Vinod Kambli: ಖ್ಯಾತ ಮಾಜಿ ಕ್ರಿಕೆಟಿಗನಿಗೆ ಇದೆಂಥಾ ಸ್ಥಿತಿ! ಪಿಂಚಣಿ ದುಡ್ಡಲ್ಲಿ ಜೀವನ ನಡೆಸ್ತಿದ್ದಾರಂತೆ ಸಚಿನ್​ ಬೆಸ್ಟ್​ ಫ್ರೆಂಡ್​

ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರನ್ನು ಈಗಲೂ ಜನರು ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರ ಗೆಳೆಯ ಎಂದೇ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಆದರೆ ಇದೀಗ ಅವರು ತಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.

ವಿನೋದ್ ಕಾಂಬ್ಳಿ

ವಿನೋದ್ ಕಾಂಬ್ಳಿ

  • Share this:
ಕ್ರಿಕೆಟ್​ (Cricket) ಲೋಕವೆಂದರೆ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎಂದು ಎಲ್ಲರಿಗೂ ತಿಳಿದಿರುತ್ತಾರೆ. ಇದು ಹೌದು, ಐಪಿಎಲ್ (IPL) ಬಂದ ಮೇಲೆ ಪ್ರತಿ ಆಟಗಾರರೂ ಸಹ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಅದೇ ರೀತಿ ಭಾರತ ತಂಡದ (Team India) ಆಟಗಾರರಿಗಂತೂ ಸಂಭಾವನೆ ವಿಷಯದಲ್ಲಿ ಯಾವುದೇ ರೀತಿಯ ಕೊರತೆಗಳು ಕಾಡುತ್ತದೆ ಎಂದರೆ ಯಾರೂ ಸಹ ನಂಬುವುದು ಸುಳ್ಳು ಎನ್ನಲಾಗುತ್ತದೆ. ಬಿಸಿಸಿಐ (BCCI) ಸಹ ಶ್ರೀಮಂತ ಕ್ರಿಕೆಟ್​ ಮಂಡಳಿ ಸಾಲಿನಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಐಸಿಸಿ (ICC) ಸಹ ಮೀರಿಸುವಷ್ಟು ಬಿಸಿಸಿಐ ಬೆಳೆದು ನಿಂತಿದೆ. ಆದರೆ ಟೀಂ ಇಂಡಿಯಾದ ಮಾಜಿ ಆಟಗಾರರೊಬ್ಬರು ಈಗಲೂ ಸಹ ಪಿಂಚಣಿ ಹಣದಲ್ಲಿಯೇ ಬದುಕುತ್ತಿದ್ದಾರಂತೆ.

ಪಿಂಚಣಿಯಲ್ಲಿ ಬದುಕುತ್ತಿದ್ದಾರಂತೆ ವಿನೋದ್ ಕಾಂಬ್ಳಿ:

ಹೌದು, ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರನ್ನು ಈಗಲೂ ಜನರು ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರ ಗೆಳೆಯ ಎಂದೇ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ವಿನೋದ್ ಕಾಂಬ್ಳಿ ಎಡಗೈ ದಾಂಡಿಗನಾಗಿ ಭಾರತ ತಂಡದಲ್ಲಿ ಅಬ್ಬರಿಸಿದ್ದರು. ಅಲ್ಲದೆ ಕಾಂಬ್ಳಿ ಮತ್ತು ಸಚಿನ್ ಬಾಲ್ಯದಲ್ಲಿ 664 ರನ್​ಗಳ ಜೊತೆಯಾಟವಾಡಿ ದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ವಿನೋದ್ ಕಾಂಬ್ಳಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಅವರು ಈ ಬಾರಿ ತಮ್ಮ ಬಡತನದ ಕಾರಣದಿಂದ ಸುದ್ದಿಯಲ್ಲಿದ್ದಾರೆ.

ವಿನೋದ್ ಕಾಂಬ್ಳಿ ಅವರು ಇಂದಿಗೂ ಬಿಸಿಸಿಐ ಅವರು ನೀಡುತ್ತಿರುವ ಪಿಂಚಣಿಯಿಂದ ಬದುಕು ನಡೆಸುತ್ತಿದ್ದಾರಂತೆ. ಹೌದೇ ಎಂದು ಅಚ್ಚರಿಪಡಬೇಡಿ. ಇದು ಸತ್ಯ. ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಾನು ಇದೀಗ ನಿರುದ್ಯೋಗಿ ಆಗಿರುವೆ. ಹೀಗಾಗಿ ನಾನು ಮತ್ತು ನನ್ನ ಕುಟುಂಬದವರು ಇಂದಿಗೂ ಬಿಸಿಸಿಐ ನೀಡುತ್ತಿರುವ ಪಿಂಚಣಿ ಹಣದಲ್ಲಿಯೇ ಬದುಕುತ್ತಿದ್ದೇವೆ. ಬಿಸಿಸಿಐ ಇಂದಿಗೂ ಪಿಂಚಣಿ ಹಣವಾಗಿ ತಿಂಗಳಿಗೆ 30 ಸಾವಿರ ನೀಡುತ್ತಿದೆ. ಇದನ್ನು ಬಳಸಿಕೊಂಡು ನಾನು ಜೀವನ ನಡೆಸುತ್ತಿರುವೆ‘ ಎಂದು ಕಾಂಬ್ಳಿ ತಮ್ಮ ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯಕ್ಕೆ ದಿನಗಣನೆ, ಟಿಕೆಟ್​ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್​ ಫ್ಯಾನ್ಸ್!

ನನ್ನ ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ಗೊತ್ತು:

ಇನ್ನು, ಮಾತನ್ನು ಮುಂದುವರೆಸಿ ಮಾತನಾಡಿರುವ ಅವರು, ‘ನನ್ನ ಈ ಪರಿಸ್ಥಿತಿ ಕುರಿತು ಸ್ವತಃ ಸಚಿನ್ ಅವರಿಗೆ ಗೊತ್ತು. ಹೀಗಾಗಿ ಅವರು ನನಗೆ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಕೆಲಸ ನೀಡಿದರು. ಆತ ನನ್ನ ಒಳ್ಳೆಯ ಸ್ನೇಹಿತ. ಸಚಿನ್ ನನ್ನ ಬೆಂಬಲಕ್ಕೆ ಯಾವಾಗಲೂ ನಿಲ್ಲುತ್ತಾರೆ. ಕೋಚಿಂಗ್ ಮೂಲಕ ಯುವ ಆಟಗಾರರಿಗೆ ಸಹಾಯ ಮಾಡಲು ನಾನು ಇಷ್ಟಪಡುತ್ತೇನೆ‘ ಎಂದು ಹೇಳಿದ್ದಾರೆ.

ಕಾಂಬ್ಳಿ ವೃತ್ತಿ ಜೀವನ:

ವಿನೋದ್ ಕಾಂಬ್ಳಿ 1990 ರ ದಶಕದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು ಮತ್ತು ದೀರ್ಘಕಾಲದವರೆಗೆ ತಂಡದ ಭಾಗವಾಗಿದ್ದರು. ODIಗಳಲ್ಲಿ 32.59 ಸರಾಸರಿ ಹೊಂದಿರುವ ವಿನೋದ್ ಕಾಂಬ್ಳಿ, ಭಾರತಕ್ಕಾಗಿ 17 ಟೆಸ್ಟ್‌ಗಳಲ್ಲಿ 54.2 ರ ಸರಾಸರಿಯಲ್ಲಿ 1,084 ರನ್ ಗಳಿಸಿದ್ದಾರೆ. ಅವರು 104 ODIಗಳಲ್ಲಿ 32.59 ಸರಾಸರಿಯಲ್ಲಿ 2,477 ರನ್ ಗಳಿಸಿದರು. ಮಾಜಿ ಕ್ರಿಕೆಟ್ ಆಟಗಾರರಾಗಿರುವ ವಿನೋದ್ ಕಾಂಬ್ಳಿ ಸಚಿನ್ ತೆಂಡೊಲ್ಕರ್ ಜೊತೆಗೆ ಶಾಲಾ ಕ್ರಿಕೆಟ್​ನಲ್ಲಿ 664 ರನ್​ಗಳ ಜೊತೆಯಾಟ ಆಡಿ ಪ್ರಸಿದ್ಧಿ ಹೊಂದಿದ್ದರು, ಆದರೆ ಅವರು ತಮ್ಮ ನಿರೀಕ್ಷಿತ ಸಾಧನೆಯ ಮಟ್ಟವನ್ನು ತಲುಪಲಿಲ್ಲ.

ಇದನ್ನೂ ಓದಿ: Asia Cup 2022: ಇಂಡಿಯಾ-ಪಾಕ್​ ಮ್ಯಾಚ್​ ಬಗ್ಗೆ ಹಿಂಗ್ಯಾಕ್​ ಅಂದ್ರು ದಾದಾ? ಕ್ರಿಕೆಟ್​ ನೋಡೋ ರೀತಿ ಬದಲಾಯಿಸಿಕೊಳ್ಳಿ ಅಂತ ಎಚ್ಚರಿಕೆ

ಸೈಬರ್ ವಂಚನೆಗೆ ತುತ್ತಾಗಿದ್ದ ಕಾಂಬ್ಳಿ:

ಇನ್ನು ಕೆಲವು ತಿಂಗಳುಗಳ ಹಿಂದಷ್ಟೇ ತಮ್ಮ ಖಾತೆಯಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಹಣ ವಂಚನೆಯಾಗಿದೆ ಎಂದು ವಿನೋದ್ ಕಾಂಬ್ಳಿ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದರು. ಹಣ ವಿಥ್‌ಡ್ರಾ ಆಗಿರುವ ಬಗ್ಗೆ ಫೋನ್‌ಗೆ ನೋಟಿಫೀಕೇಷನ್‌ ಬಂದ ಕೂಡಲೇ ಎಚ್ಚೆತ್ತುಕೊಂಡ ವಿನೋದ್‌ ಕಾಂಬ್ಳಿ ಪೊಲೀಸರಿಗೆ ಕರೆ ಮಾಡಿದ್ದಾರೆ ಹಾಗೂ ಬ್ಯಾಂಕ್‌ಗೆ ವಿಷಯ ತಿಳಿಸಿ ತಮ್ಮ ಖಾತೆಯನ್ನು ಬ್ಲ್ಯಾಕ್‌ ಮಾಡಿಸಿಕೊಂಡಿದ್ರು. ಬಳಿಕ ಪೊಲೀಸರ ಸಹಕಾರದಿಂದ ಕಾಂಬ್ಳಿ ಹಣವನ್ನು ಮರಳಿ ಪಡೆದಿದ್ದರು.
Published by:shrikrishna bhat
First published: