• Home
  • »
  • News
  • »
  • sports
  • »
  • KL Rahul: ಕನ್ನಡಿಗ ಕೆಎಲ್ ರಾಹುಲ್​ಗೆ ಸಲಹೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

KL Rahul: ಕನ್ನಡಿಗ ಕೆಎಲ್ ರಾಹುಲ್​ಗೆ ಸಲಹೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

KL Rahul: ರಾಹುಲ್ ಆಯ್ಕೆಗಾರರ ​​ಬಗ್ಗೆ ಹೆಚ್ಚು ಯೋಚಿಸಬಾರದು ಎಂದು ಗಂಭೀರ್ ಸಲಹೆ ನೀಡಿದರು ಏಕೆಂದರೆ ಇದು ನಿಯಂತ್ರಿಸಲಾಗದ ವಿಷಯವಾಗಿದೆ, ಇದು ಅವರ ಮೇಲೆ ಅನಗತ್ಯ ಒತ್ತಡವನ್ನು ಬೀರುತ್ತದೆ ಎಂದಿದ್ದಾರೆ.

  • Trending Desk
  • Last Updated :
  • New Delhi, India
  • Share this:

ಟಿ20 ಕ್ರಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತದ ಪರ ಭರವಸೆಯ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ (KL Rahul) ಈ ವರ್ಷ ತಮ್ಮ ಬ್ಯಾಟ್​ನಿಂದ ರನ್ ಗಳ ಸುರಿಮಳೆಯನ್ನು ಹರಿಸುವುದರಲ್ಲಿ ತುಂಬಾನೇ ಹೆಣಗಾಡಿದ್ದಾರೆ. ಈಗಾಗಲೇ ಮುಕ್ತಾಯಗೊಂಡಂತಹ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ (T20 World Cup) ಅಂತಹ ದೊಡ್ಡ ಸರಣಿಗಳಲ್ಲಿ ರನ್ ಗಳನ್ನು ಗಳಿಸುವಲ್ಲಿ ವಿಫಲರಾಗಿದ್ದಾರೆ. ಈ ಕಳಪೆ ಪ್ರದರ್ಶನದ ನಂತರ, ಅವರನ್ನು ಮುಂಬರುವ ಶ್ರೀಲಂಕಾ (IND vs SL) ವಿರುದ್ಧದ ಏಕದಿನ ಸರಣಿಗೆ ಉಪನಾಯಕ ಸ್ಥಾನದಿಂದ ಸಹ ತೆಗೆದು ಹಾಕಲಾಗಿದೆ. ಇದು ತಂಡದಲ್ಲಿ ಅವರ ಸ್ಥಾನವನ್ನು ಸಾಬೀತುಪಡಿಸಲು ಅವರಿಗೆ ತುಂಬಾ ಕಡಿಮೆ ಸಮಯವಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಈ ಕಳಪೆ ಫಾರ್ಮ್ ಅನ್ನು ನೋಡಿ ಭಾರತದ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ (Gautam Gambhir) ಅವರು ರಾಹುಲ್ ಗೆ ಸಲಹೆ ನೀಡಿದ್ದಾರೆ ನೋಡಿ.


ರಾಹುಲ್​ಗೆ ಮಾಜಿ ಆರಂಭಿಕ ಆಟಗಾರ ಸಲಹೆ:


ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡದ ಆಟಗಾರರಲ್ಲಿ ಅಷ್ಟೊಂದು ಪೈಪೋಟಿ ಇಲ್ಲದ ಕಾರಣ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಒಳ್ಳೆಯ ಪ್ರದರ್ಶನವನ್ನು ನೀಡಬೇಕು ಎಂದು ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರು ರಾಹುಲ್ ಅವರಿಗೆ ಸಲಹೆ ನೀಡಿದ್ದಾರೆ. ಅವರು ಬಾಂಗ್ಲಾದೇಶ ಪ್ರವಾಸದಲ್ಲಿ ಕೇವಲ ಒಂದೇ ಒಂದು ಅರ್ಧಶತಕವನ್ನು ಗಳಿಸಿದ್ದರು, ಅದು ಸಹ ಆರಂಭಿಕ ಏಕದಿನ ಪಂದ್ಯದಲ್ಲಿ ಬಂದಿತ್ತು. ಆದರೆ ಅದರ ನಂತರ ಅವರ ಬ್ಯಾಟ್ ನಿಂದ ಅಷ್ಟೊಂದು ರನ್ ಗಳು ಬಂದಿಲ್ಲ.


ಬಾಂಗ್ಲಾದೇಶ ಸರಣಿಯ ಟಿ20 ಕ್ರಿಕೆಟ್ ತಂಡದಿಂದ ಅವರನ್ನು ಹೊರಗಿಡಲಾಗಿದೆ, ಆದಾಗ್ಯೂ, ಅವರನ್ನು ಕೈಬಿಡಲಾಗಿದೆಯೇ ಅಥವಾ ವಿಶ್ರಾಂತಿ ನೀಡಲಾಗಿದೆಯೇ ಎಂದು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ರಾಹುಲ್ ಅವರು ಆಯ್ಕೆಗಾರರ ಬಗ್ಗೆ ಹೆಚ್ಚು ಯೋಚಿಸಬಾರದು ಎಂದು ಸಲಹೆ ನೀಡಿದರು. ಏಕೆಂದರೆ, ಇದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ, ಇದರ ಬಗ್ಗೆ ಜಾಸ್ತಿ ಯೋಚನೆ ಮಾಡಿದರೆ ಅನಗತ್ಯ ಒತ್ತಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.


ಆಯ್ಕೆಗಾರರನ್ನು ನಿಯಂತ್ರಿಸಲು ಸಾಧ್ಯವಿಲ್ಲ:


ನೀವು ಏನನ್ನು ನಿಯಂತ್ರಿಸಬಲ್ಲಿರೋ ಅದನ್ನು ಮಾತ್ರ ನೀವು ನಿಯಂತ್ರಿಸಬಲ್ಲಿರಿ. ನೀವು ಆಯ್ಕೆಗಾರರನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಮುಂದಿನ ಸರಣಿಯಲ್ಲಿ ಏನಾಗಲಿದೆ ಎಂಬುದನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ. ನೀವು ಶ್ರೀಲಂಕಾ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡಿದರೆ ಮಾತ್ರ ನೀವು ಪಂದ್ಯಗಳನ್ನು ಗೆಲ್ಲುತ್ತೀರಿ. ಮೈದಾನದಲ್ಲಿ ಚೆನ್ನಾಗಿ ಆಡುವುದು ನಿಮ್ಮ ಕೈಯಲ್ಲಿದೆ ಎಂದು ಗಂಭೀರ್ ಹೇಳಿದರು.


ಇದನ್ನೂ ಓದಿ: Rishabh Pant: ಕನಿಷ್ಠ ಆರು ತಿಂಗಳ ಚಿಕಿತ್ಸೆ: ರಿಷಭ್ ಪಂತ್ ಆರೋಗ್ಯದ ಬಗ್ಗೆ ಮಹತ್ವದ ವಿಚಾರ ಬಿಚ್ಚಿಟ್ಟ ಏಮ್ಸ್​ ವೈದ್ಯರು


ನೀವು ಅನಿಯಂತ್ರಿತ ವಿಷಯಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದ ಕ್ಷಣ, ನೀವು ನಿಮ್ಮ ಮೇಲೆ ಅನಗತ್ಯ ಒತ್ತಡವನ್ನು ಹೇರಿಕೊಳ್ಳಲು ಆರಂಭಿಸುತ್ತಿರಿ" ಎಂದು  ಗಂಭೀರ್ ಹೇಳಿದರು. ಗಂಭೀರ್ ಕಳೆದ ಋತುವಿನಲ್ಲಿ ಐಪಿಎಲ್ ನಲ್ಲಿ ರಾಹುಲ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ, ಅಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್ ನ ಮೆಂಟರ್ ಆಗಿದ್ದರು. ಹೆಸರು ಮತ್ತು ಪ್ರತಿಭೆಯು ತಂಡದಲ್ಲಿ ಯಾರಿಗೂ ಸ್ಥಾನವನ್ನು ಖಾತರಿಪಡಿಸುವುದಿಲ್ಲ ಮತ್ತು ರಾಹುಲ್ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಶ್ರೀಲಂಕಾ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಗಂಭೀರ್ ಹೇಳಿದರು.


ಉತ್ತಮ ಪ್ರದರ್ಶನವಷ್ಟೇ ತಂಡದಲ್ಲಿರಿಸುತ್ತದೆ:


ನೀವು ಪ್ರದರ್ಶನ ನೀಡದಿದ್ದರೆ, ಬೇರೆ ಯಾರಾದರೂ ನಿಮ್ಮ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ. ಇದು ಬರೀ ಸಂಜು ಅಥವಾ ಕೆಎಲ್ ಗೆ ಅಷ್ಟೇ ಅನ್ವಯಿಸುವುದಿಲ್ಲ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೂ ಸಹ ಉತ್ತಮವಾಗಿ ಪ್ರದರ್ಶನ ನೀಡದಿದ್ದರೆ, ಅವರ ಸ್ಥಾನಗಳ ಬಗ್ಗೆಯೂ ಪ್ರಶ್ನಿಸಲು ಪ್ರಾರಂಭಿಸುತ್ತಾರೆ.


ಅಂತಾರಾಷ್ಟ್ರೀಯ ಕ್ರಿಕೆಟ್ ಹೀಗೆ ಇರುತ್ತದೆ, ಇಲ್ಲಿ ಯಾರೂ ಅನಿವಾರ್ಯವಲ್ಲ. ಆದ್ದರಿಂದ ನೀವು ಮೂರು ಏಕದಿನ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತೀರಿ, ಚೆನ್ನಾಗಿ ರನ್ ಗಳಿಸಲು ಪ್ರಯತ್ನಿಸಿ, ಏಕೆಂದರೆ ಅಂತಿಮವಾಗಿ ನಿಮ್ಮ ಪ್ರದರ್ಶನವೇ ನಿಮ್ಮನ್ನು ತಂಡದಲ್ಲಿರಿಸುತ್ತದೆ" ಎಂದು ಹೇಳಿದರು.

Published by:shrikrishna bhat
First published: