• Home
  • »
  • News
  • »
  • sports
  • »
  • Lalit Modi: ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಸ್ಥಿತಿ ಗಂಭೀರ, ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ

Lalit Modi: ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಸ್ಥಿತಿ ಗಂಭೀರ, ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Lalit Modi Hospitalised: ಐಪಿಎಲ್ ಮಾಜಿ ಅಧ್ಯಕ್ಷ ಹಾಗೂ ಸಂಸ್ಥಾಪಕ ಲಲಿತ್ ಮೋದಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಕಳೆದ ಕೆಲ ದಿನಗಳಿಂದ ಲಲಿತ್ ಮೋದಿ ಸ್ಥಿತಿ ಹದಗೆಟ್ಟಿದೆ.

  • Share this:

ಐಪಿಎಲ್‌ನ  (IPL) ಮಾಜಿ ಅಧ್ಯಕ್ಷ ಮತ್ತು ಸ್ಥಾಪಕ ಲಲಿತ್ ಮೋದಿ (Lalit Modi) ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಲಲಿತ್ ಮೋದಿ ಅವರು ಬಾಲಿವುಡ್ (Bollywood) ನಟಿ ಸುಶ್ಮಿತಾ ಸೇನ್ (Sushmita Sen) ಅವರೊಂದಿಗಿನ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದರು. ಇವರಿಬ್ಬರ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅದೇ ರೀತಿ ಕಳೆದ ಕೆಲ ದಿನಗಳಿಂದ ಲಲಿತ್ ಮೋದಿ ಸ್ಥಿತಿ ಹದಗೆಟ್ಟಿದೆ. ಲಲಿತ್ ಮೋದಿ ಅವರು ಒಂದು ವಾರದಿಂದ ವೆಂಟಿಲೇಟರ್​ ಸಹಾಯದಿಂದ ಉಸಿರಾಡುತ್ತಿದ್ದಾರೆ. ಲಲಿತ್ ಮೋದಿ ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ತಿಳಿಸಿದ್ದಾರೆ.


ಆಸ್ಪತ್ರೆಗೆ ದಾಖಲಾದ ಮೋದಿ:


ಶುಕ್ರವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಲಲಿತ್ ಮೋದಿ, 'ವೈದ್ಯರು ಮತ್ತು ಮಗ ಕುಶಾಲ್ ನನ್ನನ್ನು ಏರ್ ಆಂಬುಲೆನ್ಸ್ ಮೂಲಕ ಲಂಡನ್‌ಗೆ ಕರೆತಂದು ಚಿಕಿತ್ಸೆ ನೀಡಿದರು, ಹಾಗಾಗಿ ನಾನು ಸಾವಿನಿಂದ ಹಿಂತಿರುಗಲು ಸಾಧ್ಯವಾಯಿತು, ಆದರೆ ನಾನು ಇನ್ನೂ 24 ಗಂಟೆಗಳ ಕಾಲ ಕೃತಕ ಉಸಿರಾಟದಲ್ಲಿಯೇ ಇರಬೇಕು‘ ಎಂದು ಹೇಳಿದ್ದಾರೆ. ಇಬ್ಬರು ವೈದ್ಯರು ಮೂರು ವಾರಗಳ ಕಾಲ ಚಿಕಿತ್ಸೆ ನೀಡಿದ್ದು, ನಿರಂತರವಾಗಿ ನನ್ನ ಮೇಲೆ ನಿಗಾ ಇರಿಸಿದ್ದಾರೆ ಎಂದು ಲಲಿತ್ ಮೋದಿ ಹೇಳಿದ್ದಾರೆ.









View this post on Instagram






A post shared by Lalit Modi (@lalitkmodi)





ಒಬ್ಬ ವೈದ್ಯ ನನ್ನನ್ನು ಮೆಕ್ಸಿಕೋ ಸಿಟಿಯಲ್ಲಿ ನೋಡಿಕೊಂಡರು ಮತ್ತು ಇನ್ನೊಬ್ಬರು ಲಂಡನ್‌ನಲ್ಲಿ ನನ್ನನ್ನು ನೋಡಿಕೊಂಡರು. ಅವರನ್ನು ಹೊಗಳಲು ನನ್ನ ಬಳಿ ಪದಗಳಿಲ್ಲ ಎಂದು ಅವರು ಬರೆದಿದ್ದಾರೆ. ವಿಸ್ತಾರಾ ಜೆಟ್‌ಗೂ ಧನ್ಯವಾದಗಳು. ನಾನು ಎಲ್ಲರಿಗೂ ತುಂಬಾ ಕೃತಜ್ಞನಾಗಿದ್ದೇನೆ. ಎರಡು ವಾರಗಳ ಕಾಲ ಸಂಪೂರ್ಣವಾಗಿ ನನ್ನೊಂದಿಗಿದ್ದ ನನ್ನ ಮಗ, ಸ್ನೇಹಿತ ಮತ್ತು ನನ್ನ ಆತ್ಮೀಯ ಗೆಳೆಯ ಹರೀಶ್ ಸಾಳ್ವೆ ಅವರೆಲ್ಲರೂ ನನ್ನ ಕುಟುಂಬ ಮತ್ತು ನನ್ನ ಭಾಗವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.


ಐಪಿಎಲ್​ ಆರಂಭಿಸಿದ್ದ ಲಲಿತ್:


ಲಲಿತ್ ಮೋದಿ ಐಪಿಎಲ್ ಸಂಸ್ಥಾಪಕರು. ಅವರು 2005 ರಿಂದ 2010ರ ವರೆಗೆ ಬಿಸಿಸಿಐ ಉಪಾಧ್ಯಕ್ಷರಾಗಿದ್ದರು. ಅವರು 2008 ರಿಂದ 2010ರ ವರೆಗೆ IPL ನ ಅಧ್ಯಕ್ಷ ಮತ್ತು ಆಯುಕ್ತರಾಗಿದ್ದರು. 2010ರಲ್ಲಿ ರಿಗ್ಗಿಂಗ್ ಆರೋಪದ ಮೇರೆಗೆ ಲಲಿತ್ ಅವರನ್ನು ಐಪಿಎಲ್ ಕಮಿಷನರ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಬಿಸಿಸಿಐನಿಂದಲೂ ಅವರನ್ನು ಹೊರಹಾಕಲಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಲಲಿತ್ 2010ರಲ್ಲಿ ದೇಶ ತೊರೆದಿದ್ದರು.


ಇದನ್ನೂ ಓದಿ: IND vs SL: ನಾಳೆ ಭಾರತ-ಶ್ರೀಲಂಕಾ ಅಂತಿಮ ಹಣಾಹಣಿ, ಹೇಗಿದೆ ಪಿಚ್​ ರಿಪೋರ್ಟ್​? ಟೀಂ ಇಂಡಿಯಾ ದಾಖಲೆ ಏನು?


ಕಳೆದ ವರ್ಷ, ಲಲಿತ್ ಮೋದಿ ಅವರು ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರೊಂದಿಗಿನ ಸಂಬಂಧವನ್ನು ಘೋಷಿಸಿದಾಗ ಮತ್ತೊಮ್ಮೆ ಸುದ್ದಿಯಾದರು. ಜುಲೈ 14, 2022 ರಂದು, ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗಿನ ಸಂಬಂಧವನ್ನು Instagram ಪೋಸ್ಟ್‌ನಲ್ಲಿ ಬಹಿರಂಗಪಡಿಸುವಾಗ ಇಬ್ಬರ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಆದರೆ, ಐಪಿಎಲ್ ಸಂಸ್ಥಾಪಕರೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ಸುಶ್ಮಿತಾ ಸೇನ್ ಏನನ್ನೂ ಖಚಿತಪಡಿಸಿಲ್ಲ. ಕೆಲವು ದಿನಗಳ ನಂತರ, ಲಲಿತ್ ಮೋದಿ ತಮ್ಮ ಬಯೋದಿಂದ ಸುಶ್ಮಿತಾ ಸೇನ್ ಹೆಸರನ್ನು ತೆಗೆದುಹಾಕಿದರು, ಇಬ್ಬರ ಬ್ರೇಕಪ್​ ಆಗಿದೆ ಎಂಬ ಎಂಬ ವದಂತಿಯನ್ನು ಹುಟ್ಟುಹಾಕಿತ್ತು. ಇದೀಗ ಸುಶ್ಮಿತಾ ಅವರ ಸಹೋದರ ರಾಜೀವ್ ಸೇನ್ ಅವರು ಲಲಿತ್ ಮೋದಿ ಅವರ ಅನಾರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Published by:shrikrishna bhat
First published: