• Home
  • »
  • News
  • »
  • sports
  • »
  • BCCI President: ಬಿಸಿಸಿಐ ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್‌ ಬಿನ್ನಿ ಆಯ್ಕೆ

BCCI President: ಬಿಸಿಸಿಐ ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್‌ ಬಿನ್ನಿ ಆಯ್ಕೆ

ರೋಜರ್ ಬಿನ್ನಿ

ರೋಜರ್ ಬಿನ್ನಿ

BCCI President: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಧ್ಯಕ್ಷರಾಗಿ ಆಯ್ಕೆ ಆಗಿರುವುದಾಗಿ ತಿಳಿದುಬಂದಿದೆ.  ಗಂಗೂಲಿ ಕಳೆದ 3 ವರ್ಷಗಳಿಂದ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ ಮತ್ತು ಇಂದು ನಡೆದ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (MGM) ಬಿನ್ನಿ ಅವರು ಮುಂದಿನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಎಂದು ವರದಿಯಾಗಿದೆ. 

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಭಾರತದ 1983ರ ವಿಶ್ವಕಪ್ ವಿಜೇತ ತಂಡದ  ಸದಸ್ಯ ರೋಜರ್ ಬಿನ್ನಿ (Roger Binny) ಅವರು ಸೌರವ್ ಗಂಗೂಲಿ (Sourav Gangul) ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಧ್ಯಕ್ಷರಾಗಿ ಆಯ್ಕೆ ಆಗಿರುವುದಾಗಿ ತಿಳಿದುಬಂದಿದೆ.  ಗಂಗೂಲಿ ಕಳೆದ 3 ವರ್ಷಗಳಿಂದ ಬಿಸಿಸಿಐ ಅಧ್ಯಕ್ಷರಾಗಿದ್ದರು. ಆದರೆ ಇಂದು ನಡೆದ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (MGM) ಬಿನ್ನಿ ಅವರು ಮುಂದಿನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಎಂದು ವರದಿಯಾಗಿದೆ.  ಇನ್ನು, ಮೂಲಗಳ ಮಾಹಿತಿ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ರೋಜರ್‌ ಬಿನ್ನಿ ಮತ್ತು ಕಾರ್ಯದರ್ಶಿಯಾಗಿ ಜಯ್ ಶಾ ಆಯ್ಕೆ ಆಗಿದ್ದಾರೆ. ಈ ಮೂಲಕ ಜಯ್ ಶಾ ಮತ್ತೊಮ್ಮೆ ಮೊದಲ ಸ್ಥಾನದಲ್ಲಿಯೇ ಮುಂದುವರೆಯಲಿದ್ದಾರೆ.


ಬಿಸಿಸಿಐ ಅಧ್ಯಕ್ಷರಾಗಿ ಬಿನ್ನಿ ಆಯ್ಕೆ:


ಹೌದು, ಅನೇಕ ದಿನಗಳ ಕುತೂಹಲಕ್ಕೆ ಒಂದರ್ಥದಲ್ಲಿ ಇಂದು ತೆರೆ ಎಳೆದಂತಾಗಿದೆ. ಕೊನೆಗೂ ಬಿಸಿಸಿಐ 36ನೇ BCCI ಅಧ್ಯಕ್ಷರಾಗಿ ರೋಜರ್ ಬಿನ್ನಿ ಆಯ್ಕೆ ಆಗಿದ್ದಾರೆ. ಅದರಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಸತತ ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಉಳಿದಂತೆ ರಾಜೀವ್‌ ಶುಕ್ಲಾ ಉಪಾಧ್ಯಕರಾಗಿ ಆಯ್ಕೆ ಆಗಿದ್ದಾಗಿ ತಿಳಿದುಬಂದಿದೆ.ಬಿಸಿಸಿಐನ ನೂತನ ಅಧಿಕಾರಿಗಳ ಪಟ್ಟಿ:


ಅಧ್ಯಕ್ಷ: ರೋಜರ್‌ ಬಿನ್ನಿ
ಕಾರ್ಯದರ್ಶಿ: ಜಯ ಶಾ (ಎರಡನೇ ಅವಧಿ)
ಖಜಾಂಚಿ: ಆಶಿಶ್‌ ಶೆಲಾರ್‌
ಉಪಾಧ್ಯಕ್ಷ: ರಾಜೀವ್‌ ಶುಕ್ಲಾ
ಜಂಟಿ ಕಾರ್ಯದರ್ಶಿ: ದೇವಜಿತ್‌ ಸಾಯ್ಕಿಯ
ಐಪಿಎಲ್‌ ಮುಖ್ಯಸ್ಥ: ಅರುಣ್ ಧುಮಾಲ್‌


ಇದನ್ನೂ ಓದಿ: T20 World Cup 2022: ಬ್ಯಾಟ್ಸ್​ಮನ್​ಗಳಿಗೆ ತಲೆನೋವಾದ ಆಸೀಸ್​ ಮೈದಾನಗಳು​, ಹೇಗಿದೆ ಭಾರತ-ಪಾಕ್​ ಪಂದ್ಯದ ಪಿಚ್ ರಿಪೋರ್ಟ್?


ಐಸಿಸಿ ಕುರಿತು ಯಾವುದೇ ಚರ್ಚೆಯಾಗಿಲ್ಲ:


ಬಿಸಿಸಿಐ ನೂತನ ಅಧ್ಯಕ್ಷರಾದ ರೋಜರ್ ಬಿನ್ನಿ ಕುರಿತು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮಾತನಾಡಿದ್ದು, ‘ರೋಜರ್ ಬಿನ್ನಿ ಬಹಳ ಒಳ್ಳೆಯ ಮನುಷ್ಯ. ನಾನು ಅವರೊಂದಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ ಮತ್ತು ನಮ್ಮಲ್ಲಿ ಉತ್ತಮ ನೆನಪುಗಳಿವೆ. ಐಸಿಸಿ ಅಧ್ಯಕ್ಷ ಸ್ಥಾನದ ಕುರಿತು ಇಂದು ಯಾವುದೇ ಚರ್ಚೆ ನಡೆದಿಲ್ಲ, ಮಂಡಳಿ ನಂತರ ನಿರ್ಧರಿಸಲಿದೆ‘ ಎಂದು ಹೇಳಿದ್ದಾರೆ.


1983ರ ವಿಶ್ವಕಪ್ ತಂಡದ ಸದಸ್ಯ ಬಿನ್ನಿ:


ಇನ್ನು, ಕನ್ನಡಿಗ ರೋಜರ್ ಬಿನ್ನಿ, ಭಾರತದ ಪರ ಒಟ್ಟು 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಬ್ಯಾಟಿಂಗ್‌ನಲ್ಲಿ 23.06 ಸರಾಸರಿಯಲ್ಲಿ 830 ರನ್ ಗಳಿಸಿದ್ದು, 5 ಅರ್ಧಶತಕ ಸಿಡಿಸಿದ್ದಾರೆ. ಅದಲ್ಲದೇ 72 ಏಕದಿನ ಪಂದ್ಯಗಳ ಮೂಲಕ  16.13 ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ ಮತ್ತು 1 ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ ಬಿನ್ನಿ  27 ಟೆಸ್ಟ್  ಗಳಿಂದ 47 ವಿಕೆಟ್ ಪಡೆದಿದ್ದರೆ 2 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು 72 ಏಕದಿನ ಪಂದ್ಯಗಳಿಂದ 77 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ನಲ್ಲಿ ಬಿಗ್​ ಟ್ವಿಸ್ಟ್, ಭಾರತ-ಪಾಕ್​ ಪಂದ್ಯ ನಡೆಯುವುದು ಡೌಟ್​?


ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರಾ ಗಂಗೂಲಿ?:


ಇನ್ನು, ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಸೌರವ್ ಗಂಗೂಲಿ ನಡೆ ಏನಿರಲಿದೆ ಎಂದು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಇದರ ನಡುವೆ ದಾದಾ ಮುಂದೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಐಸಿಸಿ ಮುಖ್ಯಸ್ಥನ ಸ್ಥಾನಕ್ಕೆ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸಹ  ಸ್ಪರ್ಧಿಸುವ ಸಾಧ್ಯತೆ ಇದೆ. ಐಸಿಸಿ ಮುಖ್ಯಸ್ಥನ ಸ್ಥಾನ ಸಿಗದೇ ಇದ್ದರೆ, ಗಂಗೂಲಿ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಎರಡನೇ ಅವಧಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

Published by:shrikrishna bhat
First published: