ಟೀಂ ಇಂಡಿಯಾದ ಮಾಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ!

ಭಾರತದ ಪರವಾಗಿ 2 ಏಕದಿನ ಪಂದ್ಯಗಳನ್ನು ಆಡಿರುವ ಅಮಿತ್ ಭಂಡಾರಿ ಐದು ವಿಕೆಟ್​ಗಳನ್ನು ಕಬಳಿಸಿದ್ದರು. 2000 ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಪದಾರ್ಪಣೆ ಮಾಡಿದ್ದ ಬಲಗೈ ಬೌಲರ್ ಅಬ್ದುಲ್ ರಜಾಕ್ ಮತ್ತು ವಾಸೀಂ ಅಕ್ರಂ ಅವರ ವಿಕೆಟ್​ ಪಡೆಯುವ ಮೂಲಕ ಹೊಸ ಭರವಸೆ ಮೂಡಿಸಿದ್ದರು.

zahir | news18
Updated:February 11, 2019, 7:24 PM IST
ಟೀಂ ಇಂಡಿಯಾದ ಮಾಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ!
@patrika
zahir | news18
Updated: February 11, 2019, 7:24 PM IST
ಟೀಂ ಇಂಡಿಯಾದ ಮಾಜಿ ಬೌಲರ್​ ಅಮಿತ್ ಭಂಡಾರಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ದೆಹಲಿಯ ಸೇಂಟ್​ ಸ್ಟೀಫನ್ ಗ್ರೌಂಡ್​ಗೆ ಆಗಮಿಸಿದ ಅಪರಿಚಿತ ಕಿಡಿಗೇಡಿಗಳು ಮಾಜಿ ಬೌಲರ್​ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಅಮಿತ್ ಭಂಡಾರಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಸೇಂಟ್​ ಸ್ಟೀಫನ್ ಮೈದಾನದಲ್ಲಿ ಅಂಡರ್​ 23 ಕ್ರಿಕೆಟ್​ ಟೀಂ ಟ್ರಯಲ್​ ಪಂದ್ಯ ನಡೆಯುತ್ತಿತ್ತು. ಈ ವೇಳೆ ಮೈದಾನಕ್ಕೆ ಆಗಮಿಸಿದ ಯುವಕರ ಗುಂಪೊಂದು ಅಮಿತ್​ ಭಂಡಾರಿ ಜೊತೆ ವಾದಕ್ಕಿಳಿದಿದೆ. ಮಾತಿನ ಚಕಮಕಿ ನಡುವೆ ಕಬ್ಬಿಣದ ರಾಡ್, ಹಾಕಿ ಸ್ಟಿಕ್​ಗಳಿಂದ ಅಮಿತ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನು ನೋಡಿದ ಸಹೋದ್ಯೋಗಿಗಳು ಸಹಾಯ ಧಾವಿಸುತ್ತಿದ್ದಂತೆ ಆರೋಪಿಗಳು ಕಾಲ್ಕಿತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಹಲ್ಲೆಯಿಂದ ಅಮಿತ್ ಭಂಡಾರಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದಿಲ್ಲಿಯ ಸಂತ ಪರಮಾನಂದ  ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು, 7 ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ.

ದೆಹಲಿ ಡಿಸ್ಟ್ರಿಕ್ಟ್​ ಕ್ರಿಕೆಟ್​ ಅಸ್ಸೋಸಿಎಷನ್​ ಸೀನಿಯರ್​ ಸೆಲೆಕ್ಷನ್​ ಕಮಿಟಿ ಚೇರ್​ಮನ್ ಆಗಿರುವ ಅಮಿತ್​ ಭಂಡಾರಿ ಅವರ ಮೇಲಿನ ಹಲ್ಲೆಗೂ ತಂಡದ ಆಯ್ಕೆಗೂ ಸಂಬಂಧವಿದೆ ಎನ್ನಲಾಗುತ್ತಿದೆ. ಏಕೆಂದರೆ ಇತ್ತೀಚೆಗೆ ದೆಹಲಿ ಅಂಡರ್ 23 ತಂಡವನ್ನು ಆಯ್ಕೆ ಮಾಡಲಾಗಿತ್ತು.​ ಇದೇ ವಿಚಾರವಾಗಿ ಹಲ್ಲೆ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತಂಡದಿಂದ ಕೈ ಬಿಡಲಾಗಿದ್ದ ಮೂವರು ಆಟಗಾರರು ಈ ತಂಡದಲ್ಲಿದ್ದರು ಎಂದು ಹೇಳಲಾಗಿದೆ.

ಭಾರತದ ಪರವಾಗಿ 2 ಏಕದಿನ ಪಂದ್ಯಗಳನ್ನು ಆಡಿರುವ ಅಮಿತ್ ಭಂಡಾರಿ ಐದು ವಿಕೆಟ್​ಗಳನ್ನು ಕಬಳಿಸಿದ್ದರು. 2000 ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಪದಾರ್ಪಣೆ ಮಾಡಿದ್ದ ಬಲಗೈ ಬೌಲರ್ ಅಬ್ದುಲ್ ರಜಾಕ್ ಮತ್ತು ವಾಸೀಂ ಅಕ್ರಂ ಅವರ ವಿಕೆಟ್​ ಪಡೆಯುವ ಮೂಲಕ ಹೊಸ ಭರವಸೆ ಮೂಡಿಸಿದ್ದರು. ಆದರೆ ಆ ಸಮಯದಲ್ಲಿ ಅತಿರಥ ಮಹಾರಥರಂತಹ ಬೌಲರ್​ಗಳನ್ನು ಹೊಂದಿದ್ದ ಟೀಂ ಇಂಡಿಯಾದಿಂದ ಹೊರಗುಳಿಯುವುದು ಅಮಿತ್​ ಭಂಡಾರಿಗೆ ಅನಿವಾರ್ಯವಾಗಿತ್ತು.

ಇದನ್ನೂ ಓದಿ: VIRAL VIDEO: ಧೋನಿಯ ದೇಶಾಭಿಮಾನಕ್ಕೆ ಭಾರತೀಯರು ಫುಲ್ ಫಿದಾ..!

2004 ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದ ಅಮಿತ್ ಭಂಡಾರಿ 31 ರನ್ ನೀಡಿ 3 ವಿಕೆಟ್​ಗಳನ್ನು ಕಬಳಿಸಿದ್ದರು. ಆ ಬಳಿಕ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿಯಬೇಕಾಯಿತು. ರಣಜಿಯಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸಿದ್ದ ಅಮಿತ್ ಭಂಡಾರಿ ಸೆಹ್ವಾಗ್ ಮತ್ತು ಗಂಭೀರ್​ ಅವರ ಒಡನಾಡಿಯಾಗಿದ್ದರು.

ಇದನ್ನೂ ಓದಿ: BSNL ನೇಮಕಾತಿ: 40 ಸಾವಿರ ವೇತನದ 198 ಹುದ್ದೆಗಳಿಗೆ ಅರ್ಜಿ ಆಹ್ವಾನ
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...