• Home
  • »
  • News
  • »
  • sports
  • »
  • Imran Khan: ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ, ಪಾಕ್ ಮಾಜಿ ಪ್ರಧಾನಿಗೆ ಗಾಯ 

Imran Khan: ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ, ಪಾಕ್ ಮಾಜಿ ಪ್ರಧಾನಿಗೆ ಗಾಯ 

ಇಮ್ರಾನ್ ಖಾನ್

ಇಮ್ರಾನ್ ಖಾನ್

Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಇಂದು ತಮ್ಮ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಗುಂಡಿನ ದಾಳಿ ನಡೆದಿದೆ. ಈ ಪರಿಣಾಮ ಪಾಕ್ ಮಾಜಿ ಪ್ರಧಾನಿ ಮತ್ತು ಪಾಕ್​ನ ಮಾಜಿ ಆಟಗಾರರಾದ ಇಮ್ರಾನ್ ಖಾನ್​ ಗಾಯಗೊಂಡಿದ್ದಾರೆ.

  • Share this:

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಇಂದು ತಮ್ಮ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಗುಂಡಿನ ದಾಳಿ ನಡೆದಿದೆ. ಈ ಪರಿಣಾಮ ಪಾಕ್ ಮಾಜಿ ಪ್ರಧಾನಿ ಮತ್ತು ಪಾಕ್​ನ ಮಾಜಿ ಆಟಗಾರರಾದ ಇಮ್ರಾನ್ ಖಾನ್​ ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಇಮ್ರಾನ್ ಖಾನ್ ಸಾಗಿಸುತ್ತಿದ್ದ ಕಂಟೈನರ್-ಮೌಂಟೆಡ್-ಟ್ರಕ್ ಮೇಲೆ ಗುಂಡಿನ ದಾಳಿ ನಡೆದಿದೆ. ಇಮ್ರಾನ್ ಖಾನ್ ಕಾಲಿಗೆ ಗುಂಡು ತಗುಲಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸದ್ಯ ಅವರನ್ನು ಇಮ್ರಾನ್ ಖಾನ್ ಅವರನ್ನು ಲಾಹೋರ್‌ನ ಶೌಕತ್ ಖಾನಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಪಾಕ್​ ಮಾಜಿ ಪ್ರಧಾನಿ ಮೇಲೆ ಗುಂಡಿನ ದಾಳಿ:


ಇನ್ನು,  ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿಯನ್ನು ಪಾಕಿಸ್ತಾನದ ARY ನ್ಯೂಸ್ ನೀಡಿದ್ದು, ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಪಿಟಿಐ ಮುಖಂಡ ಫೈಸಲ್ ಜಾವೇದ್ ಸೇರಿದಂತೆ ಇನ್ನೂ ಕೆಲವರು ಗಾಯಗೊಂಡಿದ್ದಾರೆ. ದಾಳಿಕೋರನ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.ಪಾಕಿಸ್ತಾನದ ಮಾಧ್ಯಮ ವರದಿಯ ಪ್ರಕಾರ, ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರ ಕಂಟೈನರ್​ಗೆ ವಜೀರಾಬಾದ್‌ನ ಜಾಫರ್ ಅಲಿ ಖಾನ್ ಚೌಕ್ ಬಳಿ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: T20 World Cup 2022: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಗೆದ್ದರೂ ಪಾಕ್​ಗಿದೆ ಸೆಮೀಸ್​ ಚಾನ್ಸ್! ಅದು ಹೇಗೆ ಗೊತ್ತಾ?


ಭದ್ರತೆಯ ನಡುವೆಯೂ ಗುಂಡಿನ ದಾಳಿ:


ಇಮ್ರಾನ್ ಖಾನ್ ಅಕ್ಟೋಬರ್ 28 ರಂದು ಲಾಹೋರ್‌ನ ಲಿಬರ್ಟಿ ಚೌಕ್‌ನಿಂದ ಇಸ್ಲಾಮಾಬಾದ್‌ಗೆ 'ಹಕಿಕಿ ಆಜಾದಿ' ಮೆರವಣಿಗೆಗಾಗಿ ಲಾಂಗ್ ಮಾರ್ಚ್ ಆರಂಭಿಸಿದ್ದಾರೆ. ಅವರೇ ಅದನ್ನು ಮುನ್ನಡೆಸುತ್ತಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವ ಮೂಲಕ ಪಾಕಿಸ್ತಾನದಲ್ಲಿ ತಕ್ಷಣವೇ ಮಧ್ಯಂತರ ಚುನಾವಣೆ ನಡೆಸಬೇಕು ಎಂದು ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ. ಹಕಿಕಿ ಆಜಾದಿ ಮಾರ್ಚ್‌ಗೆ ಸಂಬಂಧಿಸಿದಂತೆ ಗೃಹ ಸಚಿವಾಲಯವು 13,000 ಅಧಿಕಾರಿಗಳನ್ನು ಹೈ ಅಲರ್ಟ್‌ನಲ್ಲಿ ನಿಯೋಜಿಸಿದೆ. ಆದರೆ, ಇಮ್ರಾನ್ ಖಾನ್ ಮತ್ತು ಅವರ ಪಕ್ಷವು ಹಕಿಕಿ ಆಜಾದಿ ಮಾರ್ಚ್ ಶಾಂತಿಯುತವಾಗಿರುತ್ತದೆ ಎಂದು ಪದೇ ಪದೇ ಹೇಳುತ್ತಿತ್ತು. ಗೃಹ ಸಚಿವಾಲಯ ಮತ್ತು ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ನಿಯೋಜಿಸಿದ್ದರೂ, ದಾಳಿ ಹೇಗೆ ನಡೆದಿರುವುದರಿಂದ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: West Bengal: ಹೆಣ್ಮಕ್ಕಳಿಗೆ ತ್ರಿಶೂಲ ಇಟ್ಟುಕೊಳ್ಳಲು ಸಲಹೆ ಕೊಟ್ಟ ಬಿಜೆಪಿ ನಾಯಕ!


ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಆಗಿದ್ದ ಇಮ್ರಾನ್ ಖಾನ್:


ಇನ್ನು, ಪಾಕ್​ನ ಮಾಜಿ ಪ್ರಧಾನಿ ಆಗುವ ಮುನ್ನ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಾಗಿದ್ದರು. ನಂತರ ರಾಜಕೀಯಕ್ಕೆ ಬಂದು ಪ್ರಧಾನಿ ಹುದ್ದೆಗೆ ಏರಿದರು. ಅವರು ಪಾಖ್ ಪರ ಒಟ್ಟು 88 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ಶತಕ ಮತ್ತು 18 ಅರ್ಧಶತಕದ ಸಹಾಯದಿಂದ 3801 ರನ್ ಹಾಗೂ 362 ವಿಕೆಟ್​ ಸಹ ಪಡೆದಿದ್ದಾರೆ. ಅದರಂತೆ ಏಕದಿನ ಮಾದರಿಯಲ್ಲಿ 175 ಪಂದ್ಯಗಳ ಮೂಲಕ 124 ವಿಕೆಟ್​ ಪಡೆದರೆ 1 ಶತಕ ಮತ್ತು 19 ಅರ್ಧಶತಕದ ಸಹಾಯದಿಂದ 3709 ರನ್ ಗಳಿಸಿದ್ದಾರೆ.

Published by:shrikrishna bhat
First published: