MS Dhoni ಒಳ್ಳೆಯ ಕ್ಯಾಪ್ಟನ್​ ಅಲ್ಲ ಎಂದ್ರಾ ಗಂಭೀರ್​? ನಿನ್​ಗ್ಯಾಕ್​ ಬೇಕ್​ ಗುರೂ ಕಾಮೆಂಟರಿ ಮಾಡ್ಕೊಂಡು ಇರು ಎಂದ ಫ್ಯಾನ್ಸ್​!

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದು ಮತ್ತೊಂದು ಟ್ರೋಫಿ ಎತ್ತಿಹಿಡಿಯುವತ್ತ ಕಣ್ಣಿಟ್ಟಿದೆ. ಧೋನಿ ನಾಯಕತ್ವದ ಬಗ್ಗೆ  ಇದೀಗ ಗಂಭೀರ್​ ಮಾತನಾಡಿದ್ದಾರೆ.

ಗೌತಮ್​ ಗಂಭೀರ್​, ಎಂ.ಎಸ್​.ಧೋನಿ

ಗೌತಮ್​ ಗಂಭೀರ್​, ಎಂ.ಎಸ್​.ಧೋನಿ

  • Share this:
 ಎಂ.ಎಸ್​. ಧೋನಿ(MS Dhoni) ಈ ಹೆಸರೇ ಸಾಕು. ಕ್ರಿಕೆಟ್ ಲೋಕ(Cricket World)ದಲ್ಲಿ ಏನಿಲ್ಲವೆಂದರೂ ಹಲವು ದಶಕಗಳ ಕಾಲ ಈ ಹೆಸರು ಚಾಲ್ತಿಯಲ್ಲಿ ಇರುತ್ತದೆ. ಪ್ರತಿ ಬಾರಿ ಈ ಹೆಸರು ಕೇಳಿದಾಗಲೂ ಒಂದೊಂದು ರೋಚಕ ಪ್ರಸಂಗಗಳು, ಹುಬ್ಬೇರಿಸುವಂತಹ ಕಥೆಗಳು ನೆನಪಾಗುತ್ತವೆ. ಭಾರತೀಯ ಕ್ರಿಕೆಟ್‌(Indian Cricket)ಗೆ ಎಲ್ಲವನ್ನೂ ಕೊಟ್ಟ ಧೋನಿ(Dhoni), ವಿಶ್ವ ಕ್ರಿಕೆಟ್‌ಗೇ ಮಾದರಿ. ಅವರೊಬ್ಬ ದಂತಕಥೆ. ಎಲ್ಲ ಮಾದರಿಯ ಕಪ್​ಗಳನ್ನು ಗೆದ್ದ ಭಾರತದ ಏಕೈಕ ಕ್ಯಾಪ್ಟನ್(Captain)​ ಅಂದ್ರೆ ಮಹೇಂದ್ರ ಸಿಂಗ್​ ಧೋನಿ(Mahendra Singh Dhoni). ಎಲ್ಲಾ ಮಾದರಿಯ ಕ್ರಿಕೆಟ್​ಗೂ ಧೋನಿ ವಿದಾಯ ಹೇಳಿದ್ದಾರೆ. ಐಪಿಎಲ್​(IPL)ನಲ್ಲಿ ಮಾತ್ರ ಧೋನಿ ಆಡುತ್ತಿದ್ದಾರೆ. ಆದರೆ, ಕಳೆದ ಎರಡು ಐಪಿಎಲ್​ ಸೀಸನ್​ಗಳಲ್ಲಿ ಧೋನಿ ಒಳ್ಳೆಯ ಪ್ರದರ್ಶನ ನೀಡಿಲ್ಲ. ಈ ಬಾರಿಯ ಐಎಪಿಎಲ್​​ ಇವರಿಗೆ ಕೊನೆಯ ಸೀಸನ್​ ಅಂತ ಹೇಳಲಾಗುತ್ತಿದೆ.

ಕಳೆದ ಬಾರಿ ಚಾಂಪಿಯನ್ಸ್​​ ಆಗಿದ್ದ ಚೆನ್ನೈ ಸೂಪರ್​ ಕಿಂಗ್ಸ್​!

ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು ಹಾಗೂ ನಾಲ್ಕನೇ ಬಾರಿಗೆ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಗೆಲುವಿನ ಮೂಲಕ ಎಂಎಸ್ ಧೋನಿ ನಾಯಕತ್ವ ಎಂಥದ್ದು ಎಂಬುದು ಮತ್ತೊಮ್ಮೆ ಸಾಬೀತಾಯಿತು. ಧೋನಿ ಮಾಸ್ಟರ್‌ಮೈಂಡ್ ನಾಯಕತ್ವದ ಕುರಿತು ಸಾಕಷ್ಟು ಪ್ರಶಂಸೆಗಳೂ ಸಹ ವ್ಯಕ್ತವಾದವು.ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದು ಮತ್ತೊಂದು ಟ್ರೋಫಿ ಎತ್ತಿಹಿಡಿಯುವತ್ತ ಕಣ್ಣಿಟ್ಟಿದೆ. ಧೋನಿ ನಾಯಕತ್ವದ ಬಗ್ಗೆ  ಇದೀಗ ಗಂಭೀರ್​ ಮಾತನಾಡಿದ್ದಾರೆ.

ಈ ರೀತಿ ಆಡುವವನು ಕ್ಯಾಪ್ಟನ್​ ಅಲ್ಲ ಎಂದ ಗಂಭೀರ್​!

ಎಂ.ಎಸ್. ಧೋನಿ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರ ನಾಯಕನಾಗಿ ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ‘ನಾಯಕನೊಬ್ಬ ಮುಂದಾಳತ್ವ ವಹಿಸಬೇಕಾದ ವಿಷಯದ ಬಗ್ಗೆ ನಾವು ಆಗಾಗ ಪ್ರಸ್ತಾಪಿಸುತ್ತಲೇ ಇರುತ್ತೇವೆ’  ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: ಅತಿ ಹೆಚ್ಚು ಬಾರಿ ಐಪಿಎಲ್​ ನಲ್ಲಿ ಡಕೌಟ್​ ಆದವರು ಯಾರು ಗೊತ್ತಾ?, ಅಗ್ರಸ್ಥಾನದಲ್ಲಿದ್ದಾರೆ ಟೀಂ ಇಂಡಿಯಾದ ಆಟಗಾರ

ಮೇಲಿನ ಕ್ರಮಾಂಕದಲ್ಕಿ ಧೋನಿ ಆಡಬೇಕು ಎಂದ ಗೌತಮ್!

ಎಂಎಸ್ ಧೋನಿ ಮೇಲಿನ ಕ್ರಮಾಂಕದಲ್ಲಿ ಆಡವಾಡಬೇಕು ಎಂಬ ಅಭಿಪ್ರಾಯವನ್ನು ಗೌತಮ್ ಗಂಭೀರ್ ವ್ಯಕ್ತಪಡಿಸಿದ್ದಾರೆ. ನಾಯಕನಾದವನು ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕೇ ಹೊರತು ಕೊನೆಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅಲ್ಲ ಎಂಬರ್ಥದಲ್ಲಿ ಗೌತಮ್ ಗಂಭೀರ್ ಎಂಎಸ್ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲಿನಿಂದಲೂ ಧೋನಿ ಹಾಗೂ ಗಂಭೀರ್​ ನಡುವೆ ವೈಮನಸ್ಸು ಇದೆ ಎಂದು ಅವರ ಅಭಿಮಾನಿಗಳು ಮಾತನಾಡುತ್ತಿದ್ದಾರೆ.

‘ಮೊದಲಿನ ಧೋನಿ ವಾಪಸ್​ ಬರಬೇಕು’


ಈ ಹಿಂದೆ ಇದ್ದ ಎಂಎಸ್ ಧೋನಿ ಈಗಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಬೇಗನೇ ಕಣಕ್ಕಿಳಿದು ಎದುರಾಳಿ ಬೌಲರ್‌ಗಳ ಮೇಲೆ ಅಬ್ಬರಿಸುತ್ತಿದ್ದ ಎಂ ಎಸ್ ಧೋನಿ ಮತ್ತೆ ಬೇಕು ಎಂದು ಗೌತಮ್ ಹೇಳಿದ್ದಾರೆ. ಎಂಎಸ್ ಧೋನಿ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಹಳೇ ಫಾರ್ಮ್​ಗೆ ಮರಳಿದರೆ ಎದುರಾಳಿ ತಂಡಕ್ಕೆ ಡೇಂಜರ್​ ಎಂದು ಸಹ ಗೌತಮ್​ ಗಂಭೀರ್​ ಹೇಳಿದ್ದಾರೆ.‘

ಇದನ್ನೂ ಓದಿ: ಈ ಮೂರು ಕಾರಣಗಳು ಆರ್​ಸಿಬಿಗೆ ಮಾರಕವಾಗಲಿದ್ಯಂತೆ! ಸರಿಪಡಿಸಿಕೊಳ್ಳದಿದ್ರೆ ಈ ಬಾರಿಯ ಪ್ಲೇ ಆಫ್​ ಕನಸು ಭಗ್ನ?

ಫಿಟ್ನೆಸ್‌ಗೆ ಹೊಸ ವ್ಯಾಖ್ಯಾನ ಎಂ.ಎಸ್​ ಧೋನಿ

40 ವರ್ಷದ ಧೋನಿಗಿರುವ ಫಿಟ್ನೆಸ್, ಹಲವು ಯುವ ಕ್ರಿಕೆಟಿಗರಿಗೂ ಇಲ್ಲ. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಧೋನಿ ರನ್ ಪಡೆಯುವಾಗ ಗಂಟೆಗೆ 31 ಕಿ.ಮೀ ವೇಗ ದಾಖಲಿಸಿದ್ದರು. ಅಲ್ಲದೆ ಎನ್‌ಸಿಎನಲ್ಲಿ ನಡೆದಿದ್ದ ಫಿಟ್ನೆಸ್ ಪರೀಕ್ಷೆಯಲ್ಲಿ 3 ರನ್‌ಗಳನ್ನು ಕೇವಲ 8.90 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ ದಾಖಲೆಯನ್ನೂ ಬರೆದಿದ್ದರು.

Published by:Vasudeva M
First published: