ ಅಂತ ಹೇಳಬಹುದು. ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Babar Azam)  ಮತ್ತು ಟೀಮ್ ಮ್ಯಾನೇಜ್ಮೆಂಟ್ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಕೂಡ ಬಾಬರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ ನೋಡಿ. ವಿಶ್ವಕಪ್ ನಲ್ಲಿ ಪಾಕಿಸ್ತಾನದ ಈ ಕಳಪೆ ಪ್ರದರ್ಶನಕ್ಕೆ ಮುಖ್ಯವಾದ ಕಾರಣ ಅವರ ಕಳಪೆ ತಂಡದ ಆಯ್ಕೆ ಎಂದು ಗವಾಸ್ಕರ್ ಅವರು ಆರೋಪಿಸಿದ್ದಾರೆ.


ಬಾಬರ್ ಬಗ್ಗೆ ಗವಾಸ್ಕರ್​ ಹೀಗೆ ಹೇಳಿದ್ದು ಯಾಕೆ?


ಗುರುವಾರ ಪರ್ತ್ ನಲ್ಲಿ ಜಿಂಬಾಬ್ವೆ ವಿರುದ್ಧ ಆಘಾತಕಾರಿ ಸೋಲನ್ನು ಅನುಭವಿಸಿದ ಬಾಬರ್ ಪಡೆ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು.


ಪಾಕಿಸ್ತಾನ ತಂಡದ ಆಡಳಿತ ಮಂಡಳಿಗೆ ಗವಾಸ್ಕರ್​ ತರಾಟೆ!


ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 24 ರನ್ ಗಳಿಗೆ 4 ವಿಕೆಟ್ ಕಬಳಿಸಿ 13 ಎಸೆತಗಳಲ್ಲಿ 2 ಬೌಂಡರಿಗಳನ್ನು ಬಾರಿಸಿದ್ದ ಪಾಕಿಸ್ತಾನದ ಮೊಹಮ್ಮದ್ ವಾಸಿಂ ಜೂನಿಯರ್ ಅವರನ್ನು ಭಾರತದ ವಿರುದ್ಧದ ಪಂದ್ಯದಲ್ಲಿ ಬಳಸಿಕೊಳ್ಳಲಿಲ್ಲ ಎಂದು ಗವಾಸ್ಕರ್ ಟೀಕಿಸಿದ್ದಾರೆ.


ವಾಸಿಮ್ ಅವರನ್ನು "ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರ" ಎಂದು ಶ್ಲಾಘಿಸಿದ ಅವರು, ಭಾರತದ ವಿರುದ್ಧದ ಪಂದ್ಯದಲ್ಲಿ ಇಲೆವೆನ್ ನಲ್ಲಿ ಆಲ್‌ರೌಂಡರ್ ಅನ್ನು ಆಡಿಸುವ ಬದಲು ಭಾರತದ ವಿರುದ್ಧ ಇಬ್ಬರು ಸ್ಪಿನ್ನರ್ ಗಳನ್ನು ಆಡಿಸಿದ್ದಕ್ಕಾಗಿ ಪಾಕಿಸ್ತಾನ ತಂಡದ ಆಡಳಿತ ಮಂಡಳಿಯನ್ನು ಗವಾಸ್ಕರ್ ಅವರು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು.


ಇದನ್ನೂ ಓದಿ: ವರ್ಲ್ಡ್​​ಕಪ್​ನಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ, ಹೀಗೆ ಮುಂದುವರೆದ್ರೆ ಸೆಮಿಫೈನಲ್​ ಕಥೆ ಗೋತಾ!


"ಅವರು ಹೆಚ್ಚು ಸ್ಥಿರ ಮಧ್ಯಮ ಕ್ರಮಾಂಕವನ್ನು ಹೊಂದಿಲ್ಲ. ಈ ಹಿಂದೆ ಆಡಿದ ಟ್ವೆಂಟಿ20 ಪಂದ್ಯಗಳಲ್ಲಿ ಫಖರ್ ಜಮಾನ್ 3 ಅಥವಾ 4ನೇ ಕ್ರಮಾಂಕದಲ್ಲಿ ಆಡಿದ್ದರು. ಈಗ ಅವರು ತಂಡದ ಭಾಗವಾಗಿದ್ದಾರೆ, ಆದರೆ ಇಲೆವೆನ್ ನಲ್ಲಿಲ್ಲ. ಶಾನ್ ಮಸೂದ್ ಅವರನ್ನು ಆ ಜಾಗದಲ್ಲಿ ಸೇರಿಸಿಕೊಂಡಿದ್ದಾರೆ. ಆದರೇ ಅವರು ಚೆನ್ನಾಗಿಯೇ ರನ್ ಗಳಿಸುತ್ತಿದ್ದಾರೆ.


ಬಾಬರ್​ ನಾಯಕತ್ವ ಸರಿಯಿಲ್ವಾ?


ಆದರೆ ಅಲ್ಲಿ ಆಯ್ಕೆ ಉತ್ತಮವಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಮೊಹಮ್ಮದ್ ವಾಸಿಮ್ ಅವರು ಆಸ್ಟ್ರೇಲಿಯಾದ ಪಿಚ್ ಗಳಲ್ಲಿ ಬೌಲ್ ಅನ್ನು ಚೆನ್ನಾಗಿ ಸೀಮ್ ಮಾಡುತ್ತಾರೆ ಮತ್ತು ಅವರು ಒಂದೆರಡು ಉತ್ತಮ ಹೊಡೆತಗಳನ್ನು ಸಹ ಆಡುತ್ತಾರೆ. ಅವನಲ್ಲಿ ಆ ಪ್ರತಿಭೆ ಇದೆ. ಅವರು ಹೆಚ್ಚು ಕಡಿಮೆ ನಮ್ಮ ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ ಅವರಂತೆಯೇ ಅಂತ ಹೇಳಬಹುದು.


ಇದನ್ನೂ ಓದಿ: ದೊಡ್ಮನೆ ದೊರೆಗೆ ಕ್ರಿಕೆಟಿಗರ ಅಭಿಮಾನದ ಪ್ರೀತಿ, ಗಂಧದಗುಡಿಗೆ ಟೀಂ ಇಂಡಿಯಾ ಆಟಗಾರರ ಶುಭಹಾರೈಕೆ!


ಅವರು ಇನ್ನೂ ಹೊಸಬರು, ಆದರೆ ಅವರಲ್ಲಿ ಆ ಪ್ರತಿಭೆ ಇದೆ. ಆದರೆ ಅವರನ್ನು ಇವರು ಭಾರತದ ವಿರುದ್ಧ ಕಣಕ್ಕಿಳಿಸಲಿಲ್ಲ. ಅವರು ಇಬ್ಬರು ಸ್ಪಿನ್ನರ್ ಗಳನ್ನು ಆಡಿಸಿದರು. ಸಿಡ್ನಿಯಲ್ಲಿ ಅದು ಸರಿ, ಆದರೆ ಇತರ ಸ್ಥಳಗಳಲ್ಲಿ, ನಿಮಗೆ 3-4 ಓವರ್ ಗಳನ್ನು ಚೆನ್ನಾಗಿ ಬೌಲ್ ಮಾಡಬಲ್ಲ ಮತ್ತು ಕೊನೆಯ ಕೆಲವು ಓವರ್ ಗಳಲ್ಲಿ ಬಂದು 30 ರನ್ ಗಳನ್ನು ಗಳಿಸಬಲ್ಲ ಆಟಗಾರನ ಅಗತ್ಯವಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿದರು. ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 30 ರಂದು ನೆದರ್ಲ್ಯಾಂಡ್ ವಿರುದ್ಧ ಆಡಲಿದೆ.

Published by:ವಾಸುದೇವ್ ಎಂ
First published: