• Home
  • »
  • News
  • »
  • sports
  • »
  • Hashim Amla: ಹಿಂದೂ ಕುಟುಂಬಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸಿದ್ದಾರಂತೆ ಈ ಕ್ರಿಕೆಟಿಗ! ಖ್ಯಾತ ಆಟಗಾರನ ವಿರುದ್ಧ ಪಾಕ್ ಮಾಜಿ ಆಟಗಾರನ ವಿವಾದಾತ್ಮಕ ಹೇಳಿಕೆ

Hashim Amla: ಹಿಂದೂ ಕುಟುಂಬಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸಿದ್ದಾರಂತೆ ಈ ಕ್ರಿಕೆಟಿಗ! ಖ್ಯಾತ ಆಟಗಾರನ ವಿರುದ್ಧ ಪಾಕ್ ಮಾಜಿ ಆಟಗಾರನ ವಿವಾದಾತ್ಮಕ ಹೇಳಿಕೆ

ಹಶೀಮ್​ ಆಮ್ಲಾ

ಹಶೀಮ್​ ಆಮ್ಲಾ

Hashim Amla: ಸದ್ಯ ಪಾಕಿಸ್ತಾನದ ಮಾಜಿ ನಾಯಕ ಸಯೀದ್ ಅನ್ವರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಹೊಸ ವಿಚಾರ ಸಂಚಲನ ಉಂಟುಮಾಡಿದೆ.

  • Share this:

ಸಯೀದ್ ಅನ್ವರ್ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಏಕದಿನ ಪಂದ್ಯಗಳಲ್ಲಿ ಭಾರತದ ವಿರುದ್ಧ 194 ರನ್‌ಗಳ ದೊಡ್ಡ ಇನ್ನಿಂಗ್ಸ್ ಅನ್ನು ಸಹ ಆಡಿದ ಆಟಗಾರ. 2001ರಲ್ಲಿ, ಅವರು ದೊಡ್ಡ ಆಘಾತವನ್ನು ಅನುಭವಿಸಬೇಕಾಯಿತು. ಅವರ ಮಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದಾದ ನಂತರ ಅನ್ವರ್ (Saeed Anwar) ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ಪ್ರಾರಂಭಿಸಿದರು. ಈ ನಡುವೆ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲಿ, ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಶೀಮ್ ಆಮ್ಲಾ (Hashim Amla) ಅನೇಕ ಹಿಂದೂಗಳನ್ನು (Hindu) ಇಸ್ಲಾಂಗೆ ಮತಾಂತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆಯ ನಂತರ, ಅವರ ಪರ ಮತ್ತು ವಿರೋಧ ವಾದಗಳು ಕೇಳಿಬರುತ್ತಿವೆ.


ಇದರ ನಡುವೆ ಭಾರತದಲ್ಲಿ ಪ್ರತಿ ವರ್ಷ ನಡೆಯುವ ಐಪಿಎಲ್ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಟಿ20 ಲೀಗ್‌ಗಳಲ್ಲಿ ಒಂದಾಗಿದೆ. ಈ ಲೀಗ್‌ನಲ್ಲಿ ದೇಶ-ವಿದೇಶದ ಅನೇಕ ಪ್ರಸಿದ್ಧ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ 2008ರಲ್ಲಿ ನಡೆದ ಮುಂಬೈ ಉಗ್ರರ ದಾಳಿಯ ನಂತರ ಪಾಕಿಸ್ತಾನಿ ಆಟಗಾರರಿಗೆ ಐಪಿಎಲ್‌ನಿಂದ  ನಿಷೇಧಿಸಲಾಗಿದೆ. ಇದರ ನಡುವೆ ಈ ಹೇಳಿಕೆ ಹೊಸ ಸಂಚಲನವನ್ನು ಉಂಟುಮಾಡಿದೆ.


ವಿವಾದಾತ್ಮಕ ಹೇಳಿಕೆ ನೀಡಿದ ಪಾಕ್ ಮಾಜಿ ಆಟಗಾರ:


ವಿಶ್ವಕಪ್‌ನಲ್ಲಿ ಎಷ್ಟು ಜನರು ಇಸ್ಲಾಂಗೆ ಮತಾಂತರವಾಗುತ್ತಿದ್ದಾರೆ ಎಂದು ಸಯೀದ್ ಅನ್ವರ್ ವಿಡಿಯೋದಲ್ಲಿ ಹೇಳುತ್ತಿರುವುದು ಕಂಡುಬಂದಿದೆ. ಹಾಶಿಮ್ ಆಮ್ಲಾ ನಮ್ಮ ಕ್ರಿಕೆಟಿಗ. ಶಾಹಿದ್ ಅಫ್ರಿದಿ ಹೆಸರನ್ನು ತೆಗೆದುಕೊಂಡು, ಆಮ್ಲಾ ಎಷ್ಟು ಜನರಿಗೆ ಕಲ್ಮಾ ಕಲಿಸಿದ್ದಾರೆ ಎಂದು ಹೇಳಿದರು. ಹಿಂದೂ ಕುಟುಂಬವು ಸಂಪೂರ್ಣ ಮುಸ್ಲಿಂ ಆಗಿ ಮಾಡಿದ್ದಾರೆ. ವಿಶ್ವಕಪ್ ಸಮಯದಲ್ಲಿ ಅನೇಕ ಜನರು ಇಸ್ಲಾಂಗೆ ಮತಾಂತರಗೊಂಡರು. ಅಲ್ಲಾ ನಿಮಗೆ ಸಾಕಷ್ಟು ಪ್ರತಿಭೆಯನ್ನು ನೀಡಿದ್ದಾನೆ, ಆದ್ದರಿಂದ ಯಾವಾಗಲೂ ಅಲ್ಲಾನನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ ನಿಮ್ಮ ಕೆಲಸವನ್ನು ಮಾಡಿ ಎಂದಿದ್ದಾರೆ. ಆದರೆ ಈ ವಿಡಿಯೋಗೆ ಜನರು ಮತ್ತು ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.ಶುರುವಾಯ್ತು ಪರ-ವಿರೋಧದ ಚರ್ಚೆ:


ಇದು ಸರಿಯೇ ಎಂದು ಅಭಿಮಾನಿಯೊಬ್ಬರು ಈ ವಿಡಿಯೋದಲ್ಲಿ ಬರೆದಿದ್ದಾರೆ. ಇನ್ನೊಬ್ಬರು, ಡ್ಯಾನಿಶ್ ಕನೇರಿಯಾ ಜೈ ಶ್ರೀ ರಾಮ್ ಎಂದು ಮಾತನಾಡುವ ಏಕೈಕ ಪಾಕಿಸ್ತಾನಿ ಕ್ರಿಕೆಟಿಗ ಎಂದಿದ್ದಾರೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಶೀಮ್ ಆಮ್ಲಾ ಅವರ ಕುಟುಂಬ ಮೂಲತಃ ಭಾರತದ್ದು ಎಂಬುದು ಗೊತ್ತೇ ಇದೆ. ಅವರ ಕುಟುಂಬವು 1927ರಲ್ಲಿ ಸೂರತ್‌ನಿಂದ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿತು. ಆಮ್ಲಾ ಅವರು ಡರ್ಬನ್‌ನಲ್ಲಿ ಜನಿಸಿದರು. 39 ವರ್ಷದ ಆಮ್ಲಾ 124 ಟೆಸ್ಟ್‌ಗಳಲ್ಲಿ 28 ಶತಕ ಮತ್ತು 41 ಅರ್ಧಶತಕಗಳ ಸಹಾಯದಿಂದ 9282 ರನ್ ಗಳಿಸಿದ್ದಾರೆ. 181 ODIಗಳಲ್ಲಿ ಅವರು 49 ರ ಸರಾಸರಿಯಲ್ಲಿ 8113 ರನ್ ಗಳಿಸಿದ್ದಾರೆ. 27 ಶತಕ ಮತ್ತು 39 ಅರ್ಧ ಶತಕಗಳನ್ನು ಗಳಿಸಿದ್ದಾರೆ.


ಇದನ್ನೂ ಓದಿ: IND vs NZ: ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ, ಸ್ಟಾರ್​ ಪ್ಲೇಯರ್​ ಔಟ್​!


ಆಮ್ಲಾ 44 ಟಿ20 ಪಂದ್ಯಗಳಲ್ಲಿ 1277 ರನ್ ಗಳಿಸಿದ್ದಾರೆ. 8 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರು 2016 ಮತ್ತು 2017 ರಲ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದರು. ಈ ಸಮಯದಲ್ಲಿ ಆಮ್ಲಾ 16 ಪಂದ್ಯಗಳಲ್ಲಿ 44 ರ ಸರಾಸರಿಯಲ್ಲಿ 577 ರನ್ ಗಳಿಸಿದರು. 2 ಶತಕ ಹಾಗೂ 3 ಅರ್ಧ ಶತಕ ಬಾರಿಸಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು