• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023: ಆರ್​ಸಿಬಿ ಅಭಿಮಾನಿಗಳಿಗೆ ವಾರ್ನ್​ ಮಾಡಿದ ಗೌತಮ್ ಗಂಭೀರ್! ವೈರಲ್ ಆಯ್ತು ಫೋಟೋ

IPL 2023: ಆರ್​ಸಿಬಿ ಅಭಿಮಾನಿಗಳಿಗೆ ವಾರ್ನ್​ ಮಾಡಿದ ಗೌತಮ್ ಗಂಭೀರ್! ವೈರಲ್ ಆಯ್ತು ಫೋಟೋ

ಗೌತಮ್ ಗಂಭೀರ್​

ಗೌತಮ್ ಗಂಭೀರ್​

ಐಪಿಲ್​ನ ಹಿಂದಿನ ಪಂದ್ಯ ಆರ್​ಸಿಬಿ ಮತ್ತು ಎಲ್​ಸಿಜಿ ಮಧ್ಯೆ ನಡೆದಿತ್ತು. ಇದರಲ್ಲಿ ಆರ್​ಸಿಬಿ ಲಕ್ನೋ ವಿರುದ್ಧ ಸೋಲು ಕಂಡಿದೆ. ಈ ಮಧ್ಯೆ ಗೌತಮ್​ ಗಂಭೀರ್​ ಆರ್​​ಸಿಬಿ ಅಭಿಮಾನಿಗಳ ಕಡೆ ತಿರುಗಿ ಸನ್ನೆಯೊಂದನ್ನು ಮಾಡಿದ್ದು, ಸದ್ಯ ಆ ವಿಡಿಯೋ ಭಾರೀ ವೈರಲ್ ಆಗಿದೆ.

  • Share this:

ಪ್ರತಿ ಬಾರಿಯ ಹಾಗೆ ಈ ಬಾರಿಯೂ ಸಹ ತುಂಬಾನೇ ಹುರುಪುನಿಂದ ‘ಈ ಬಾರಿ ಕಪ್ ನಮ್ದೆ’ ಅನ್ನೋ ಭರವಸೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯನ್ನು ಶುರು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯದಲ್ಲಿ ಸೋಲು (Defeat) ಕಂಡಿದೆ. ಈ ಬಾರಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿ 16ನೇ ಆವೃತ್ತಿ ಐಪಿ​ಎ​ಲ್‌ನಲ್ಲಿ ಆರ್‌ಸಿಬಿ ತಂಡವು ಶುಭಾರಂಭ ಮಾಡಿತ್ತು. ಆದರೆ ಈ ಶುಭಾರಂಭದ ಖುಷಿ ಆರ್‌ಸಿಬಿ ಅಭಿಮಾನಿಗಳಿಗೆ ತುಂಬಾ ದಿನಗಳ ಕಾಲ ಉಳಿಯಲಿಲ್ಲ.


ಏಕೆಂದರೆ ಆರ್‌ಸಿಬಿ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾ​ಯ​ವಾಗಿ ಸೋಲನ್ನು ಅನುಭವಿಸಿತು. ಈ ಸೋಲಿನ ನಂತರ ತನ್ನ ತವರಿಗೆ ವಾಪಸಾಗಿರುವ ಆರ್‌ಸಿಬಿ ತಂಡಕ್ಕೆ ತವರಿನಲ್ಲಿಯಾದರೂ ಜಯ ಸಿಗಬಹುದಾ ಅಂತ ಕಾದು ಕುಳಿತ ಫ್ಯಾನ್ಸ್ ಗೆ ನಿರಾಶೆಯಾಗಿದ್ದು, ಆರ್‌ಸಿಬಿ ಮೂರನೇ ಪಂದ್ಯದಲ್ಲಿ ಸೋಲಿನ ರುಚಿ ನೋಡಿತು.


ಎರಡು ಪಂದ್ಯಗಳನ್ನು ಸೋತ ಆರ್‌ಸಿಬಿ ತಂಡ ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ


ಏಕೆಂದರೆ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ನಿಂದ ಸೋಲು ಕಂಡಿತು. ಈ ಸೋಲಿನೊಂದಿಗೆ ಆರ್‌ಸಿಬಿ ತಂಡವು ತನ್ನ ತವರಿನಲ್ಲಿ ಫ್ಯಾನ್ಸ್ ಮುಂದೆ ತಲೆ ತಗ್ಗಿಸುವಂತಾಗಿದೆ. ಈಗಾಗಲೇ ಐಪಿಎಲ್ 2023 ರ ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿರುವ ಆರ್‌ಸಿಬಿ ತಂಡಕ್ಕೆ ತನ್ನ ಪ್ಲೇ-ಆಫ್ ರೇಸ್ ನಲ್ಲಿ ಉಳಿಯಲು ಉಳಿದಿರುವ ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಬಂದೊದಗಿದೆ.


ಇದನ್ನೂ ಓದಿ: ಆರ್​ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್​ಗೆ ಪಾದಾರ್ಪಣೆ ಮಾಡಿದ ವೈಶಾಖ್


ಈ ಪಂದ್ಯದ ಅಂತಿಮ ಎಸೆತದಲ್ಲಿ ಒಂದು ರನ್ LCG ತಂಡಕ್ಕೆ ಒಂದು ರನ್ ಅಗತ್ಯವಿದ್ದು, ಆರ್‌ಸಿಬಿ ತಂಡದ ಬೌಲರ್ ಹರ್ಷಲ್ ಪಟೇಲ್ ಅವರಿಗೆ ನಾನ್ ಸ್ಟ್ರೈಕರ್ ಕೊನೆಯಲ್ಲಿ ರವಿ ಬಿಷ್ಣೋಯ್ ಅವರನ್ನು ರನ್ ಔಟ್ ಮಾಡುವ ಅವಕಾಶವನ್ನು ಕೈಚೆಲ್ಲಿದರು.


ಗೆಲುವಿನ ನಂತರ ಎಲ್‌ಎಸ್‌ಜಿ ತಂಡದ ಮೆಂಟರ್ ಗಂಭೀರ್ ಮಾಡಿದ್ದೇನು ನೋಡಿ


ಮೈದಾನ ತುಂಬಾ ಆರ್‌ಸಿಬಿ ಅಭಿಮಾನಿಗಳು ಸಖತ್‌ ಹವಾ ಮಾಡುತ್ತಿದ್ದರು. ಮೊದಲಾರ್ಧದಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿತ್ತು. ಇದು ಆರ್‌ಸಿಬಿ ಅಭಿಮಾನಿಗಳಿಗೆ ಮತ್ತಷ್ಟು ಜೋಶ್‌ ನೀಡಿತ್ತು. ಅಭಿಮಾನಿಗಳ ಕೂಗಾಟ ಹೆಚ್ಚುಕಮ್ಮಿ ಎಂಜಿ ರೋಡ್‌ಗೆ ಕೇಳುವಂತಿತ್ತು. ಆದರೆ ಗೆಲುವು ಎಲ್‌ಎಸ್‌ಜಿ ಟೀಮ್‌ ಪರ ಇತ್ತು.


ಗೌತಮ್ ಗಂಭೀರ್​


ಹೀಗೆ ಗೆಲುವಿನ ನಂತರ, ಎಲ್‌ಎಸ್‌ಜಿ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಡಗೌಟ್ ನಿಂದ ಮೈದಾನಕ್ಕೆ ಓಡಿ ಬಂದು ಸಂತೋಷದಿಂದ ಜಯವನ್ನು ಸಂಭ್ರಮಿಸಿದರು. ಗಂಭೀರ್ ಎರಡು ತಂಡದ ಆಟಗಾರರೊಂದಿಗೆ ಕೈ ಕೈ ಮಿಲಾಯಿಸುತ್ತಾ ಹೊರ ನಡೆದಾಗ, ಅವರು ವಿರಾಟ್ ಕೊಹ್ಲಿ ಅವರಿಗೂ ಸಹ ಕೈ ಮಿಲಾಯಿಸಿದರು. ನಂತರ ಗಂಭೀರ್ ತಮ್ಮ ಗಮನವನ್ನು ಆರ್‌ಸಿಬಿ ಅಭಿಮಾನಿಗಳತ್ತ ಹರಿಸಿ ಅವರಿಗೆ ಗಂಭೀರ್ ತುಟಿಯ ಮೇಲೆ ಬೆರಳಿಟ್ಟು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನು ಮೌನವಾಗಿರಲು ಹೇಳಿದರು.


ಮಾರ್ಕಸ್ ಸ್ಟೊಯಿನಿಸ್ ಅವರ ಪರಾಕ್ರಮ ಮತ್ತು ನಿಕೋಲಸ್ ಪೂರನ್ ಅವರ ಪವರ್-ಹಿಟ್ಟಿಂಗ್ ಸಾಮರ್ಥ್ಯದಿಂದ ಲಕ್ನೋ ತಂಡ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿತು. ಏಕೆಂದರೆ 212 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪೂರನ್ ಈ ಋತುವಿನ ಅತ್ಯಂತ ವೇಗದ ಅರ್ಧಶತಕವನ್ನು ಗಳಿಸಿದರು. ಕೈಲ್ ಮೇಯರ್ಸ್ (0), ಕೃನಾಲ್ ಪಾಂಡ್ಯ (0) ಮತ್ತು ದೀಪಕ್ ಹೂಡಾ (9) ಅವರ ಆರಂಭಿಕ ವಿಕೆಟ್ ಗಳನ್ನು ಪಡೆದ ನಂತರ ಆರ್‌ಸಿಬಿ ತಂಡದ ಬೌಲರ್ ಗಳ ಮೇಲೆ ಒತ್ತಡವನ್ನು ಹೇರಲು ಮಾರ್ಕಸ್ ಸ್ಟೊಯಿನಿಸ್ ಕೇವಲ 30 ಎಸೆತಗಳಲ್ಲಿ ಭರ್ಜರಿ 65 ರನ್ ಗಳನ್ನು ಗಳಿಸಿದರು.
ಪೂರನ್ 19 ಎಸೆತಗಳಲ್ಲಿ 62 ರನ್ ಸಿಡಿಸಿ ಔಟಾದರು. ಎಡಗೈ ಸ್ಫೋಟಕ ಬ್ಯಾಟರ್ ನಾಲ್ಕು ಬೌಂಡರಿ ಮತ್ತು ಏಳು ಸಿಕ್ಸರ್ ಗಳನ್ನು ಬಾರಿಸಿದರು. ಈ ಗೆಲುವಿನೊಂದಿಗೆ ಲಕ್ನೋ ತಂಡವು ಆಡಿರುವ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

First published: