ಫಿಫಾ ವಿಶ್ವಕಪ್​ನಲ್ಲಿ ಇಂದು ನಾಲ್ಕು ಪಂದ್ಯ: ಎಲ್ಲರ ಚಿತ್ತ ಐಸ್​ಲೆಂಡ್​-ಮೆಸ್ಸಿಯತ್ತ

news18
Updated:June 16, 2018, 1:21 PM IST
ಫಿಫಾ ವಿಶ್ವಕಪ್​ನಲ್ಲಿ ಇಂದು ನಾಲ್ಕು ಪಂದ್ಯ: ಎಲ್ಲರ ಚಿತ್ತ ಐಸ್​ಲೆಂಡ್​-ಮೆಸ್ಸಿಯತ್ತ
news18
Updated: June 16, 2018, 1:21 PM IST
ನ್ಯೂಸ್ 18 ಕನ್ನಡ

ಫಿಫಾ ವಿಶ್ವಕಪ್ 2018ರಲ್ಲಿ ಇಂದು ಒಟ್ಟು ನಾಲ್ಕು ಪಂದ್ಯಗಳು ನಡೆಯಲಿದ್ದು, ಮಧ್ಯಾಹ್ನ 3:30ಕ್ಕೆ ಆರಂಭವಾಗುವ ಮೊದಲ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್​ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿಲಿದೆ. ಯುರೋ ಕಪ್​​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಫ್ರಾನ್ಸ್​ ತಂಡ ಫೈನಲ್​ನಲ್ಲಿ ಪೋರ್ಚುಗಲ್ ಎದುರು ಸೋತಿತ್ತು. ತಂಡದಲ್ಲಿ ಬಪೆ, ಗ್ರೀಜ್​​ಮನ್​ ಎಂಬ ಸ್ಟಾರ್ ಆಟಗಾರರಿದ್ದು ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಇತ್ತ ಆಸ್ಟ್ರೇಲಿಯಾ ಕೂಡ ಗೆಲುವಿನೊಂದಿಗೆ ಶುಭಾರಂಭ ಮಾಡುವ ಭರವಸೆಯಲ್ಲಿದ್ದು, ತಂಡದ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಅರ್ಜೆಂಟಿನಾ ತಂಡ ಐಸ್​ಲೆಂಡ್ ಅನ್ನು ಎದುರಿಸಲಿದೆ. ಫುಟ್ಬಾಲ್ ಲೋಕದ ಸ್ಟಾರ್ ಆಟಗಾರ ಲಿಯೋನಲ್ ಮೆಸ್ಸಿ ಅವರು ವಿದಾಯದ ಸನಿಹದಲ್ಲಿದ್ದು, ಅರ್ಜೆಂಟಿನಾದ ಗೆಲುವಿನ ಕನಸಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಲಿದ್ದಾರೆ. ಮೆಸ್ಸಿ ಅವರ ಏಕಾಂಗಿ ಹೋರಾಟದ ಫಲವಾಗಿ ಕಳೆದ ಬಾರಿ ಅರ್ಜೆಂಟಿನಾ ಫೈನಲ್ ಪ್ರವೇಶಿಸಿತ್ತು. ಇತ್ತ ಇಂದಿನ ಪಂದ್ಯದ ಮೂಲಕ ವಿಶ್ವಕಪ್​ಗೆ ಪಾದಾರ್ಪಣೆ ಮಾಡಲಿರುವ ಐಸ್​ಲೆಂಡ್ ತಂಡ ಸಾಕಷ್ಟು ಬೆಳವಣಿಗೆ ಕಂಡಿದೆ. ತಂಡದಲ್ಲಿ ಹೇಳಿಕೊಳ್ಳುವಂತಹ ಸ್ಟಾರ್​ ಆಟಗಾರರು ಇಲ್ಲವಾದರು ಯುರೋ ಕಪ್​ನಲ್ಲಿ ಪೋರ್ಚುಗಲ್ ಎದುರು ಲೀಗ್ ಹಂತದಲ್ಲಿ 1-1 ಗೋಲ್​ನ ಮೂಲಕ ಡ್ರಾ ಸಾಧಿಸಿತ್ತು.

ಇನ್ನು ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿರುವ ಪೆರು ಹಾಗೂ ಡೆನ್ಮಾರ್ಕ್ ತಂಡಗಳು ಮೂರನೇ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. 5ನೇ ಬಾರಿ ವಿಶ್ವಕಪ್​ಗೆ ಪೆರು ತಂಡ ಅರ್ಹತೆ ಗಿಟ್ಟಿಸಿಕೊಂಡಿದೆ. ಪೊವಾಲೊ ಗುರ್ರೆರೊ ಅವರು ಹಿಂತಿರುಗಿರವುದು ತಂಡದ ಬಲವನ್ನು ಇನ್ನಷ್ಟು ಹೆಚ್ಚಿಸಿದೆ. ಇತ್ತ ಡೆನ್ಮಾರ್ಕ್ ತಂಡದಲ್ಲಿ ಗೋಲ್​ಮಿಷಿನ್ ಕ್ರಿಶ್ಚಿಯನ್ ಎರಿಕ್ಸೆನ್ ಅವರು ಉತ್ತಮ ಫಾರ್ಮ್​​​ನಲ್ಲಿದ್ದಾರೆ. 12ನೇ ಸ್ಥಾನದಲ್ಲಿರುವ ಡೆನ್ಮಾರ್ಕ್ ತಂಡ ಬಲಿಷ್ಠ ರಕ್ಷಣಾ ವಿಭಾಗವನ್ನು ಹೊಂದಿದೆ.

ಮಾಜಿ ಸೆಮಿಫೈನಲಿಸ್ಟ್​​ ಆಗಿರುವ ಕ್ರೊವೇಶಿಯಾ ಹಾಗೂ ನೈಜೀರಿಯಾ ತಂಡಗಳು ಇಂದಿನ ನಾಲ್ಕನೇ ಪಂದ್ಯದಲ್ಲಿ ಗೆಲುವಿಗಾಗಿ ಸೆಣೆಸಾಟ ನಡೆಸಲಿದೆ. 5ನೇ ಬಾರಿ ಫಿಫಾ ವಿಶ್ವಕಪ್​ನಲ್ಲಿ ಆಡುತ್ತಿರುವ ಕ್ರೊವೇಶಿಯಾ ತಂಡ ವಿಶ್ವದರ್ಜೆ ಆಟಗಾರರನ್ನು ಹೊಂದಿದೆ. ಇತ್ತ 12 ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯ ಸಾಧಿಸಿರುವ ನೈಜೀರಿಯಾ ತಂಡ ಗೆಲುವಿನ ಆಸೆಯಲ್ಲಿದೆ.
First published:June 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...