Virat Kohli: ಕೊಹ್ಲಿಗೆ ಸಿಕ್ಕಷ್ಟು ಅವಕಾಶಗಳು ಬೇರೆ ಯಾರಿಗೂ ಸಿಕ್ಕಿಲ್ಲ, ಶಾಕಿಂಗ್​ ಹೇಳಿಕೆ ನೀಡಿದ ಗೌತಮ್ ಗಂಭೀರ್​

Virat Kohli: ಇಷ್ಟು ಕಾಲ ತಂಡದಲ್ಲಿ ಅವಕಾಶ ಪಡೆಯಲು ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ. ಅದೇ ಅವರ ಜಾಗದಲ್ಲಿ ಅಶ್ವಿನ್, ರಹಾನೆ ಅಥವಾ ರೋಹಿತ್ ಶರ್ಮಾ ಇದ್ದಿದ್ದರೆ ಅವರನ್ನು ತಂಡದಿಂದ ಕೈಬಿಡಲಾಗುತ್ತಿತ್ತು.

ಗಂಭೀರ್​-ಕೊಹ್ಲಿ

ಗಂಭೀರ್​-ಕೊಹ್ಲಿ

  • Share this:
ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದೀರ್ಘ ಸಮಯದ ನಂತರ ಅಂತೂ ಒಂದು ಶತಕ (Virat Kohli Century) ಬಾರಿಸಿದ್ದಾರೆ. ಬರೋಬ್ಬರಿ 1021 ದಿನಗಳ ನಂತರ ಅವರು ಏಷ್ಯಾ ಕಪ್​ನ (Asia Cup 2022) ಅಪ್ಘಾನಿಸ್ತಾನದ ತಂಡದ (India vs Afghanistan) ವಿರುದ್ಧ ಸೆಂಚುರಿ ಬಾರಿಸಿದ್ದಾರೆ. ಏಷ್ಯಾ ಕಪ್​ನಲ್ಲಿ ಭಾರತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 122 ರನ್ ಗಳಿಸಿ ಅಬ್ಬರಿಸಿದರು. ಅವರ ಈ ಶತಕಕ್ಕೆ ಕ್ರಿಕೆಟ್​ ದಿಗ್ಗಜರುಗಳು ಹಾಡಿಹೋಗಳುತ್ತಿದ್ದಾರೆ. ಅವರ ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಹೆಸರನ್ನು ಈವರೆಗೂ ಟ್ರೆಂಡ್​ ಮಾಡುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್  ಗಂಭೀರ್​ (Gautam Gambhir) ಮಾತ್ರ ಇದಕ್ಕೆ ಕೊಂಚ ವಿರುದ್ಧ ಎಂಬಂತೆ ಹೇಳಿಕೆ ಒಂದನ್ನು ನೀಡಿದ್ದು, ಕೊಹ್ಲಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 

ಶಾಕಿಂಗ್​ ಹೇಳಿಕೆ ನೀಡಿದ ಗೌತಮ್​ ಗಂಭಿರ್​:

ಭಾರತೀಯ ರನ್​ ಮಷಿನ್​ ಕೊಹ್ಲಿ ಫಾರ್ಮ್‌ಗೆ ಮರಳಿದ್ದಕ್ಕೆ ಎಲ್ಲರೂ ಖುಷಿಯಾಗಿದ್ದಾರೆ. ಆದರೆ, ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರ ಅಭಿಪ್ರಾಯವೇ ಬೇರೆ. ಇಷ್ಟು ದಿನ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡವರು ವಿರಾಟ್ ಕೊಹ್ಲಿ, ಅದೂ ಕೂಡ ಪ್ರತಿಯೊಂದು ಮಾದರಿಯ ಕ್ರಿಕೆಟ್‌ನಲ್ಲಿಯೂ ಅವಕಾಶ ಗಿಟ್ಟಿಸಿಕೊಂಡವರು ವಿರಾಟ್ ಕೊಹ್ಲಿ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಎಷ್ಟು ದೊಡ್ಡ ಹೆಸರುಗಳಿವೆ? ಏನಾದರೂ ಕೊಹ್ಲಿ ಜಾಗದಲ್ಲಿ ಅಶ್ವಿನ್, ರಹಾನೆ ಅಥವಾ ರೋಹಿತ್ ಶರ್ಮಾ ಇದ್ದಿದ್ದರೆ ಅವರನ್ನು ತಂಡದಿಂದ ಇಷ್ಟರಲ್ಲಿಯೇ ಕೈಬಿಡಲಾಗುತ್ತಿತ್ತು.

ಇದಲ್ಲದೇ ಭಾರತ ತಂಡದಲ್ಲಿ ಕೊಹ್ಲಿ ಮಾತ್ರ ಶತಕಕ್ಕಾಗಿ ಬರೋಬ್ಬರಿ 3 ವರ್ಷಗಳನ್ನು ನೀಡಲಾಯಿತು. ಆದರೆ ಈ ಅವಕಾಶ ಬೇರೆ ಯಾರೊಬ್ಬರಿಗೂ ಸಿಕ್ಕಿರಲಿಲ್ಲ. ನಾನೇನು ಇದನ್ನು ಟೀಕಿಸುತ್ತಿಲ್ಲ. ಇದೇ ಕೊಹ್ಲಿಯ ಬದಲಾಗಿ ಯಾರೋ ಯುವ ಆಟಗಾರ ಸತತ 3 ವರ್ಷಗಳ ಕಾಲ ಶತಕ ಗಳಸಿಸದೇ ಇದ್ದರೆ ಆತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ.

ಇದನ್ನೂ ಓದಿ: Virat Kohli: ಕಿಂಗ್​ ಈಸ್​ ಆಲ್ವೇಸ್​​ ಕಿಂಗ್​, ಒಂದೇ ಶತಕಕ್ಕೆ 15 ದಾಖಲೆಗಳು ಉಡೀಸ್!

ಇವೆಲ್ಲವನ್ನೂ ಹೊರತು ಪಡಿಸಿ ಕೊಹ್ಲಿ ಫಾರ್ಮ್​ಗೆ ಬರಬೇಕಿತ್ತು. ಅದೂ ಸಹ ಅವರು ಸರಿಯಾದ ಸಮಯಕ್ಕೆ ಫಾರ್ಮ್​ಗೆ ಮರಳಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಗೆ ಇದು ಸಹಾಯಕವಾಗಿದೆ. ಆದರೂ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಶತಕ ಬಾರಿಸದೇ ಬೇರೆ ಯಾರಿಗೂ 3 ವರ್ಷಗಳ ಕಾಲ ತಂಡದಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆಯೂ ಕೊಹ್ಲಿಯನ್ನು ಟೀಕಿಸಿದ್ದ ಗೌತಿ:

ಹೌದು, ಗಂಭೀರ್​ ಕೊಹ್ಲಿಗೆ ಈ ರೀತಿ ಹೇಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಅನೇಕ ಬಾರಿ ಅವರು ವಿರಾಟ್​ಗೆ ಈ ರೀತಿ ನೇರವಾಗಿ ಹೇಳಿಕೆಗಳನ್ನು ನೀಡಿದ್ದರು. ಅದೇ ರೀತಿ ಇದೀಗ ಕೊಹ್ಲಿ ಫಾರ್ಮ್​ಗೆ ಮರಳಿದ ನಂತರ ಮತ್ತೆ ಗೌತಿಯ ಈ ಹೇಳಿಕೆ ಹೊಸ ಚರ್ಚಗೆ ಕಾರಣವಾಗಿದೆ. ಕೊಹ್ಲಿ ಶತಕ ಸಿಡಿಸಿಲ್ಲ ಎನ್ನುವುದನ್ನು ಹೊರತುಪಡಿಸಿ ನೋಡಿದರೆ, ಕಳೆದ ವರ್ಷ 2021ರ ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಹೆಚ್ಚು ರನ್​ ಗಳಿಸಿದ ಆಟಗಾರರಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್‌ಗೂ ಮುನ್ನ ಬದಲಾಗುತ್ತಾ ರೋಹಿತ್​ ಸ್ಥಾನ? ಏನು ಹೇಳುತ್ತೆ ಅಂಕಿಅಂಶ

ಅಲ್ಲದೇ 2019ರಿಂದ ಅವರು 9 ಟಿ20 ಅರ್ಧ ಶತಕ ಸಿಡಿಸಿದ್ದಾರೆ. 51ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ, ಕೇವಲ ಕೊಹ್ಲಿ ಶತಕ ಸಿಡಿಸಿಲ್ಲ ಎನ್ನುವುದು ತಪ್ಪು ಎಂದು ಅವರ ಅಭಿಮಾನಿಗಳು ಗಂಭೀರ್​ ಹೇಳಿಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Published by:shrikrishna bhat
First published: