'ಯೋ ಯೋ ಟೆಸ್ಟ್'​ ಪಾಸ್ ಮಾಡಿದ ಗೌತಮ್ ಗಂಭೀರ್ ಮಗಳು

news18
Updated:July 24, 2018, 9:00 PM IST
'ಯೋ ಯೋ ಟೆಸ್ಟ್'​ ಪಾಸ್ ಮಾಡಿದ ಗೌತಮ್ ಗಂಭೀರ್ ಮಗಳು
news18
Updated: July 24, 2018, 9:00 PM IST
ನ್ಯೂಸ್ 18 ಕನ್ನಡ

ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಬೇಕಾದರೆ ಆಟಗಾರರು ಯೋ ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬುದು ಕಡ್ಡಾಯ. ಈ ಕುರಿತಂತೆ ಇತ್ತೀಚೆಗೆ ಅನೇಕರಿಂದ ಅಪಸ್ವರ ಕೂಡ ಕೇಳಿಬಂದಿದ್ದವು. ಈ ಮಧ್ಯೆ ಇದಕ್ಕೆ ಸಂಬಂದಿಸಿದಂತೆ ಟೀಂ ಇಂಡಿಯಾದ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ತಮ್ಮ ಮಗಳು ಅಜೀನ್ ಯೋ ಯೋ ಟೆಸ್ಟ್ ಪಾಸ್ ಮಾಡಿದ ವಿಡಿಯೋ ಒಂದನ್ನು ಗಂಭಿರ್ ತಮಾಷೆಗಾಗಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಹೆಸರು ಪ್ರಸ್ತಾಪಿಸಿ ನಿಮ್ಮ ಫಿಟ್ನೆಸ್ ಟೆಸ್ಟ್ ಎಂದು ಪ್ರಶ್ನಿಸಿದ್ದಾರೆ.

 


Loading...ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಯೋ ಯೋ ಟೆಸ್ಟ್​ ಅನ್ನು ಕಡ್ಡಾಯಗೊಳಿಸಿದೆ. ಈ ಹಿಂದೆ ಅಂಬಾಟಿ ರಾಯುಡು, ಸಂಜು ಸ್ಯಾಮ್ಸನ್, ಮೊಹಮ್ಮದ್ ಶಮಿ ಯೋ ಯೋ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ