ಇಂಗ್ಲೆಂಡ್ ಮಹಿಳಾ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಸಾರಾ ಟೇಲರ್ (Sarah Taylor) ಸಲಿಂಗಕಾಮಿ ಎಂದು ಗೇಲಿ ಮಾಡುತ್ತಿದ್ದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಸಾರಾ ಇತ್ತೀಚೆಗೆ ತನ್ನ ಸಂಗಾತಿ ಡಯಾನಾ ಗರ್ಭಧಾರಣೆಯ (Pregnancy) ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅನೇಕ ಜನರು ಈ ಸುದ್ದಿಯಿಂದ ಸಂತೋಷಪಟ್ಟರೆ ಅನೇಕ ಜನರು ಅದನ್ನು ತೀವ್ರವಾಗಿ ಅಪಹಾಸ್ಯ ಮಾಡಿದ್ದರು. ಸಾರಾ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಒಂದರ ನಂತರ ಒಂದರಂತೆ ಟ್ವೀಟ್ ಮಾಡುವ ಮೂಲಕ ಟ್ರೋಲ್ ಮಾಡುವವರಿಗೆ ಸರಿಯಾದ ಉತ್ತರ ನೀಡಿದ್ದಾರೆ.
ಕೊಹ್ಲಿಗೆ ಪ್ರಪೋಸ್ ಮಾಡಿದ ಆಟಗಾರ್ತಿ:
ಹೌದು, ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿಯನ್ನು ಪ್ರಪೋಸ್ ಮಾಡಿದ ಕ್ರಿಕೆಟ್ ಆಟಗಾರ್ತಿಯೇ ಈ ಸಾರಾ ಟೇಲರ್. ಇದರ ನಂತರ, ಸಾರಾ ಬಹಳ ಜನಪ್ರಿಯರಾಗಿದ್ದರು. ಸಾರಾ 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಇವರು ಲೆಸ್ಬಿಯನ್ ಆಗಿರುವುದರಿಂದ ತನ್ನ ಪ್ರೇಯಸಿ ಜೊತೆ ಇದ್ದು, ಇದೀಗ ಸಾರಾ ಪ್ರೇಯಸಿ ತಾಯಿಯಾಗಲಿದ್ದಾರೆ.
Being a mother has always been my partner's dream. The journey hasn't been an easy one but Diana has never given up. I know she will be the best mum and I'm so happy to be a part of it x
19 weeks to go and life will be very different ! 🤍🌈 pic.twitter.com/9bvwK1Yf1e
— Sarah Taylor (@Sarah_Taylor30) February 21, 2023
ಇದನ್ನೂ ಓದಿ: Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್ ನಟನ ಮೇಲೆ ಕ್ರಶ್ ಆಗಿತ್ತಂತೆ!
19 ವಾರಗಳಲ್ಲಿ ಮಗುವಿಗೆ ಜನ್ಮ:
ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸಂಗಾತಿ ಡಯಾನಾ ಜೊತೆಗಿನ ಫೋಟೋವನ್ನು ಹಂಚಿಕೊಂಡ ಸಾರಾ ಟೇಲರ್, ನನ್ನ ಸಂಗಾತಿ ಡಯಾನಾ 19 ವಾರಗಳಲ್ಲಿ ಮಗುವಿಗೆ ಜನ್ಮ ನೀಡುತ್ತಾಳೆ. ಡಯಾನಾ ನಿಜವಾಗಿಯೂ ತಾಯಿಯಾಗಲು ಬಯಸಿದ್ದಳು ಎಂದು ಬರೆದಿದ್ದಾರೆ. ಇದರೊಂದಿಗೆ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಾನು ಅವಳನ್ನು ಪ್ರೀತಿಸುತ್ತೇನೆ ಮತ್ತು ನಾನು ಸಂತೋಷವಾಗಿದ್ದೇನೆ. ನಾವು ನಮ್ಮ ಮಗುವಿಗೆ ತುಂಬಾ ಪ್ರೀತಿಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಮಾನಸಿಕ ಆರೋಗ್ಯಕ್ಕಾಗಿ ಕ್ರಿಕೆಟ್‌ನಿಂದ ವಿರಾಮ:
ಸಾರಾ ಟೇಲರ್ ಮಾನಸಿಕ ಆರೋಗ್ಯವನ್ನು ಉಲ್ಲೇಖಿಸಿ 2016ರಲ್ಲಿ ಅನಿರ್ದಿಷ್ಟ ವಿರಾಮವನ್ನು ತೆಗೆದುಕೊಂಡಿದ್ದರು. ಆದರೆ, ಮುಂದಿನ ವರ್ಷ ಅಂದರೆ 2017ರಲ್ಲಿ ವಿಶ್ವಕಪ್‌ನಲ್ಲಿ ಪುನರಾಗಮನ ಮಾಡಿದರು. ಸಾರಾ ಆ ವಿಶ್ವಕಪ್‌ನಲ್ಲಿ ಸುಮಾರು 50ರ ಸರಾಸರಿಯಲ್ಲಿ ಒಟ್ಟು 396 ರನ್‌ಗಳನ್ನು ಗಳಿಸಿದ್ದರು. ಸಾರಾ ದಕ್ಷಿಣ ಆಫ್ರಿಕಾ ವಿರುದ್ಧ 147 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಇನ್ನು, ಒಂದು ಉತ್ತಮ ಉದ್ದೇಶಕ್ಕಾಗಿ ಸಾರಾ ಒಮ್ಮೆ ಬೆತ್ತಲೆ ಫೋಟೋ ಶೂಟ್ ಮಾಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ